Advertisement
ಏಪ್ರಿಲ್ ಮತ್ತು ಮೇನ ವಿವರಗಳನ್ನು ಸಂಸ್ಥೆ ಪರಿಶೀಲಿಸಿದೆ. ಎರಡನೇ ಅಲೆ ದೇಶಕ್ಕೆ ಅಪ್ಪಳಿಸಿದ ಬಳಿಕ ನಡೆಸಲಾಗಿರುವ ಮೊದಲ ಆನುವಂಶಿಕ ವಿಶ್ಲೇಷಣೆ (ಜಿನೋಮ್ ಸೀಕ್ವೆನ್ಸ್) ಇದಾಗಿದೆ. ಪೂರ್ಣ ಪ್ರಮಾಣದಲ್ಲಿ ಲಸಿಕೆ ಹಾಕಿಸಿಕೊಂಡ ವ್ಯಕ್ತಿಗೆ ಕೊರೊನಾ ದೃಢಪಟ್ಟರೆ ಅದನ್ನು “ಬ್ರೇಕ್‌ಥ್ರೂ ಇನೆ#ಕ್ಷನ್’ ಎಂದು ಹೆಸರಿಸಲಾಗಿದೆ. ಅಮೆರಿಕದ ರೋಗಗಗಳ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ) ನೀಡಿರುವ ವಾಖ್ಯೆಯ ಪ್ರಕಾರ “ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆದುಕೊಂಡರೂ ಅವರ ಪೈಕಿ ಕೆಲವರಿಗೆ ಸೋಂಕು ದೃಢಪಟ್ಟು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಗುತ್ತದೆ. ಆದರೆ ಅವರು ಅಸುನೀಗುವುದಿಲ್ಲ’ ಎಂದು ಹೇಳಿದೆ.
ಸೋಂಕು ದೃಢಪಡುವ ಸಂಖ್ಯೆ ಹೆಚ್ಚಾಗಿದ್ದರೂ, ಪೂರ್ಣ ಪ್ರಮಾಣದಲ್ಲಿ ಲಸಿಕೆ ಹಾಕಿಸಿಕೊಂಡವರು ಅಸುನೀಗಿರಲಿಲ್ಲ. ಅಧ್ಯಯನಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದ್ದ 63 ಕೇಸುಗಳ ಪೈಕಿ 36 ಪ್ರಕರಣಗಳಲ್ಲಿ ಲಸಿಕೆಯ 2 ಡೋಸ್ ಪಡೆದವರೇ ಆಗಿದ್ದರು. ಇತರ 27 ಮಂದಿ 1 ಡೋಸ್ ಲಸಿಕೆ ಪಡೆವರಾಗಿದ್ದರು. ಹತ್ತು ಮಂದಿ ಕೊವಿಶೀಲ್ಡ್ ಹಾಕಿಸಿಕೊಂಡಿದ್ದರೆ, ಇತರ 53 ಮಂದಿ ಕೊವ್ಯಾಕ್ಸಿನ್ ಪಡೆದುಕೊಂಡಿದ್ದರು. ಸೋಂಕಿನ ಬಿ.1.617 ರೂಪಾಂತರ ದೃಢಪಟ್ಟದ್ದು ಇಲ್ಲಿಯೇ. ನಂತರ ಅದು ಬಿ.1.617.1, ಬಿ.1.617.2 ಮತ್ತು ಬಿ.1.617.3 ಎಂಬ 3 ರೂಪಾಂತರಗಳನ್ನು ಪಡೆದುಕೊಂಡಿತು. ಇದನ್ನೂ ಓದಿ :ಕೇರಳ: 20 ಸಾವಿರ ಕೋಟಿ ಕೋವಿಡ್ ಬಜೆಟ್ : ವಿತ್ತ ಸಚಿವ ಕೆ.ಎನ್.ಬಾಲಗೋಪಾಲ್ ಹೇಳಿಕೆ
Related Articles
ಬಿ.1.1.7 ರೂಪಾಂತರಿ ಮಹಾರಾಷ್ಟ್ರದಲ್ಲಿ ಕಂಡುಬಂದಿತ್ತು. ಅದುವೇ ದೆಹಲಿಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ ಎಂದು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ.
Advertisement
ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡ ವಯಸ್ಸಿನವರ ಪೈಕಿ ಸರಿಮಾರು ವಯಸ್ಸು 37. ಈ ಪೈಕಿ 41 ಮಂದಿ ಪುರುಷರು ಮತ್ತು 22 ಮಂದಿ ಮಹಿಳೆಯರು. ಇತರ ಆರೋಗ್ಯ ಸಮಸ್ಯೆ ಇರುವವರನ್ನು ಆಯ್ಕೆ ಮಾಡಿಕೊಂಡಿರಲಿಲ್ಲ. ಈ ಗುಂಪಿನಲ್ಲಿ ಬಿ.1.617.2 ರೂಪಾಂತರಿ ಕೂಡ ದೃಢಪಟ್ಟಿತ್ತು. ಆಂಶಿಕವಾಗಿ ಮತ್ತು ಪೂರ್ಣ ಪ್ರಮಾಣದಲ್ಲಿ ಲಸಿಕೆ ಹಾಕಿಸಿಕೊಂಡವರ ಬಗ್ಗೆಯೂ ಅಧ್ಯಯನ ನಡೆಸಲಾಗಿದೆ.