Advertisement

Covid Scam: ನ್ಯಾ.ಡಿ.ಕುನ್ಹಾ ವರದಿ ವಿಪಕ್ಷಗಳ ಬೆದರಿಸುವ ತಂತ್ರ: ಬಿ.ವೈ.ವಿಜಯೇಂದ್ರ

02:22 AM Nov 11, 2024 | Team Udayavani |

ಬಳ್ಳಾರಿ: ಕೋವಿಡ್‌ ಅಕ್ರಮದ ಕುರಿತು ನ್ಯಾ. ಡಿ.ಕುನ್ಹಾ ನೀಡಿರುವ ವರದಿ ಬೆದರಿಕೆ ತಂತ್ರವಾಗಿದ್ದು, ಸಿಎಂ ಸಿದ್ದರಾಮಯ್ಯ  ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಬೇಕಾದಾಗ ಈ ರೀತಿ ಸಮಿತಿ ರಚನೆ ಮಾಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

Advertisement

ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಹತಾಶರಾಗಿದ್ದಾರೆ. ಕೋವಿಡ್‌ ವೇಳೆ ಪಿಪಿಇ ಕಿಟ್‌ ಖರೀದಿ ಸೇರಿ ಇತರೆ ವಸ್ತುಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ನ್ಯಾ| ಡಿ.ಕುನ್ಹಾ ಸಮಿತಿ ರಚಿಸಿದ್ದಾರೆ ಎಂದರು. ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು, ಕೋವಿಡ್‌ನ‌ಲ್ಲಿ 15 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎನ್ನುತ್ತಾರೆ. ಕಾಂಗ್ರೆಸ್‌ನವರು ತಮ್ಮ ತಪ್ಪು ಮುಚ್ಚಿಕೊಳ್ಳಲು ಸಮಿತಿ ರಚಿಸೋದು ಮೊದಲಿನಿಂದಲೂ ಮಾಡುತ್ತಿರುವ ತಂತ್ರ ಎಂದರು.

ಕಳೆದ ಮೂರು ದಿನಗಳಿಂದ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು ಸಂಡೂರಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಅವರೊಂದಿಗೆ ಮಾಜಿ ಸಚಿವ ಬಿ. ಶ್ರೀರಾಮುಲು ಸಹ ಇದ್ದು, ಇವರಿಬ್ಬರೂ ಪ್ರಚಾರಕ್ಕೆ ಹೋಗದಂತೆ ಬೆದರಿಸುವ ಹುನ್ನಾರ ಈ ಸಮಿತಿ ವರದಿಯ ಹಿಂದಿದೆ. ಇಂತಹ ಬೆದರಿಕೆಗಳಿಗೆ ಯಡಿಯೂರಪ್ಪನವರು ಹೆದರಲ್ಲ. ಅವರ ತಾಕತ್ತು ಏನೆಂಬುದು ಕಾಂಗ್ರೆಸ್‌ನವರಿಗಿಂತ ಸಿಎಂ ಸಿದ್ದರಾಮಯ್ಯರಿಗೇ ಚೆನ್ನಾಗಿ ಗೊತ್ತಿದೆ ಎಂದು ವಿಜಯೇಂದ್ರ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next