ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಮತ್ತೆ ಏಳು ಜನರಲ್ಲಿ ಸೋಂಕು ಪತ್ತೆಯಾಗಿರುವುದು ದೃಢವಾಗಿದೆ. ಇದರೊಂದಿಗೆ ವಿಜಯಪುರ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 17 ಕ್ಕೆ ಏರಿದೆ.
ಗುರುವಾರದ ಮಧ್ಯಾಹ್ನದ ಹೆಲ್ತ್ ಬುಲಿಟಿನ್ ನಲ್ಲಿ P-221 ಸಂಪರ್ಕದಲ್ಲಿದ್ದ ಮತ್ತೆ ಆರು ಜನರಿಗೆ ಹಾಗೂ P-228, P-232 ಸೋಂಕಿತರ ಸಂಪರ್ಕ ಹೊಂದಿದ್ದ ಒಂದೂವರೆ ವರ್ಷದ ಮಗುವಿಗೂ ಸೋಂಕು ದೃಢಪಟ್ಟಿದೆ. ಬುಧವಾರ ಸಂಜೆಯವರೆಗೆ 10 ಜನರಲ್ಲಿ ದೃಢವಾಗಿದ್ದ ಸೋಂಕು ಗುರುವಾರ 17 ಕ್ಕೆ ಏರಿಕೆಯಾಗಿದೆ.
ಗುರುವಾರ ಸೋಂಕು ದೃಡಪಟ್ಟವರನ್ನು P-221 ಸಂಪರ್ಕದಲ್ಲಿದ್ದ 12 ವರ್ಷದ ಬಾಲಕ P-305, 65 ವರ್ಷದ ವೃದ್ಧ P-306, 66 ವರ್ಷದ ವೃದ್ಧ P-307, 37 ವರ್ಷದ ವೃಕ್ತಿ P-308, 70 ವರ್ಷದ ವೃದ್ಧೆ P-309 ಹಾಗೂ 55 P-313 ಮಹಿಳೆ ಸೇರಿ ಒಂದೇ ಕುಟುಂಬ ಮತ್ತೆ 6 ಜನರಲ್ಲಿ ಸೋಂಕು ಪತ್ತೆಯಾಗಿದೆ.
ಗುರುವಾರ ಸೋಂಕು ದೃಡಪಟ್ಟ 7 ಜನರಲ್ಲಿ 55-70 ವರ್ಷ ವಯೋಮಿತಿಯ ಇಬ್ಬರು ಮಹಿಳೆಯರು, ಇಬ್ಬರು ಪುರುಷರು ಇದ್ದರೆ, ಒಂದೂವರೆ ವರ್ಷದ ಒಂದು ಹಸುಗೂಸು, ಓರ್ವ ಬಾಲಕ, ಓರ್ವ ಯುವಕನೂ ಸೇರಿದ್ದಾನೆ.
ರಾಜ್ಯದಲ್ಲಿ ಇಂದು 34 ಹೊಸ ಪ್ರಕರಣಗಳು ಖಚಿತವಾಗಿದ್ದು, ಸೋಂಕಿತರ ಸಂಖ್ಯೆ 313ಕ್ಕೆ ಏರಿಕೆಯಾಗಿದೆ.