Advertisement

ಕೋವಿಡ್‌ –ಒಮಿಕ್ರಾನ್‌ ಹೆಚ್ಚುತ್ತಿರುವ ಹಿನ್ನೆಲೆ: ಯಾವ ರಾಜ್ಯದಲ್ಲಿ ಏನೇನು ನಿರ್ಬಂಧ?

09:30 PM Jan 07, 2022 | Team Udayavani |

ನವದೆಹಲಿ: ಕರ್ನಾಟಕ, ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ರಾತ್ರಿ ಕರ್ಫ್ಯೂ, ವಾರಾಂತ್ಯದ ಲಾಕ್‌ಡೌನ್‌ ಸೇರಿದಂತೆ ಹಲವು ಕಠಿಣ ಕ್ರಮಗಳು ಮತ್ತೆ ಜಾರಿಯಾಗಿವೆ.

Advertisement

ಕೊರೊನಾ ಮತ್ತು ಒಮಿಕ್ರಾನ್‌ ನಿಯಂತ್ರಿಸುವ ನಿಟ್ಟಿನಲ್ಲಿ ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೈಗೊಂಡ ಕ್ರಮಗಳಿವು.

ಕರ್ನಾಟಕ
– ಶುಕ್ರವಾರದಿಂದ ವಾರಾಂತ್ಯ ಕರ್ಫ್ಯೂ ಶುರು.
– ರಾತ್ರಿ 10ರಿಂದ ಬೆಳಗ್ಗೆ 5 ಗಂಟೆ ವರೆಗೆ ನೈಟ್‌ ಕರ್ಫ್ಯೂ
– ಪಬ್‌, ಕ್ಲಬ್‌, ರೆಸ್ಟಾರೆಂಟ್‌ಗಳು, ಸಿನಿಮಾ ಹಾಲ್‌ಗ‌ಳು, ಹೋಟೆಲ್‌ಗ‌ಳಲ್ಲಿ ಶೇ.50ರ ಮಿತಿ

ದೆಹಲಿ
– ವಾರಾಂತ್ಯ ಕರ್ಫ್ಯೂ ಶುಕ್ರವಾರ ರಾತ್ರಿ ಶುರುವಾಗಿ, ಸೋಮವಾರ ಬೆಳಗ್ಗೆ ಮುಕ್ತಾಯ.
– ವಾರದ ದಿನಗಳಲ್ಲಿ ಅಗತ್ಯ ಸೇವೆಗಳಲ್ಲಿರುವವರು ಹೊರತಾಗಿ ಉಳಿದವರಿಗೆ ವರ್ಕ್‌ ಫ್ರಂ ಹೋಮ್‌.
– ಖಾಸಗಿ ಕಚೇರಿಗಳಲ್ಲಿ ಶೇ.50 ಸಿಬ್ಬಂದಿ ಮಿತಿ

ಉತ್ತರ ಪ್ರದೇಶ
– ಜ.6ರಿಂದಲೇ ರಾತ್ರಿ ಕರ್ಫ್ಯೂ ಜಾರಿ. ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆ
– 10ನೇ ತರಗತಿ ವರೆಗೆ ಎಲ್ಲಾ ಶಾಲೆಗಳಿಗೆ ಜ.14ರ ವರೆಗೆ ರಜೆ.
– ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ 100ರ ಮಿತಿ
– ಜಿಮ್‌, ಸ್ಪಾ, ಸಿನಿಮಾ ಹಾಲ್‌ಗ‌ಳಲ್ಲಿ ಶೇ.50ರ ಮಿತಿ

Advertisement

ಬಿಹಾರ
– ಜ.21ರ ವರೆಗೆ ರಾ.10ರಿಂದ ಬೆ.5ರ ವರೆಗೆ ರಾತ್ರಿ ಕರ್ಫ್ಯೂ
– 8ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಶಾಲೆಗಳಿಗೆ ರಜೆ. ಆನ್‌ಲೈನ್‌ ಕ್ಲಾಸ್‌ಗೆ ಅವಕಾಶ
– ಸರ್ಕಾರಿ, ಖಾಸಗಿ ಕಚೇರಿಗಳಿಗೆ ಶೇ.50ರ ಮಿತಿಯಲ್ಲಿ ಕರ್ತವ್ಯಕ್ಕೆ ಅವಕಾಶ
– ಜಿಮ್‌, ಸಿನಿಮಾ ಹಾಲ್‌, ಸ್ಟೇಡಿಯಂ, ಈಜುಕೊಳ ಬಂದ್‌. ರೆಸ್ಟಾರೆಂಟ್‌, ಧಾಬಾಗಳಿಗೆ ಶೇ.50ರ ಮಿತಿ

ಪಂಜಾಬ್‌
– ಬಾರ್‌, ಸಿನಿಮಾ ಹಾಲ್‌, ಮಾಲ್‌, ರೆಸ್ಟಾರೆಂಟ್‌, ಸ್ಪಾಗಳಲ್ಲಿ ಶೇ.50ರ ಮಿತಿ. ಅಲ್ಲಿನ ಸಿಬ್ಬಂದಿಗೆ ಲಸಿಕೆ ಪೂರ್ತಿ ಕಡ್ಡಾಯ
– ಈಜುಕೊಳ, ಜಿಮ್‌ ಮುಚ್ಚಲು ಆದೇಶ.
– ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಲಸಿಕೆ ಆದ ಸಿಬ್ಬಂದಿಗೆ ಕರ್ತವ್ಯಕ್ಕೆ ಅವಕಾಶ
– ಮಾಸ್ಕ್ ಇಲ್ಲದವರಿಗೆ ಕಚೇರಿಗಳಿಗೆ ಪ್ರವೇಶವಿಲ್ಲ.

ಛತ್ತೀಸ್‌ಗಡ
– ರಾ.10ರಿಂದ ಬೆ.6ರ ವರೆಗೆ ರಾತ್ರಿ ಕರ್ಫ್ಯೂ.
– ಪ್ರತಿಭಟನೆ, ರ್ಯಾಲಿಗಳು, ಎಲ್ಲಾ ರೀತಿಯ ಕಾರ್ಯಕ್ರಮಗಳಿಗೆ ನಿಷೇಧ.
– ರಾಜ್ಯಗಳ ಗಡಿ ಪ್ರದೇಶ ಮತ್ತು ರೈಲು- ಬಸ್‌ ನಿಲ್ದಾಣಗಳಲ್ಲಿ ಕೊರೊನಾ ಪರೀಕ್ಷೆ
– ಪಾಸಿಟಿವಿಟಿ ಪ್ರಮಾಣ ಹೆಚ್ಚು ಇರುವ ಜಿಲ್ಲೆಗಳಲ್ಲಿ ಶಾಲೆಗಳು, ಅಂಗನವಾಡಿ, ಗ್ರಂಥಾಲಯ, ಈಜುಕೊಳ್ಳ, ಮಾಲ್‌ಗ‌ಳು, ಸಿನಿಮಾ ಹಾಲ್‌ಗ‌ಳು, ರೆಸ್ಟಾರೆಂಟ್‌ಗಳು ಮುಚ್ಚಲು ಆದೇಶ

ಮಹಾರಾಷ್ಟ್ರ
– ಫೆ.15ರ ವರೆಗೆ ಎಲ್ಲಾ ಕಾಲೇಜು, ವಿವಿಗಳಲ್ಲಿ ಭೌತಿಕ ತರಗತಿಗಳು ರದ್ದು. ಫೆ.15ರ ವರೆಗೆ ಎಲ್ಲಾ ಪರೀಕ್ಷೆಗಳು ಆನ್‌ಲೈನ್‌ನಲ್ಲಿ.
– ಹೈರಿಸ್ಕ್ ದೇಶಗಳಿಂದ ಬರುವವರಿಗೆ ಆರ್‌ಟಿ-ಪಿಸಿಆರ್‌ ಪರೀಕ್ಷೆ.
– ಮದುವೆ, ಸಾಮಾಜಿಕ ಕಾರ್ಯಕ್ರಗಳಾದರೆ ಗರಿಷ್ಠ ಮಿತಿ 50 ಮಂದಿ.
– ಪ್ರವಾಸಿ ಸ್ಥಳಗಳು, ಬೀಚ್‌ಗಳಲ್ಲಿ ಸೆಕ್ಷನ್‌ 144

ಪುದುಚ್ಚೇರಿ
– ಮಾಸಾಂತ್ಯದ ವರೆಗೆ ರಾತ್ರಿ ಕಫ್ಯೂ.
– ಮಾಲ್‌ಗ‌ಳು, ಮಾರುಕಟ್ಟೆ, ಅಂಗಡಿ ಮುಂಗಟ್ಟುಗಳಲ್ಲಿ ಶೇ.50ರ ಮಿತಿ
– ಜಿಲ್ಲೆಗಳ ನಡುವಿನ ಸಾರ್ವಜನಿಕ ಸಾರಿಗೆಯಲ್ಲಿ ಶೇ.50ರ ಮಿತಿ

ಪಶ್ಚಿಮ ಬಂಗಾಳ
– ದೆಹಲಿ, ಮುಂಬೈನಿಂದ ವಾರಕ್ಕೆ ಮೂರು ದಿನ ವಿಮಾನಕ್ಕೆ ಅವಕಾಶ
– ಶಿಕ್ಷಣ ಸಂಸ್ಥೆಗಳು, ಮನರಂಜನಾ ಕೇಂದ್ರಗಳು, ಈಜುಕೊಳ, ಝೂ ಬಂದ್‌.
– ರೆಸ್ಟಾರೆಂಟ್‌, ಬಾರ್‌, ಚಿತ್ರಮಂದಿರಗಳಿಗೆ ಶೇ.50ರ ಮಿತಿ.
– ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಶೇ.50 ಸಿಬ್ಬಂದಿ ಮಿತಿ

ಹರ್ಯಾಣ
– ಸಿನಿಮಾ ಹಾಲ್‌, ಕ್ರೀಡಾ ಕಾಂಪ್ಲೆಕ್ಸ್‌ಗಳು, ಈಜುಕೊಳ ಬಂದ್‌. ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಶೇ.50ರ ಹಾಜರಿ.
– ಮಾರುಕಟ್ಟೆ, ಮಾಲ್‌ಗ‌ಳು ಸಂಜೆ 5 ಗಂಟೆಗೆ ವರೆಗೆ ಕಾರ್ಯನಿರ್ವಹಣೆ.
– ಬಾರ್‌ ಮತ್ತು ರೆಸ್ಟಾರೆಂಟ್‌ಗಳಲ್ಲಿ ಶೇ.50ರ ಮಿತಿ
– ಸಾರ್ವಜನಿಕ ಸ್ಥಳಗಳಿಗೆ ಪೂರ್ತಿ ಡೋಸ್‌ ಲಸಿಕೆ ಪಡೆದವರಿಗೆ ಪ್ರವೇಶ

ಜಾರ್ಖಂಡ್‌
– ಸ್ಟೇಡಿಯಂ, ಪಾರ್ಕ್‌ಗಳು, ಜಿಮ್‌, ಶಿಕ್ಷಣ ಸಂಸ್ಥೆಗಳು, ಪ್ರವಾಸಿ ಕೇಂದ್ರಗಳು ಬಂದ್‌.
– ಕಚೇರಿಗಳಲ್ಲಿ ಶೇ.50ರ ಮಿತಿ.
– ಮದುವೆ, ಅಂತ್ಯಸಂಸ್ಕಾರ ಮತ್ತು ಇತರ ಕಾರ್ಯಕ್ರಮಗಳಿಗೆ 100 ಮಂದಿ.
– ರಾತ್ರಿ 8ರ ಒಳಗಾಗಿ ಮಾರುಕಟ್ಟೆ ಬಂದ್‌. ಧಾರ್ಮಿಕ ಸ್ಥಳಗಳು, ಮೆಡಿಕಲ್‌ ಶಾಪ್‌ಗ್ಳು, ರೆಸ್ಟಾರೆಂಟ್‌ಗಳಿಗೆ ಅನುಮತಿ.

ಕೇರಳ
– ಮದುವೆ, ಅಂತ್ಯಕ್ರಿಯೆ, ರಾಜಕೀಯ ಕಾರ್ಯಕ್ರಮ, ಸಾಮಾಜಿಕ ಕಾರ್ಯಕ್ರಮಗಳಿಗೆ 75 ಮಂದಿ.
– ತೆರೆದ ಸ್ಥಳಗಳಲ್ಲಿ 150 ಮಂದಿಗೆ ಸೀಮಿತ.

ಒಡಿಶಾ
– 12ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ರಜೆ.
– ಬೆಳಗ್ಗೆ 5ರಿಂದ ರಾತ್ರಿ 9ರ ವರೆಗೆ ಎಲ್ಲಾ ಅಂಗಡಿ, ಶಾಪಿಂಗ್‌ ಕಾಂಪ್ಲೆಕ್ಸ್‌ಗಳು ಬಂದ್‌
– ಈಜು ಕೊಳ, ಮನರಂಜನೆಯ ಸ್ಥಳಗಳು, ಥಿಯೇಟರ್‌ಗಳು ರಾತ್ರಿ 9 ಗಂಟೆಗೆ ಮುಚ್ಚಬೇಕು.

ಸಿಕ್ಕಿಂ
– ಪಬ್‌, ಡಿಸ್ಕೋ, ಸಿನಿಮಾ ಹಾಲ್‌ಗ‌ಳು, ಫಾಸ್ಟ್‌ಫ‌ುಡ್‌ ಕೇಂದ್ರಗಳು, ಬೇಕರಿ ಶೇ.50ರ ಮಿತಿಯಲ್ಲಿ ನಿರ್ವಹಣೆ
– ಹೊಟೇಲ್‌, ಹೋಮ್‌ಸ್ಟೇ, ಗೆಸ್ಟ್‌ಹೌಸ್‌ಗಳೂ ಶೇ.50ರ ಮಿತಿಯಲ್ಲಿ ನಿರ್ವಹಣೆ
– ಎಲ್ಲಾ ಸಾಮಾಜಿಕ ಮತ್ತು ರಾಜಕೀಯ ಕಾರ್ಯಕ್ರಮಗಳಿಗೆ ಪೂರ್ವಾನುಮತಿ ಬೇಕು

ಮಣಿಪುರ
– ರಾತ್ರಿ 9ರಿಂದ ಬೆಳಗ್ಗೆ 4 ಗಂಟೆಯ ವರೆಗೆ ನೈಟ್‌ ಕರ್ಫ್ಯೂ.
– ಮಾಸಾಂತ್ಯದ ವರೆಗೆ ಜಿಲ್ಲಾಧಿಕಾರಿಗಳಿಗೆ ಪರಿಸ್ಥಿತಿ ನೋಡಿಕೊಂಡು ಕ್ರಮ ಕೈಗೊಳ್ಳಲು ಆದೇಶ

ರಾಜಸ್ಥಾನ
– ರಾತ್ರಿ ಕರ್ಫ್ಯೂ ಜಾರಿ. ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಹಾಕಿಸಲು ಆದ್ಯತೆ
– ಶಾಲೆ, ಕಾಲೇಜು, ಸಿನಿಮಾ ಹಾಲ್‌ಗ‌ಳಿಗೆ ಹೋಗುವವರಿಗೆ 2 ಡೋಸ್‌ ಲಸಿಕೆ ಕಡ್ಡಾಯ

ತಮಿಳುನಾಡು
– ರಾತ್ರಿ 10ರಿಂದ ಬೆಳಗ್ಗೆ 5 ಗಂಟೆಯ ವರೆಗೆ ನೈಟ್‌ ಕರ್ಫ್ಯೂ
– ಪ್ರತಿ ಭಾನುವಾರ ಲಾಕ್‌ಡೌನ್‌. ಈ ಅವಧಿಯಲ್ಲಿ ಹೊಟೇಲ್‌, ಮನರಂಜನಾ ಕೇಂದ್ರಗಳು, ಕಾರ್ಯಕ್ರಮಗಳಿಗೆ ಅವಕಾಶ ಇಲ್ಲ.
– ಅಗತ್ಯ ವಸ್ತುಗಳಿಗೆ ವಿನಾಯಿತಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next