ವಿಶ್ವಸಂಸ್ಥೆ : ಕೋವಿಡ್ ಸೋಂಕು ಹರಡುವಿಕೆ ಪ್ರಾರಂಭವಾದಗಿನಿಂದಲೂ ಸೀನಿನ ಕಣಗಳ ಮೂಲಕ ಕೋವಿಡ್ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತಲೇ ಬಂದಿದೆ. ಕೋವಿಡ್ ಹರಡ ಬೇಕಾದರೆ ನೀವು ಸೋಂಕು ಇರುವ ವ್ಯಕ್ತಿ ಬಳಿ ಹಲವು ನಿಮಿಷಗಳ ಕಾಲ ಹತ್ತಿರದಿಂದ ಮಾತನಾಡುವುದೋ ಅಥವಾ ಸಂಪರ್ಕಿಸುವುದು ಮಾಡಬೇಕು. ಇಲ್ಲದೇ ಇದ್ದಲ್ಲಿ ಸಾಮಾನ್ಯವಾಗಿ ಗಾಳಿಯಲ್ಲಿ ಕೋವಿಡ್ ಹರಡುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ.
ಒಂದು ವೇಳೆ ರೋಗಿ ಕೆಮ್ಮಿದರೆ ಅಥವಾ ಸೀನಿದರೂ ನೀವು ವ್ಯಕ್ತಿಯಿಂದ 6 ಅಡಿ ಅಂತದಲ್ಲಿದ್ದರೆ ಮತ್ತು ಮಾಸ್ಕ್ ಧರಿಸಿಕೊಂಡಿದ್ದರೆ ಯಾವುದೇ ಅಪಾಯವಿಲ್ಲ ಎಂದಿದ್ದಾರೆ. ಆದರೀಗ ಒಂದು ಸ್ಥಳದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೆಚ್ಚು ಹೊತ್ತು ಸೇರಿದಾಗ, ಅಲ್ಲಿನ ವೆಂಟಿಲೇಟರ್ ವ್ಯವಸ್ಥೆ ಚೆನ್ನಾಗಿರದಿದ್ದರೆ ಅಂತಹ ಸಂದರ್ಭದಲ್ಲಿ ಕೋವಿಡ್ ಗಾಳಿಯಲ್ಲಿ ಹರಡುತ್ತದೆ ಎಂದು ವಿಶ್ವ ಸಂಸ್ಥೆ ಹೇಳಿದೆ. ಕೋವಿಡ್ ಸೀನಿನ ಕಣಗಳ ಜತೆ ಕೆಳಗೆ ಬೀಳುತ್ತದೆಯೇ ಅಥವಾ ಗಾಳಿಯಲ್ಲಿ ತೇಲುತ್ತಿರುತ್ತದೆಯೋ ಎಂಬ ಪ್ರಶ್ನೆ ವಿಜ್ಞಾನಿಗಳನ್ನು ಕಾಡುತ್ತಿದೆ. ಚಿಕನ್ ಪೋಕ್ಸ್, ಟ್ಯೂಬರ್‌ಕ್ಲೋಸಿಸ್, ದಡಾರದಂತಹ ರೋಗದ ಸೂಕ್ಷ್ಮಾಣುಗಳು ಗಾಳಿ, ಧೂಳಿನಲ್ಲಿರಬಹುದು. ಆದರೆ ಫ್ಲ್ಯೂಶೀತ, ಕೆಮ್ಮು ಬಹಳ ಹತ್ತಿರದಿಂದ ಮಾತ್ರ ಹರಡಲು ಸಾಧ್ಯ. ಹಾಗಾಗಿ ದೂರದಲ್ಲಿದ್ದರೆ ಕೋವಿಡ್ ಸೋಂಕು ತಗುಲುವುದು ಸಾಧ್ಯವಿಲ್ಲ.
ಲಸಿಕೆ ಅಭಿವೃದ್ಧಿ, ಉಚಿತ ವಿತರಣೆಗೆ ದೇಶಗಳ ಚಿಂತನೆ : ರಿಯೊ ಡಿ ಜನೈರೊ: ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆಯ ಅಂತಿಮ ಹಂತದ ಕ್ಲಿನಿಕಲ್ ಪ್ರಯೋಗಗಳಿಗೆ ಬ್ರಜಿಲ್ ಅನುಮೋದನೆ ನೀಡಿದ್ದು, 4ನೇ ಹಂತದ ಮತ್ತೂಂದು ಲಸಿಕೆ ಅಧ್ಯಯನಕ್ಕೂ ಸಮ್ಮತಿ ಸೂಚಿಸಿದೆ.
ಅಮೆರಿಕದ ಜಾನ್ಸನ್ ಕಂಪನಿ, ಈ ಪ್ರಾಯೋಗಿಕ ಲಸಿಕೆಯನ್ನು ಬ್ರಜಿಲ್‌ನ ಏಳು ರಾಜ್ಯಗಳಲ್ಲಿ ನಡೆಸುತ್ತಿದ್ದು, 7 ಸಾವಿರ ಸ್ವಯಂ ಸೇವಕರ ಮೇಲೆ ಪ್ರಯೋಗ ನಡೆಸಿದೆ. ಅಷ್ಟೇ ಅಲ್ಲ, ವಿಶ್ವದಾದ್ಯಂತ 60 ಸಾವಿರ ವ್ಯಕ್ತಿಗಳ ಮೇಲೆ ಈ ಲಸಿಕೆಯನ್ನು ಪ್ರಯೋಗಿಸಿದೆ ಎಂದು ಬ್ರಜಿಲ್‌ನ ಆರೋಗ್ಯ ಇಲಾಖೆ ನಿಯಂತ್ರಣಾಧಿಕಾರಿ ಅನ್ವಿಸಾ ತಿಳಿಸಿದ್ದಾರೆ. ಆರೋಗ್ಯ ಇಲಾಖೆಯ ಅನುಮೋದನೆಗೆ ಕಳುಹಿಸುವ ಮುನ್ನ ಲಸಿಕೆಯನ್ನು ರ್‍ಯಾಂಡಮ್ ಪರೀಕ್ಷೆ, ನಿಯಂತ್ರಿತ ಮತ್ತು ಡಬಲ್-ಬ್ಲೈಂಡ್ ಎಂಬ ಮೂರು ಹಂತದಲ್ಲಿ ದೊಡ್ಡ ಪ್ರಮಾಣದಲ್ಲಿ ವ್ಯಕ್ತಿಗಳ ಮೇಲೆ ಪ್ರಯೋಗಿಸಿ ಪರೀಕ್ಷಿಸಲಾಗಿದೆ. ಉಚಿತವಾಗಿ ಲಸಿಕೆ ನೀಡುವುದಾಗಿ ಘೋಷಿಸಿದ ಆಸ್ಟ್ರೇಲಿಯಾ
ಮೆಲ್ಬರ್ನ್: ಕೋವಿಡ್ ಸೋಂಕು ಹೆಚ್ಚುತ್ತಿರುವುದರಿಂದ ಆಸ್ಟ್ರೇಲಿಯಾ ಲಸಿಕೆಗಾಗಿ ಬ್ರಿಟಿಷ್ ಔಷಧ ತಯಾರಿಕೆ ಕಂಪೆನಿ ಆಸ್ಟ್ರಾಜೆನೆಕಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಸುಮಾರು 2.5 ಕೋಟಿ ಮಂದಿಗೆ ಇದರಿಂದ ಲಸಿಕೆ ಸಿಗಲಿದೆ. ಆಸ್ಟ್ರಾಜೆನೆಕಾ ಆಕ್ಸ್‌ಫರ್ಡ್ ಸಂಸ್ಥೆ ಜತೆಗೂಡಿ ಲಸಿಕೆ ಅಭಿವೃದ್ಧಿಪಡಿಸುತ್ತಿದ್ದು ಅಂತಿಮ ಹಂತದಲ್ಲಿದೆ. ಒಂದು ವೇಳೆ ಲಸಿಕೆ ಮಾರುಕಟ್ಟೆ ಬರಲಿದ್ದರೆ ಆಸ್ಟ್ರೇಲಿಯಾಕ್ಕೂ ಲಸಿಕೆ ಆರಂಭದಲ್ಲಿಯೇ ಲಭ್ಯವಾಗಲಿದೆ. ಎಲ್ಲ ಆಸ್ಟ್ರೇಲಿಯನ್ನರಿಗೂ ಲಸಿಕೆ ನೀಡಲಾಗುವುದು.
ಆದರೆ ಆದ್ಯತಾ ವಲಯವನ್ನು ಪರಿಣತರ ಸಮಿತಿ ನಿರ್ಧರಿಸಲಿದೆ ಎಂದು ಅಲ್ಲಿನ ಆರೋಗ್ಯ ಸಚಿವರು ಹೇಳಿದ್ದಾರೆ. ಸದ್ಯ ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದಲ್ಲಿ ಕೋವಿಡ್ ಸೋಂಕು ಅತಿ ಹೆಚ್ಚಿದೆ.