Advertisement

ಕೊರೊನಾ ಸಂಕಷ್ಟದಲ್ಲಿ ಶಕ್ತಿ ಮೀರಿ ಸ್ಪಂದಿಸಿರುವೆ

07:12 PM May 27, 2021 | Team Udayavani |

ಚನ್ನರಾಯಪಟ್ಟಣ: ಕೊರೊನಾ ಸೋಂಕು ಮುಕ್ತವಾಗಿಸಲು ಅಧಿಕಾರಿಗಳೊಂದಿಗೆ ಜನರಸಹಕಾರವೂ ಮುಖ್ಯ.ಕೊರೊನಾ ಎರಡನೇ ಅಲೆ ಹಾಸನಜಿಲ್ಲೆಯ ಜನ ಜನಜೀವನದಲ್ಲಿಕೋಲಾಹಲವನ್ನೇ ಸೃಷ್ಟಿಸುತ್ತಿದೆ.

Advertisement

ಪ್ರತಿದಿನವೂ ಸಾವಿರಾರು ಜನರು ಸೋಂಕಿಗೆತುತ್ತಾಗುತ್ತಿದ್ದಾರೆ. ಕೆಲವರು ಕೊರೊನಾಮಾರಿಗೆ ಬಲಿಯಾಗಿದ್ದು, ಹಲವು ಕುಟುಂಬಗಳುಅನಾಥ ಸ್ಥಿತಿಯಲ್ಲಿ. ಇಂತಹ ಸಂಕಷ್ಟದ ಸಮಯದಲ್ಲಿವಿವಿಧ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಜನರಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ.

ಹಾಗೆಯೇ ಜಿಲ್ಲೆಯಸ್ಥಳೀಯ ಸಂಸ್ಥೆಗಳನ್ನು ವಿಧಾನಪರಿಷತ್‌ನಲ್ಲಿ ಪ್ರತಿನಿಧಿಸುವಚನ್ನರಾಯಪಟ್ಟಣ ತಾಲೂಕಿನವರಾದಎಂ.ಎ.ಗೋಪಾಲಸ್ವಾಮಿ ಅವರೂಸೋಂಕಿತರಿಗೆ ಹಾಗೂ ಲಾಕ್‌ಡೌನ್‌ನಿಂದ ತೊಂದರೆಗೆ ಸಿಲುಕಿದವರಿಗೆನೆರವು ನೀಡುತ್ತಿದ್ದಾರೆ. ಜನರಿಗೆಸ್ಪಂದಿಸುತ್ತಿರುವ ತಮ್ಮ ನಿಲುವಿನ ಬಗ್ಗೆಉದಯವಾಣಿಯ ವಿಶೇಷ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಕೊರೊನಾ ಸೋಂಕಿನ ಪ್ರಕರಣಗಳಲ್ಲಿ ಹಾಸನ ಜಿಲ್ಲೆರಾಜ್ಯದಲ್ಲಿ ದಾಖಲೆಯನ್ನೇ ನಿರ್ಮಿಸುತ್ತಿದೆಯಲ್ಲಾ?

ಹೌದು, ಬೆಂಗಳೂರು ನಂತರ ಕೊರೊನಾ ಪಾಸಿಟಿವಿಟಿದರ ಹಾಸನ ಜಿಲ್ಲೆಯಲ್ಲಿಯೇ ಹೆಚ್ಚಿತ್ತು. ಜನತಾ ಲಾಕ್‌ಡೌನ್‌ ಜಾರಿ ನಂತರ ಮಹಾನಗರಗಳ ಲ್ಲಿ ದ್ದ ವರು ತಮ್ಮ ಗ್ರಾಮಗಳಿಗೆಹಿಂತಿ ರು ಗಿದ್ದರಿಂದ ಸೋಂಕುಹೆಚ್ಚಿತು. ಸರ್ಕಾರ ಪ್ರಾರಂಭದಲ್ಲಿಕಠಿಣ ನಿರ್ಬಂಧಗಳನ್ನು ಜಾರಿಮಾಡ ಲಿಲ್ಲ. ಚಿಕಿತ್ಸಾ ವ್ಯವಸ್ಥೆಯೂಸಮ ರ್ಪಕವಾಗಿ ನಡೆಯಲಿಲ್ಲ.ನೈಜ ಕಾರಣವನ್ನು ತಜ್ಞರುಹೇಳಬೇಕು. ಆದರೆ, ಆತಂಕಕಾರಿಯಾಗಿ ಜಿಲ್ಲೆಯಲ್ಲಿ ಕೊರೊನಾಸೋಂಕು ಹರಡುತ್ತಿರುವುದು ದಿಗ್ಭ್ರಮೆ ಮೂಡಿಸಿದೆ.

Advertisement

ಚಿಕಿತ್ಸೆಗಾಗಿ ಜಿಲ್ಲೆಯಲ್ಲಿ ನಿಮ್ಮ ಸಲಹೆ, ಸಹಕಾರ ಹೇಗೆ?

ಕೊರೊನಾ ಎದುರಿಸುವ ನಿಟ್ಟಿನಲ್ಲಿ ಇಡೀ ಜಿಲ್ಲೆಯನ್ನುಪ್ರತಿನಿಧಿಸುವ ನಾನು ಜಿಲ್ಲೆಯ ಎಂಟು ತಾಲೂಕುಗಳಲ್ಲಿಪ್ರವಾಸ ಕೈಗೊಂಡು, ತಹಶೀಲ್ದಾರ್‌, ತಾಪಂ ಇಒ,ತಾಲೂಕು ಆರೋಗ್ಯಾಧಿಕಾರಿ ಸೇರಿದಂತೆ ಅಧಿಕಾರಿಗಳೊಂದಿಗೆ ಸಭೆ ಮಾಡಿದೆ. ಆಶಾ, ಅಂಗನವಾಡಿಕಾರ್ಯಕರ್ತೆಯರ ಸಭೆಯನ್ನೂ ನಡೆಸಿ ಅವರಿಗೆಧೈರ್ಯ ತುಂಬಿ ಗ್ರಾಮೀಣ ಭಾಗದಲ್ಲಿ ಸೋಂಕಿತರಿಗೆಚಿಕಿತ್ಸೆ ಕೊಡಿಸಲು ಸಹಕಾರ ನೀಡಿದ್ದೇನೆ. ಸಚಿವರುಗಳಸಭೆಯಲ್ಲಿ ಜಿಲ್ಲಾಡಳಿತ ಏನೇನು ಮಾಡಬೇಕು ಎಂಬಸಲಹೆ ನೀಡಿದ್ದೇನೆ. ಜಿಲ್ಲೆಯನ್ನು ಕೊರೊನಾಮುಕ್ತವಾಗಿಸಲು ಅಧಿಕಾರಿಗಳ, ಜನಪ್ರತಿನಿಧಿಗಳಪ್ರಯತ್ನದ ಜೊತೆಗೆ ಜನರ ಸಹಕಾರವೂ ಮುಖ್ಯ.

ವೈದ್ಯ ಸಿಬ್ಬಂದಿ ಕೊರತೆ ಇದೆ ಎಂಬ ದೂರಿದೆಯಲ್ಲಾ?

ಹೌದು, ಜಿಲ್ಲೆಯಲ್ಲಿ 65ಕ್ಕೂ ವೈದ್ಯರು, 150 ಕ್ಕೂ ಹೆಚ್ಚುಶುಶ್ರೂಷಕರ ಕೊರತೆ ಇದೆ. ಹಾಗಾಗಿ ಇರುವವೈದ್ಯರಲ್ಲಿ ಹೆಚ್ಚು ಕೆಲಸ ಮಾಡಿಸುವ ಪರಿಸ್ಥಿತಿನಿರ್ಮಾಣ ಆಗಿದೆ. ಈಗಾಗಲೇ ಜಿಲ್ಲೆಯಲ್ಲಿ ಆರೋಗ್ಯಮಂತ್ರಿ ಡಾ.ಸುಧಾಕರ್‌, ಡಿಸಿಎಂ ಅಶ್ವತ್ಥ ನಾರಾಯಣ,ಜಿಲ್ಲಾ ಉಸ್ತುವಾರಿ ಮಂತ್ರಿ ಕೆ.ಗೋಪಾಲಯ್ಯನೇತೃತ್ವದಲ್ಲಿ ಸಭೆ ಮಾಡಿದ್ದು, ವೈದ್ಯರ ಕೊರತೆನೀಗಿಸುವುದಾಗಿ ಹೇಳಿದ್ದಾರೆ.

ವೈದ್ಯರ ನೆಡೆ ಗ್ರಾಮೀಣಕಡೆ ಎಂದು ಗ್ರಾಮೀಣ ಭಾಗದಲ್ಲಿ ಕೊರೊನಾಕಟ್ಟಿಹಾಕಲು ಸರ್ಕಾರ ಕಾರ್ಯಕ್ರಮ ಜಾರಿ ಮಾಡಿದೆ.ಇದರ ಫ‌ಲಶೃತಿಯನ್ನು ಕಾದು ನೋಡಬೇಕು.

ಸೋಂಕಿತರ, ಸಂಕಷ್ಟಕ್ಕೆ ಸಿಲುಕಿದವರಿಗೆ ನಿಮ್ಮಕೊಡುಗೆ ಏನು ?

ವಿರೋಧ ಪಕ್ಷದ ಶಾಸಕನಾಗಿ ಸರ್ಕಾರವನ್ನುದೋಷಣೆ ಮಾಡಿ ಪುಕ್ಕಟ್ಟೆ ಪ್ರಚಾರ ತೆಗೆದುಕೊಳ್ಳುವುದಕ್ಕೆನಾನು ಸೀಮಿತವಾಗಿಲ್ಲ. ಜಿಲ್ಲಾಡಳಿತದ ಕ್ರಮಗಳಿಗೆಸಹಕರಿಸುವುದರ ಜೊತೆಗೆ ಸಂಕಷ್ಟಕ್ಕೆ ಸಿಲುಕಿದವರಿಗೆನನ್ನ ಕೈಲಾದ ಸಹಾಯ ಮಾಡುತ್ತಿದ್ದೇನೆ.ಈಗಾಗಲೇ 5000 ಮಂದಿ ಸೋಂಕಿತರಿಗೆ ಔಷಧಿಕಿಟ್‌ಗಳನ್ನು ವೈಯಕ್ತಿಕವಾಗಿ ನೀಡಿದ್ದೇನೆ.

ಜಿಲ್ಲಾಉಸ್ತುವಾರಿ ಮಂತ್ರಿ ಗೋಪಾಲಯ್ಯ ಅವರಸಮ್ಮುಖದಲ್ಲಿಯೇ ಆರೋಗ್ಯ ಇಲಾಖೆ ಮೂಲಕತಲಪಿಸುವ ವ್ಯವಸ್ಥೆ ಮಾಡಿದ್ದೇನೆ. ಇನ್ನು ಯುವಕಾಂಗ್ರೆಸ್‌ ಕಾರ್ಯಕರ್ತರ ತಂಡ ರಚಿಸಿ ನಿತ್ಯವೂಅಗತ್ಯ ಇರುವ ಕಡೆ ಉಪಹಾರ, ಊಟನೀಡಲಾಗುತ್ತಿದೆ. ಕೊರೊನಾ ಕೇರ್‌ ಸೆಂಟರ್‌(ಸಿಸಿಸಿ)ಯಲ್ಲಿ ಇರುವ ಪ್ರತಿಯೊಬ್ಬ ಸೋಂಕಿತರಿಗೆವಾರಕ್ಕೆ ಒಂದು ಕೆ.ಜಿ. ಹಣ್ಣುಗಳನ್ನುನೀಡಲಾಗುತ್ತಿದೆ.

10 ಸಾವಿರ ಎನ್‌-95 ಮಾಸ್ಕ್, 4 ಸಾವಿರ ಫೇಸ್‌ಶೀಲ್‌ª, 5 ಸಾವಿರ ಸ್ಯಾನಿಟೈಸರ್‌ ಬಾಟಲಿ ನೀಡಲಾಗಿದೆ.ಇನ್ನು ಲಾಕ್‌ಡೌನ್‌ ಇರುವುದಿರಂದ ಗ್ರಾಮೀಣಭಾಗದಲ್ಲಿ ಇರುವ ಬಿಪಿ ಹಾಗೂ ಮಧುಮೇಹಿರೋಗಿಗಳಿಗೆ ನಿರಂತರವಾಗಿ ಪಡೆಯತ್ತಿರುವಔಷಧಿಯನ್ನು ಮನೆ ಬಾಗಿಲಿಗೆ ಉಚಿತವಾಗಿತಲುಪಿಸುವ ಕೆಲಸವನ್ನು ನಮ್ಮ ತಂಡ ಮಾಡುತ್ತಿದೆ.

ಚಿಕಿತ್ಸಾ ವ್ಯವಸ್ಥೆಯಲ್ಲಿ ಜಿಲ್ಲಾಡಳಿತದ ಕ್ರಮತೃಪ್ತಿಕರವಾಗಿವೆಯೇ?

ಕೊರೊನಾ ಸಂಕಷ್ಟದ ಸಮಯದಲ್ಲಿ ರಾಜಕೀಯಮಾಡುವಷ್ಟು ಕೀಳು ಮಟ್ಟಕ್ಕೆ ಇಳಿಯುವುದಿಲ್ಲ.ಸರ್ಕಾರ, ಜಿಲ್ಲಾಡಳಿತದ ಕ್ರಮಗಳ ಬಗ್ಗೆ ಜನರೇನಿರ್ಧಾರ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿನಾನು ಜಿಲ್ಲಾಡಳಿತಕ್ಕೆ ಸಹಕಾರ ಹಾಗೂ ವೈಯಕ್ತಿಕವಾಗಿಕೈಲಾದ ನೆರವು ನೀಡುವ ಮೂಲಕ ಸ್ಪಂದಿಸುತ್ತಿದ್ದೇನೆ.

ಶಾಮಸುಂದರ್ಕೆ. ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next