Advertisement

ನರ್ಸಿಂಗ್‌ ಪರೀಕ್ಷಾರ್ಥಿಗಳಿಗೆ ಸೋಂಕು

03:24 PM Jan 19, 2022 | Team Udayavani |

ಬಳ್ಳಾರಿ: ನರ್ಸಿಂಗ್‌ ಪರೀಕ್ಷೆ ಬರೆಯಲೆಂದು ಉತ್ತರ ಭಾರತದಿಂದ ಈಚೆಗೆನಗರಕ್ಕೆ ಬಂದಿದ್ದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ 68 ಜನರಿಗೆ ಕೋವಿಡ್‌ಸೋಂಕು ದೃಢಪಟ್ಟಿದ್ದು, ಸಂಬಂಧಪಟ್ಟ ಕಾಲೇಜು, ಲಾಡ್ಜ್ಗಳ ವಿರುದ್ಧಇಲ್ಲಿನ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣದಾಖಲಾಗಿದೆ.ಉತ್ತರ ಭಾರತದ ಹರ್ಯಾಣ, ಪಂಜಾಬ್‌,ಬಿಹಾರ್‌, ಕಲ್ಕತ್ತಾ, ಚಂಡೀಘಡ, ಗುಜರಾತ್‌ಸೇರಿ ವಿವಿಧ ರಾಜ್ಯಗಳಿಂದ ನರ್ಸಿಂಗ್‌ಪರೀಕ್ಷೆ ಬರೆಯಲೆಂದು ಜ. 16ರಂದುಭಾನುವಾರ ಬಳ್ಳಾರಿ ನಗರಕ್ಕೆ ಆಗಮಿಸಿದ್ದರು.

Advertisement

ನಗರದ ರೈಲು ನಿಲ್ದಾಣದಿಂದ ಲಾಡ್ಜ್ಗಳತ್ತಸಾಮಾಜಿಕ ಅಂತರವಿಲ್ಲದೇ ಗುಂಪುಗುಂಪಾಗಿತೆರಳುತ್ತಿದ್ದ ಇವರನ್ನು ಗಡಗಿ ಚನ್ನಪ್ಪ ವೃತ್ತದಲ್ಲಿ ಸಂಚಾರಿ ಪೊಲೀಸರು ತಡೆದು,ಎಲ್ಲಿಂದ ಬಂದಿದ್ದೀರಿ? ಬಂದಿರುವ ಉದ್ದೇಶವೇನು? ಕೋವಿಡ್‌ ಲಸಿಕೆಪಡೆದಿದ್ದೀರಾ? ನೆಗೆಟಿವ್‌ ರಿಪೋರ್ಟ್‌ ಇದೆಯಾ? ಎಂದೆಲ್ಲ ಪ್ರಶ್ನಿಸಿದ್ದಾರೆ.ಆಗ ಇವರ ಬಳಿ ಯಾವುದೇ ನೆಗೆಟಿವ್‌ ರಿಪೋರ್ಟ್‌ ಇಲ್ಲ. ಕೇವಲಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಕೋವಿಡ್‌ ಲಸಿಕೆ ಪಡೆದಿರುವವರದಿಯನ್ನು ಇಟ್ಟುಕೊಂಡಿದ್ದರು.ಇದರಿಂದ ಎಚ್ಚೆತ್ತುಕೊಂಡ ಜಿಲಾಡಳಿತ, ಆರೋಗ್ಯ ಇಲಾಖೆ ಕೂಡಲೇಸ್ಥಳಕ್ಕೆ ತಾಲೂಕು ಆರೋಗ್ಯಾ ಧಿಕಾರಿಗಳು ಭೇಟಿ ನೀಡಿ ಅವರೆಲ್ಲರನ್ನೂಕೋವಿಡ್‌ ಟೆಸ್ಟ್‌ಗೆ ಒಳಪಡಿಸಲಾಯಿತು.

ಪರಿಣಾಮ ಅವರಲ್ಲಿ 68ವಿದ್ಯಾರ್ಥಿಗಳಲ್ಲಿ ಕೋವಿಡ್‌ ಸೋಂಕು ದೃಢಪಟ್ಟಿದ್ದು ಆತಂಕ ಮೂಡಿಸಿದೆ.ಕಾಲೇಜು, ಲಾಡ್ಜ್ಗಳ ವಿರುದ್ಧ ಪ್ರಕರಣ: ನರ್ಸಿಂಗ್‌ ಪರೀಕ್ಷೆ ಬರೆಯಲುಹೊರ ರಾಜ್ಯಗಳಿಂದ ಬಂದಿದ್ದ 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪರೀಕ್ಷೆಬರೆಯಲು ಪರೀûಾ ಕೇಂದ್ರಗಳು, ತಂಗಲು ಅವಕಾಶ ಮಾಡಿಕೊಟ್ಟ14 ಕಾಲೇಜು, 10 ಲಾಡ್ಜ್ಗಳ ವಿರುದ್ಧ ಜಿಲ್ಲಾ ಧಿಕಾರಿ ಪವನ್‌ಕುಮಾರ್‌ಮಾಲಪಾಟಿ ಸೂಚನೆ ಮೇರೆಗೆ ತಹಶೀಲ್ದಾರ್‌ ರೆಹಾನ್‌ ಪಾಶಾ ಅವರುವಿವಿಧ ಪೊಲೀಸ್‌ ಠಾಣೆಗಳಲ್ಲಿ ದೂರು ನೀಡಿದ್ದಾರೆ.

ಆದರೆ ಗಾಂ ಧಿನಗರ,ಕೌಲ್‌ಬಜಾರ್‌ ಮತ್ತು ಗ್ರಾಮೀಣ ಠಾಣೆಗಳಲ್ಲಿ ಮಾತ್ರ ಮರ್ಚೆಡ್‌ ರೆಸಿಡೆನ್ಸಿ,ವಿದ್ಯಾ ಕಂಫರ್ಟ್ಸ್, ವಿಷ್ಣುಪ್ರಿಯಾ ಲಾಡ್ಜ್, ಚಾಲುಕ್ಯ ಲಾಡ್ಜ್, ಬಿಡಿಡಿಎಸ್‌,ಅಮಲಾ ನಿವಾಸ್‌, ಮಾತಾ ಫಂಕ್ಷನ್‌ ಹಾಲ್‌ ಸೇರಿ ಆರು ಲಾಡ್ಜ್ಗಳು,ಇಂಡಿಯನ್‌ ನರ್ಸಿಂಗ್‌ ಕಾಲೇಜು, ಪೂಜಾ ಸ್ಕೂಲ್‌ ಆಫ್‌ ನರ್ಸಿಂಗ್‌, ನ್ಯೂಎರಾ ನರ್ಸಿಂಗ್‌ ಕಾಲೇಜು, ಕರ್ನಾಟಕ ನರ್ಸಿಂಗ್‌ ಕಾಲೇಜು, ಶರಭೇಶ್ವರನರ್ಸಿಂಗ್‌ ಕಾಲೇಜು, ಬೆಸ್ಟ್‌ ಸ್ಕೂಲ್‌ ಆಫ್‌ ನರ್ಸಿಂಗ್‌ ಸೇರಿ ಒಟ್ಟು ಏಳುಕಾಲೇಜುಗಳ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಎಸ್‌ಪಿ ಸೈದುಲುಅಡಾವತ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆದರೆ, ಇನ್ನುಳಿದ ಲಾಡ್ಜ್,ಕಾಲೇಜುಗಳನ್ನು ಏಕೆ ಕೈಬಿಡಲಾಗಿದೆ ಎಂಬುದು ಸ್ಪಷ್ಟವಾಗಬೇಕಿ¨

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next