Advertisement

ಬೂಸ್ಟರ್‌ ಡೋಸ್‌ ಲಸಿಕಾಕರಣಕ್ಕೆ ಚಾಲನೆ

08:46 PM Jan 11, 2022 | Team Udayavani |

ಶಿವಮೊಗ್ಗ: ಜಿಲ್ಲೆಯಾದ್ಯಂತ ಮೊದಲನೇಹಂತದಲ್ಲಿ ಆರೋಗ್ಯ ಕಾರ್ಯಕರ್ತರು,ಮುಂಚೂಣಿ ಕಾರ್ಯಕರ್ತರು ಮತ್ತು60 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆಕೋವಿಡ್‌-19 ಬೂಸ್ಟರ್‌ ಡೋಸ್‌ ಲಸಿಕೆನೀಡಲಾಗುತ್ತಿದ್ದು, ಎಲ್ಲ ಅರ್ಹರು ಈಬೂಸ್ಟರ್‌ ಡೋಸ್‌ ಪಡೆಯಬೇಕೆಂದು ಸಚಿವಕೆ.ಎಸ್‌. ಈಶ್ವರಪ್ಪ ಕರೆ ನೀಡಿದರು.ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳಸಂಸ್ಥೆಯಲ್ಲಿ ಸೋಮವಾರ ಕೋವಿಡ್‌-19 ಬೂಸ್ಟರ್‌ಡೋಸ್‌ ಲಸಿಕಾಕರಣಕ್ಕೆಚಾಲನೆ ನೀಡಿ ಅವರು ಮಾತನಾಡಿದರು.

Advertisement

ಆರ್‌ಸಿಎಚ್‌ಒ ಡಾ|ನಾಗರಾಜ ನಾಯ್ಕಮಾತನಾಡಿ, ಈಗಾಗಲೇ ಲಸಿಕೆ ಪಡೆದಿರುವಆರೋಗ್ಯ ಕಾರ್ಯಕರ್ತರು, ಮುಂಚೂಣಿಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟಅಸ್ವಸ್ಥತೆ ಹೊಂದಿರುವ ಫಲಾನುಭವಿಗಳುಕೋವಿಡ್‌ ಪೋರ್ಟಲ್‌ನಲ್ಲಿನೋಂದಾಯಿಸಿದಂತೆ 2 ನೇ ಡೋಸ್‌ ಪಡೆದ9 ತಿಂಗಳ (39 ವಾರಗಳು) ನಂತರ ಬೂಸ್ಟರ್‌ಡೋಸ್‌ ಪಡೆಯಲು ಅರ್ಹರಿರುತ್ತಾರೆಎಂದರು. ಬೂಸ್ಟರ್‌ ಡೋಸ್‌ಗಾಗಿ ಯಾವುದೇಹೊಸ ಫಲಾನುಭವಿಗಳನ್ನು ಕೋವಿನ್‌ಪೋರ್ಟಲ್‌ನಲ್ಲಿ ನೋಂದಾಯಿಸುವಂತಿಲ್ಲ.

ಜಿಲ್ಲೆಯ ಎಲ್ಲ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿಉಚಿತವಾಗಿ ಲಸಿಕಾಕರಣ ನಡೆಸಲಾಗುತ್ತದೆಎಂದರು. ವಿ.ಪ. ಸದಸ್ಯರಾದ ಆಯನೂರುಮಂಜುನಾಥ್‌, ಡಿ.ಎಸ್‌. ಅರುಣ್‌,ಮಹಾನಗರಪಾಲಿಕೆ ಮಹೌಪೌರರಾದಸುನೀತಾ ಅಣ್ಣಪ್ಪ, ಉಸ್ತುವಾರಿಸಚಿವರ ಧರ್ಮಪತ್ನಿ ಜಯಲಕೀÒ$¾, ರಾಜ್ಯಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದಉಪಾಧ್ಯಕ್ಷ ಎಸ್‌.ದತ್ತಾತ್ರಿ, ಪಾಲಿಕೆಆಡಳಿತ ಪಕ್ಷದ ನಾಯಕಎಸ್‌.ಎನ್‌. ಚನ್ನಬಸಪ್ಪ,ಜಿಲ್ಲಾ ಧಿಕಾರಿ ಕೆ.ಬಿ. ಶಿವಕುಮಾರ್‌, ಸಿಮ್ಸ್‌ನಿರ್ದೇಶಕ ಡಾ| ಸಿದ್ದಪ್ಪ, ಮೆಗ್ಗಾನ್‌ ಬೋಧನಾಜಿಲ್ಲಾಸ್ಪತ್ರೆಯ ವೈದ್ಯಕೀಯ ಅ ಧೀಕ್ಷಕಡಾ| ಶ್ರೀಧರ್‌, ಜಿಲ್ಲಾ ಶಸ್ತÅಚಿಕಿತ್ಸಕಡಾ|ಸಿದ್ದನಗೌಡ, ಇತರರು ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next