Advertisement

100 ಕೋಟಿ ಡೋಸ್‌ ಐತಿಹಾಸಿಕ ಮೈಲಿಗಲ್ಲು

02:08 PM Oct 24, 2021 | Team Udayavani |

ಚಿಕ್ಕಮಗಳೂರು: ಕೇಂದ್ರ ಸರ್ಕಾರ ದೇಶದಲ್ಲಿ100 ಕೋಟಿ ಡೋಸ್‌ ಕೋವಿಡ್‌ ಲಸಿಕೆಗಳನ್ನುಉಚಿತವಾಗಿ ವಿತರಿಸುವ ಮೂಲಕ ಐತಿಹಾಸಿಕಮೈಲಿಗಲ್ಲು ಸ್ಥಾಪಿಸಿದೆ ಎಂದು ವಿಧಾನ ಪರಿಷತ್‌ಉಪಸಭಾಪತಿ ಎಂ.ಕೆ.ಪ್ರಾಣೇಶ್‌ ತಿಳಿಸಿದರು.

Advertisement

ನಗರದ ಬೇಲೂರು ರಸ್ತೆ ಜೂನಿಯರ್‌ಕಾಲೇಜು ಆವರಣದಲ್ಲಿ ಶನಿವಾರಭಾರತ 100 ಕೋಟಿ ಲಸಿಕೆ ವಿತರಣೆಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಬಿಜೆಪಿಯುವಮೋರ್ಚಾದಿಂದ ಕಾರ್ಯಕರ್ತರುಮತ್ತು ಕಾಲೇಜು ವಿದ್ಯಾರ್ಥಿಗಳು 100 ಸಂಖ್ಯೆರಚಿಸಿ ವಿಜಯೋತ್ಸವ ಆಚರಣೆಯಲ್ಲಿ ಅವರು ಮಾತನಾಡಿದರು.

ದೇಶದ ಪ್ರತಿಯೊಬ್ಬರು ಲಸಿಕೆ ಪಡೆದುಕೊಳ್ಳಬೇಕೆಂಬ ಉದ್ದೇಶದಿಂದಪ್ರಧಾನಮಂತ್ರಿ ನರೇಂದ್ರ ಮೋದಿ ಅವರುಬಡವರು, ಶ್ರೀಮಂತರು ಎಂಬ ಭೇದವಿಲ್ಲದೆಪ್ರತಿಯೊಬ್ಬರಿಗೂ ಲಸಿಕೆ ಲಭ್ಯವಾಗುವಂತೆಮಾಡಿದರು.

ಈ ಹಿನ್ನೆಲೆಯಲ್ಲಿ ಇಂದು ದೇಶದಲ್ಲಿ100 ಕೋಟಿ ಲಸಿಕೆ ವಿತರಿಸಲಾಗಿದ್ದು ದೇಶಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಿದೆ ಎಂದರು.

ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂದೀಪಹರವಿನಂಗಡಿ ಮಾತನಾಡಿ, ಪ್ರಧಾನಮಂತ್ರಿನರೇಂದ್ರ ಮೋದಿ ಅವರು ಹಂತ ಹಂತವಾಗಿಪ್ರತಿಯೊಬ್ಬರಿಗೂ ಲಸಿಕೆ ಸಿಗುವಂತೆ ಮಾಡಿದ್ದು,ಇಂದು 100 ಕೋಟಿ ಜನರಿಗೆ ಲಸಿಕೆ ವಿತರಿಸಿವಿಶ್ವದಲ್ಲೇ ಲಸಿಕೆ ವಿತರಣೆಯಲ್ಲಿ ದೊಡ್ಡ ಸಾಧನೆಮಾಡಿದೆ ಎಂದು ಹೇಳಿದರು.

Advertisement

ಲಸಿಕೆ ವಿತರಣೆಯಲ್ಲಿ ವೈದ್ಯರು,ಶುಶ್ರೂಷಕರು, ಆಶಾ ಕಾರ್ಯಕರ್ತರು,ಜನಪ್ರತಿನಿ ಗಳು, ಸ್ವಯಂ ಸೇವಕರು, ಪಕ್ಷದಕಾರ್ಯಕರ್ತರು ನಿರಂತರವಾಗಿ ಶ್ರಮಿಸಿದ್ದು,ಅವರೆಲ್ಲರ ಪರಿಶ್ರಮದಿಂದ ದೇಶ ಐತಿಹಾಸಿಕಮೈಲಿಗಲ್ಲು ಸಾ ಧಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಚ್‌.ಸಿ.ಕಲ್ಮುರಡಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿದೇವರಾಜ್‌ ಶೆಟ್ಟಿ, ಬಿಜೆಪಿ ಜಿಲ್ಲಾ ವಕ್ತಾರ ವರಸಿದ್ಧಿವೇಣುಗೋಪಾಲ್‌, ಯುವ ಮೋರ್ಚಾರಾಜ್ಯ ಕಾರ್ಯಕಾರಣಿ ಸದಸ್ಯ ಧನಿಕ್‌,ಮೂಡಿಗೆರೆ ಯುವ ಮೋರ್ಚಾ ಜಿಲ್ಲಾ ಪ್ರಧಾನಕಾರ್ಯದರ್ಶಿ ಸಂತೋಷ್‌ ಕೋಟ್ಯಾನ್‌,ಗ್ರಾಮಾಂತರ ಮಂಡಲ ಯುವ ಮೋರ್ಚಾಅಧ್ಯಕ್ಷರಾದ ಯತೀಶ್‌ ಇಂದಾವರ, ಜಿಲ್ಲಾಮಾದ್ಯಮ ಪ್ರಮುಖ್‌ ಸುಧಿಧೀರ್‌, ಆಶ್ರಯಸಮಿತಿ ಸದಸ್ಯ ರಾಜೇಶ್‌ ಕಲೊªಡ್ಡಿ, ಮಂಡಲಉಪಾಧ್ಯಕ್ಷರಾದ ದಿನೇಶ್‌ ಕೋಟೆ, ಜಿಲ್ಲಾಒಬಿಸಿ ಪ್ರಧಾನ ಕಾರ್ಯದರ್ಶಿ ಜಯರಾಮ್‌ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next