Advertisement

ಕೋವಿಡ್‌ ನಷ್ಟ ಸರ್ಕಾರವೇ ಭರಿಸಲಿ: ರಂಗನಾಥ್‌

01:56 PM Oct 24, 2021 | Team Udayavani |

ದಾವಣಗೆರೆ: ಕೋವಿಡ್‌ ಸಾಂಕ್ರಾಮಿಕದಿಂದಾಗಿಕಳೆದ ಒಂದೂವರೆ ವರ್ಷದಲ್ಲಿ ಸಮಾಜದ ಎಲ್ಲವರ್ಗದ ಜನರು ತೊಂದರೆಗೊಳಗಾಗಿದ್ದು ಕೇಂದ್ರಹಾಗೂ ರಾಜ್ಯ ಸರ್ಕಾರಗಳು ಜನಸಾಮಾನ್ಯರಿಗಾದ ಅರ್ಧದಷ್ಟು ನಷ್ಟ ಭರಿಸಬೇಕೆಂದು ಆಗ್ರಹಿಸಿ ಸಾಮಾಜಿಕ ಅಭಿವೃದ್ಧಿ ರಂಗ ನೇತೃತ್ವದಲ್ಲಿ ರಾಜ್ಯಹಾಗೂ ರಾಷ್ಟ್ರ ವ್ಯಾಪ್ತಿಯಲ್ಲಿ ನಿರಂತರ ಹೋರಾಟಮಾಡಲಾಗುವುದು ಎಂದು ಸಂಘಟನೆಯ ಸಂಸ್ಥಾಪಕಅಧ್ಯಕ್ಷ ಟಿ.ಎಲ್‌. ರಂಗನಾಥ್‌ ತಿಳಿಸಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಕೋವಿಡ್‌ ಸಾಂಕ್ರಾಮಿಕವನ್ನು ಸರ್ಕಾರಚುನಾವಣೆಗೆ ಎಲ್ಲ ಹಂತದಲ್ಲಿ ಅಧಿಕಾರಿಗಳು,ಪಕ್ಷದ ಕಾರ್ಯಕರ್ತರನ್ನು ನಿಯೋಜಿಸಿದಂತೆಕ್ರಮ ವಹಿಸಿ ಜಾಗೃತಿ ಮೂಡಿಸುವ ಮೂಲಕನಿಯಂತ್ರಿಸಬಹುದಿತ್ತು. ಕೇವಲ ಪೊಲೀಸರಿಂದಜಾಗೃತಿ ಮೂಡಿಸಿ ತಡೆಯಲು ಪ್ರಯತ್ನಿಸಿದ್ದುಸರಿಯಲ್ಲ. ಸರ್ಕಾರಗಳ ವೈಫಲ್ಯದಿಂದಾಗಿಯೇಕೋವಿಡ್‌ ಎಲ್ಲೆಡೆ ವ್ಯಾಪಕವಾಗಿ ಹಬ್ಬುವಂತಾಯಿತು.

ಈಗ ಸರ್ಕಾರವೇ ಜನಸಾಮಾನ್ಯರಿಗಾದ ನಷ್ಟಭರಿಸಬೇಕಾಗಿದೆ. ಕೆಲವು ವರ್ಗದ ಜನರಿಗೆ ಅಲ್ಪಸ್ವಲ್ಪಪರಿಹಾರಧನ ನೀಡಿದ್ದರೂ ಅದು ಸಮರ್ಪಕವಾಗಿನೀಡಿಲ್ಲ. ಎಲ್ಲರಿಗೂ ನಷ್ಟ ಪರಿಹಾರ ನೀಡಬೇಕುಎಂದು ಒತ್ತಾಯಿಸಿದರು.

ರೈತ ಮುಖಂಡ ಬನ್ನೂರು ರವಿಕುಮಾರ್‌ಮಾತನಾಡಿ, ಇಂದು ಕೇಂದ್ರ ಸರ್ಕಾರ ಘೋಷಿಸಿದಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಮೆಕ್ಕೆಜೋಳಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.ಬೆಂಬಲಬೆಲೆಗಿಂತ ಕಡಿಮೆ ದರದಲ್ಲಿ ಉತ್ಪನ್ನಖರೀದಿಸುವವರ ಮೇಲೆ ಕ್ರಿಮಿನಲ್‌ ಪ್ರಕರಣದಾಖೀಸಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ಇನ್ನೋರ್ವ ರೈತ ಮುಖಂಡ ಕೆ.ಸಿ. ಬಸಪ್ಪಮಾತನಾಡಿ, ಜಾನುವಾರುಗಳ ಕಾಲುಬಾಯಿರೋಗಕ್ಕೆ ಲಸಿಕೆ ಸಿಗದೆ ಜಾನುವಾರುಗಳುಸಾಯುತ್ತಿವೆ. ಕೂಡಲೇ ಲಸಿಕೆಗೆ ಕ್ರಮ ವಹಿಸಬೇಕು.ಲಸಿಕೆ ನೀಡುವುದರೊಳಗೆ ಸತ್ತ ಜಾನುವಾರುಗಳಿಗೆಪರಿಹಾರ ನೀಡಬೇಕು. ಈ ಬೇಡಿಕೆ ಇಟ್ಟುಕೊಂಡುಎರಡು ದಿನಗಳಲ್ಲಿ ಹೊನ್ನಾಳಿ ತಾಲೂಕಿನಲ್ಲಿ ಜಾನುವಾರುಗಳೊಂದಿಗೆ ಉಗ್ರ ಪ್ರತಿಭಟನೆನಡೆಸಲಾಗುವುದು ಎಂದು ತಿಳಿಸಿದರು.

Advertisement

ರೈತ ಪ್ರಮುಖ ಬಸವರಾಜಪ್ಪ ಮಾತನಾಡಿ,ಸರ್ಕಾರ ಕೂಡಲೇ ಪೆಟ್ರೋಲ್‌, ಡಿಸೇಲ್‌ ಹಾಗೂಅಡುಗೆ ಅನಿಲ ದರ ಕಡಿಮೆ ಮಾಡಬೇಕು. ಬೆಳೆ ಸಾಲಪಡೆದ ರೈತರ ಸಾಲ ಮನ್ನಾ ಮಾಡಬೇಕು. ಅತಿವೃಷ್ಟಿ,ಅನಾವೃಷ್ಟಿಯಿಂದ ಹಾನಿಗೊಳಗಾದ ರೈತರಿಗೆ ಹೆಕ್ಟೇರ್‌ಗೆ 50ಸಾವಿರ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ರೈತ ಪ್ರಮುಖರಾದ ನಾಗರಾಜಪ್ಪ, ಮಠದಬಸವರಾಜ್‌, ಚಂದ್ರಶೇಖರ ಇನ್ನಿತರರುಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next