Advertisement

ಮರಣಿಸಿದ ತಿಂಗಳುಗಳ ಬಳಿಕ ಬಂತು ಕೋವಿಡ್ ‌2 ನೇ ಡೋಸ್ ಲಸಿಕಾ ವರದಿ? ಏನಿದು ವಿಚಿತ್ರ!

06:44 PM Sep 11, 2021 | Team Udayavani |

ಬನಹಟ್ಟಿ : ದೇಶಾದ್ಯಂತ ಕೋವಿಡ್ ವೈರಸ್ ಹಾವಳಿಯನ್ನು ತಡೆಯಲು ಕೇಂದ್ರ ಸರ್ಕಾರ ಭಾರತೀಯರಿಗೆ ಲಸಿಕೆ ನೀಡುತ್ತಿದೆ. ಆದರೆ ಇಲ್ಲೊಂದು ಕಡೆ ಸತ್ತವರ ಹೆಸರಲ್ಲೂ ಸಹ ಲಸಿಕೆ ನೀಡಿಕೆಗೆ ಮುಂದಾಗಿರುವದು ಶಾಕ್ ತಂದಿದೆ.

Advertisement

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಮಾಲಾ ಪ್ರಕಾಶ ಪಾವಟೆ ಕೋವಿಡ್‌ ಮೊದಲ ಡೋಸ್ ಪಡೆದ ನಂತರ  ಕಳೆದ ಏಪ್ರಿಲ್ 28 ರಂದು ಕೋವಿಡ್‌ ನಿಂದ  ಮರಣ ಹೊಂದಿದ್ದಾರೆ. ಅವರು ಸತ್ತಿರುವ ಮರಣ ಪ್ರಮಾಣ ಪತ್ರವೂ ಕುಟುಂಬಸ್ಥರ ಬಳಿ ಇದೆ. ಇದೀಗ ಮಾಲಾ ಎರಡನೇ ಡೋಸ್  ಲಸಿಕೆ ನೀಡಲಾಗಿದೆ ಎಂದು ಸೆ.8 ರಂದು ಮನೆಯವರ ಮೊಬೈಲ್‌ಗೆ ಮೆಸೇಜ್ ಜೊತೆಗೆ ಲಸಿಕೆ ಪ್ರಮಾಣ ಪತ್ರವನ್ನು ನೀಡಲಾಗಿದೆ.

ಇದನ್ನೂ ಓದಿ:ಟೋಲ್ ವಸೂಲಿ ಮಾಡಿ ಸೌಲಭ್ಯ ನೀಡದ ಜಿಕೆಸಿ ಕಂಪನಿ ವಿರುದ್ಧ ಜನರ ಆಕ್ರೋಶ

ಇದನ್ನು ನೋಡಿ ಮನೆಯವರು ಶಾಕ್ ಆಗಿದ್ದಾರೆ. ನಂತರ ಮಾಧ್ಯಮದವರಿಗೆ ಮರಣ ಪ್ರಮಾಣ ಪತ್ರವನ್ನು ತೋರಿಸಿ, ಇದು ಹೇಗೆ ಸಾಧ್ಯವೆಂಬುದೇ ನಮಗೆ ತಿಳಿಯುತ್ತಿಲ್ಲ ಎಂದಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next