Advertisement

ಜಿಲ್ಲಾ ಡಳಿತ ಏನೇ ಕ್ರಮ ಕೈಗೊಂಡರೂ ಜನರ ಸಹಕಾರ ಮುಖ್ಯ

07:11 PM May 26, 2021 | Team Udayavani |

ಕಲ್ಪತರು ನಾಡಿನಲ್ಲಿ ಕೊರೊನಾ ರಣಕೇಕೆಹಾಕುತ್ತಿದ್ದ ವೇಳೆಯಲ್ಲಿ ನಿರಂತರವಾಗಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಪ್ರವಾಸಕೈಗೊಂಡು ಅಧಿಕಾರಿ, ಜನಪ್ರತಿನಿಧಿಗಳ ಸಭೆನಡೆಸಿ ಕೊರೊನಾ ಒಂದು ರೀತಿಯಲ್ಲಿ ಕಡಿಮೆ ಆಗುವಂತೆ ಮಾಡಿದೆ.

Advertisement

ಜಿಲ್ಲೆಯಲ್ಲಿ ಆಕ್ಸಿಜನ್‌ ಬೆಡ್‌ ಕೊರತೆ ಇಲ್ಲದಂತೆ ಮಾಡಿ ಕೆಂಪು ವಲಯ ಆಗಿದ್ದ ಜಿಲ್ಲೆಯನ್ನು ಕಿತ್ತಳೆ ವಲಯದತ್ತ ತಂದಿದ್ದು, ಇನ್ನೊಂದುವಾರದಲ್ಲಿ ಜಿಲ್ಲೆಯಲ್ಲಿ ಸೋಂಕು ಇನ್ನುಕಡಿಮೆ ಮಾಡುವ ವಿಶ್ವಾಸವನ್ನು ಜಿಲ್ಲಾಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ವ್ಯಕ್ತಪಡಿಸಿದ್ದು, ಕೊರೊನಾ ನಿಯಂತ್ರಣಕ್ಕೆಜಿಲ್ಲಾಡಳಿತ ಏನೇ ಕ್ರಮಕೈಗೊಂಡರೂ ಅದಕ್ಕೆಜನರ ಸಹಕಾರ ಮುಖ್ಯ ಎಂದಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ ವೇಗ ಹೆಚ್ಚಾಗಿತ್ತು.ನೀವು ಜಿಲ್ಲಾಉಸ್ತುವಾರಿ ಚಿವರಾಗಿ ಏನೆಲ್ಲಾ ಕ್ರಮ ಕೈಗೊಂಡಿದ್ದೀರಿ?

ಜಿಲ್ಲೆಯಲ್ಲಿ ಕೊರೊನಾ ವೇಗ ಏಪ್ರಿಲ್‌ಮೇ ತಿಂಗಳಲ್ಲಿ ಹೆಚ್ಚಾಗಿತ್ತು, ಇದರನಿಯಂತ್ರಣ ನಮಗೆ ಒಂದು ಸವಾಲಾಗಿತ್ತು. ಎಲ್ಲ ತಾಲೂಕುಗಳಲ್ಲಿ ಸಭೆನಡೆಸಿ ಕೋವಿಡ್‌ ಸೆಂಟರ್‌ ಪ್ರಾರಂಭಿಸಿದ್ದುಜೊತೆಗೆ ಕೊರೊನಾ ಪರೀಕ್ಷೆ ಹೆಚ್ಚಿಸಲಾಯಿತು. ಅಧಿಕಾರಿ, ಜನಪ್ರತಿನಿಧಿಗಳನಡುವೆ ನಿರಂತರ ಸಂಪರ್ಕ ಸಾಧಿಸಿದ್ದು, ಜಿಲ್ಲೆಯಲ್ಲಿ ಈಗ ಕೊರೊನಾ ಸೋಂಕುನಿಯಂತ್ರಣಕ್ಕೆ ಬರುತ್ತಿದೆ.

ಜಿಲ್ಲೆಯಲ್ಲಿ ಕೊರೊನಾ ಹೆಚ್ಚಳ ಆಗಲು ಕಾರಣವೇನು?

Advertisement

ಈಗ ಹೇಗಿದೆ. ತುಮಕೂರು ಬೆಂಗಳೂರಿಗೆ ಹೆಬ್ಟಾಗಿಲಾಗಿದ್ದು, ನಿತ್ಯವೂ ಸಾವಿ ರಾರುಜನರು ಸಂಚಾರ ಮಾಡುತ್ತಿ ದ್ದರು.ಲಾಕ್‌ಡೌನ್‌ನಿಂದ ಹಲವರು ಬೆಂಗಳೂರು ತೊರೆದು ತಮ್ಮ ಹಳ್ಳಿಗಳತ್ತ ಮುಖಮಾಡಿದರು. ಇದರಿಂದ ಸೋಂಕು ಹೆಚ್ಚಾಗಲು ಕಾರಣವಾಗಿತ್ತು. ಸೋಂಕು ನಿಯಂತ್ರಣಕ್ಕೆನಗರದ ಜನ ನಮಗೆ ಸಹಕರಿಸಿದ್ದು,ಇವರೆಲ್ಲರ ಸಹಕಾರದಿಂದ ಜಿಲ್ಲೆಯಲ್ಲಿಕೊರೊನಾ ನಿಯಂತ್ರಣಕ್ಕೆ ಬರತೊಡಗಿದೆ.

ಸೋಂಕಿತರಿಗೆ ಆಕ್ಸಿಜನ್ಬೆಡ್ಕೊರತೆಇದೆ ಎಂದು ಕೇಳಿಬರುತ್ತಿದೆ, ಆಕ್ಸಿಜನ್ಕೊರತೆ ಜಿಲ್ಲೆಯಲ್ಲಿ ಇದೆಯಾ?

ಏಪ್ರಿಲ್‌, ಮೇ ತಿಂಗಳಲ್ಲಿ ಒಂದೇ ಬಾರಿಸೋಂಕಿನ ಪ್ರಮಾಣ ಜಾಸ್ತಿಯಾಗಿತ್ತು. ಆಗ ಆಕ್ಸಿಜನ್‌ ಸಮಸ್ಯೆ ಉಂಟಾಗಿತ್ತು. ತಕ್ಷಣಜಿಲ್ಲಾಡಳಿತ ಜಾಗೃತವಾಗಿ ಆಕ್ಸಿಜನ್‌ ವ್ಯವಸ್ಥೆಮಾಡಿದೆವು. ಈಗ ಆಕ್ಸಿಜನ್‌ ಕೊರತೆ ಇಲ್ಲ.ಜಿಲ್ಲೆಯಲ್ಲಿ 80 ಆಕ್ಸಿಜನ್‌ ಹಾಸಿಗೆಗಳು ಖಾಲಿ ಇವೆ. ಗ್ರಾಮೀಣ ಭಾಗದಲ್ಲಿ ಆಮ್ಲಜನಕಬೆಡ್‌ ಕೊರತೆ ನೀಗಿಸಲು ತುಮಕೂರು,ಶಿರಾ, ತಿಪಟೂರು, ಮಧುಗಿರಿ, ಪಾವಗಡದಲ್ಲಿ ಆಕ್ಸಿಜನ್‌ ಉತ್ಪಾದನಾ ಘಟಕನಿರ್ಮಾಣಕ್ಕೆಕ್ರಮ ವಹಿಸಲಾಗಿದೆ.

ಜಿಲ್ಲೆಯಲ್ಲಿ ಕೊರೊನಾ ಔಷಧ ಕೊರತೆ ಇದೆ, ಕೊರೊನಾ ಲಸಿಕೆ ಸಿಗುತ್ತಿಲ್ಲ ಎನ್ನುವ ಆರೋಪ ಇದೆ?

ಕೊರೊನಾಗೆ ಚಿಕಿತ್ಸೆ ನೀಡುವ ಔಷಧಕೊರತೆ ಕಂಡು ಬಂದಿಲ್ಲ. ಜಿಲ್ಲೆಯಲ್ಲಿ  ರೆಮ್‌ಡೆಸಿವಿಯರ್‌ ಕೊರತೆಯಿಲ್ಲ. ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಲಸಿಕೆಗೂ ತೊಂದರೆಇಲ್ಲ. ಜಿಲ್ಲೆಗೆ ಪ್ರತಿದಿನ 8000 ಲಸಿಕೆಬರುತ್ತಿದೆ. ನಗರದಲ್ಲಿ ಪ್ರತಿದಿನ ಒಂದು ಸಾವಿರ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿಯೂ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ.

ಕೊರೊನಾ ಸೋಂಕಿತರ ಚಿಕಿತ್ಸೆಗೆ ಯಾವ ರೀತಿಕ್ರಮ ಕೈಗೊಂಡಿದ್ದೀರಿ?

ಜಿಲ್ಲೆ ಯಲ್ಲಿ ಸೋಂಕಿತರಿಗೆ ಚಿಕಿತ್ಸೆ  ನೀಡಲು ನಮ್ಮಸರ್ಕಾರಿ ಆಸ್ಪತ್ರೆ ಜತೆಗೆ ಖಾಸಗಿ ಆಸ್ಪತ್ರೆಗಳಸಹಕಾರ ಪಡೆದಿದ್ದೇವೆ. ಜೊತೆಗೆ ಜಿಲ್ಲೆಯಲ್ಲಿಈವರೆಗೂ 17 ಕೋವಿಡ್‌ ಆರೈಕೆ ಕೇಂದ್ರತೆರೆಯಲಾಗಿದೆ. ಸಾರ್ವಜನಿಕ ‌ರು ಇಲ್ಲಿ ಚಿಕಿತ್ಸೆ ಪಡೆದುಗುಣಮುಖರಾಗುತ್ತಿದ್ದಾರೆ. ಕೋವಿಡ್‌ ನಿರ್ವಹಣೆ ವಿಚಾರವಾಗಿ ಎಲ್ಲ ತಾಲೂಕುಗಳಲ್ಲಿ ಸಭೆನಡೆಸಿ ಅಧಿಕಾರಿಗಳಿಗೆ ನಿರ್ದೇಶನ ‌ನೀಡಲಾಗಿದೆ. ಸೋಂಕಿತರಿಗೆ  ಉತ್ತಮಆಹಾರ, ಔಷಧೋಪಾಚಾರ ನಡೆಯುತ್ತಿದೆ

ಚಿ.ನಿ.ಪುರುಷೋತ್ತಮ್

Advertisement

Udayavani is now on Telegram. Click here to join our channel and stay updated with the latest news.

Next