Advertisement

ನೆಗೆಟಿವ್‌ ಇದ್ದವರಿಗಷ್ಟೇ ವಿಮಾನ ಪ್ರಯಾಣ

11:30 AM Mar 30, 2021 | Team Udayavani |

ಬೆಂಗಳೂರು: ನಗರದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಎಚ್ಚೆತ್ತ ಬಿಬಿ  ಎಂಪಿ, ನಗರಕ್ಕೆ ವಿಮಾನದ ಮೂಲಕ ಆಗಮಿಸುವಪ್ರತಿಯೊಬ್ಬ ಅಂತಾರಾಷ್ಟ್ರೀಯ ಪ್ರಯಾಣಿಕರಿಗೂ ಆರ್‌ಟಿಪಿಸಿಆರ್‌ ಪರೀಕ್ಷೆ ಕಡ್ಡಾಯಗೊಳಿಸಿದೆ. ಬಸ್‌ನಿಲ್ದಾಣ, ಮಾರುಕಟ್ಟೆ, ಮಾಲ್‌ಗ‌ಳು, ಮಾರುಕಟ್ಟೆ, ಮದುವೆ ಮಂಟಪ, ಚಿತ್ರಮಂದಿರ ಸೇರಿದಂತೆ ಜನಸಂದಣಿ ಪ್ರದೇಶಗಳಲ್ಲಿ ಹೆಚ್ಚು ಕೋವಿಡ್‌ ಪರೀಕ್ಷೆಗಳನ್ನು ಮಾಡಬೇಕು. ಎಲ್ಲಿ ಹೆಚ್ಚು ಕೋವಿಡ್‌ ಪ್ರಕರಣಗಳು ಕಂಡುಬರುತ್ತಿವೆ ಎಂಬುದನ್ನು ಅವ ಲೋಕಿಸಿ, ಆ ಪ್ರದೇಶದಲ್ಲಿ ಹೆಚ್ಚು ಕೋವಿಡ್‌ ಪರೀಕ್ಷೆ ನಡೆಸಬೇಕು. ಸ್ವಾಬ್‌ ಸ್ಯಾಂಪಲ್‌ಗ‌ಳನ್ನು ದಿನಕ್ಕೆರಡು ಬಾರಿ ಲ್ಯಾಬ್‌ಗಳಿಗೆ ಕಳುಹಿಸಬೇಕು ಎಂದು ಬಿಬಿಎಂಪಿ ಸೂಚಿಸಿದೆ.

Advertisement

ಬಿಬಿಎಂ ಕಚೇರಿಯಲ್ಲಿ ಸೋಮವಾರ ಹಮ್ಮಿ ಕೊಂಡಿದ್ದ ವರ್ಚ್ಯುಯಲ್‌ ಸಭೆಯಲ್ಲಿ ಈ ವಿಷಯತಿಳಿಸಿದ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌, ನೆಗೆಟಿವ್‌ ಬಂದವರಿಗೆ ಮಾತ್ರ ವಿಮಾನದಲ್ಲಿ ತೆರಳಲು ಅನುಮತಿ ನೀಡಬೇಕು. ನೆಗೆಟಿವ್‌ ವರದಿ ಪಡೆದು ನಗರಕ್ಕೆ ಬಂದಿರುವವರ ಪಟ್ಟಿ ಪಡೆದು, ಏಳನೇ ದಿನ ಕಡ್ಡಾಯವಾಗಿ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಬೇಕು. ಹೊರ ರಾಜ್ಯಗಳಿಂದ ಬರುವವರಿಗೂ ಪರೀಕ್ಷೆಗೊಳ ಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸಮರ್ಪಕ ವಿಳಾಸ ಪಡೆಯಿರಿ: ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ, ಫೀವರ್‌ ಕ್ಲಿನಿಕ್‌, ಮೊಬೈಲ್‌  ಟೆಸ್ಟಿಂಗ್‌ ಕೇಂದ್ರ ಹಾಗೂ ಇತರೆ ಆಸ್ಪೆತ್ರೆಗಳಲ್ಲಿ ಸ್ವಾಬ್‌ ಸಂಗ್ರಹಿಸುವಾಗ ಸರಿಯಾದ ಮಾಹಿತಿ ಪಡೆಯುತ್ತಿಲ್ಲ. ಈ ವೇಳೆ ನಿಖರವಾದ ಮೊಬೈಲ್‌ ಸಂಖ್ಯೆ, ವಿಳಾಸ ಹಾಗೂ ಪಿನ್‌ಕೋಡ್‌ ಸಂಗ್ರಹಿಸಬೇಕು. ಸರಿಯಾದ ಮಾಹಿತಿ ಪಡೆಯದಿದ್ದರೆ, ಸೋಂಕು ದೃಢಪಟ್ಟ ವ್ಯಕ್ತಿಯ ಪತ್ತೆ ಕಷ್ಟವಾಗಲಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ತಾಕೀತು ಮಾಡಿದ್ದಾರೆ.

ಒಬ್ಬ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ ಎಂಬ ಮಾಹಿತಿ ಲಭ್ಯವಾದ ಕೂಡಲೇ, ಬೂತ್‌ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಪಟ್ಟಿಯನ್ನು ಸಹಾಯ ಕಂದಾಯ ಅಧಿಕಾರಿಗಳಿಗೆ ನೀಡಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಾಹಿತಿ ನೀಡಿ ಪಾಸಿಟಿವ್‌ ಆದ ವ್ಯಕ್ತಿಯ ಸಂಪರ್ಕದಲ್ಲಿದ್ದವರಿಗೆಲ್ಲಾ ಪರೀಕ್ಷೆ ಮಾಡಬೇಕು. ಅಲ್ಲದೆ, ಔಷಧ ಮಳಿಗೆಗಳಲ್ಲಿ ಮಾತ್ರೆಗಳನ್ನು ಪಡೆದವರ ಮಾಹಿತಿ ಸಂಗ್ರಹಿಸಿಕೊಂಡು ಪರೀಕ್ಷೆಗೊಳಪಡಿಸಬೇಕು ಎಂದಿದ್ದಾರೆ.

ಕಾಟಾಚಾರ ಪರೀಕ್ಷೆ ಬೇಡ: ಕಾಟಾಚಾರಕ್ಕೆ ಕೋವಿಡ್‌ ಪರೀಕ್ಷೆ ಮಾಡಬೇಡಿ. ರೋಗ ಲಕ್ಷಣಗಳಿರುವ, ಐಎಲ್‌ಐ, ಪ್ರಾಥಮಿಕ/ದ್ವಿತೀಯ ಸಂಪರ್ಕಿತರುಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರು, ಹೊರ ರಾಜ್ಯದಿಂದ ಬರುವ ಪ್ರಯಾಣಿಕರಿಗೆ ಪರೀಕ್ಷೆಮಾಡಬೇಕು. ರೋಗಲಕ್ಷಣಗಳಿಲ್ಲದವರಿಗೆಲ್ಲಾ ಪರೀಕ್ಷೆ ಮಾಡಿ ಕಿಟ್‌ಗಳನ್ನು ವ್ಯರ್ಥ ಮಾಡಬೇಡಿ ಎಂದು ಖಡಕ್‌ ಎಚ್ಚರಿಕೆ ನೀಡಿದ್ದಾರೆ.

Advertisement

ನಿಯಮ ಉಲ್ಲಂಘನೆಗೆ ದಂಡ : ಬಿಬಿಎಂಪಿ ವ್ಯಾಪ್ತಿಯ ಆಯಾವಲಯಗಳಲ್ಲಿ ಕೋವಿಡ್‌ ನಿಯಮಪಾಲಿಸುವ ಬಗ್ಗೆ ವಲಯ ಜಂಟಿಆಯಕ್ತರುಗಳು ಸೂಕ್ತ ಕ್ರಮವಹಿಸಬೇಕು.ಹೆಚ್ಚು ಜನಸಂದಣಿಯಾಗುವ ಪ್ರದೇಶಗಳಿಗೆ ಮಾರ್ಷಲ್‌ಗ‌ಳನ್ನುಕಳುಹಿಸಿ ದಂಡ ವಿಧಿಸಬೇಕು. ಕೋವಿಡ್‌ನಿಯಮ ಪಾಲಿಸುವಂತೆ ಜಾಗೃತಿಮೂಡಿಸಬೇಕು ಎಂದು ಆಯುಕ್ತರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಪೋರ್ಟಲ್‌ನಲ್ಲಿ ಸಮಗ್ರ ಮಾಹಿತಿ :

ಪ್ರಾಥಮಿಕ ಆರೋಗ್ಯ ಕೆಂದ್ರಗಳ ಮಟ್ಟದಲ್ಲಿ ಪಿ.ಎಚ್‌.ಎ.ಎಸ್‌.ಟಿ(ಫಾಸ್ಟ್‌) ಪೋರ್ಟಲ್‌ನಲ್ಲಿ ಎಲ್ಲಾ ಮಾಹಿತಿ ಲಭ್ಯವಿರಲಿದೆ. ಕಣ್ಗಾವಲು ಚಟುವಟಿಕೆ, ಪಾಸಿಟಿವ್‌ ಮಾಹಿತಿ, ಐಎಲ… ಐ-ಸಾರಿಯಿರುವವರ ಸ್ವಾಬ್‌ ಸಂಗ್ರಹ, ಸಂಪರ್ಕಿತರನ್ನುಪರೀಕ್ಷೆಗೊಳಪಡಿಸುವುದು, ಸೋಂಕು ಪ್ರದೇಶದ ಸರ್ವೆಕಾರ್ಯ, ಹೊರ ರಾಷ್ಟ್ರ, ಹೊರ ರಾಜ್ಯದಿಂದ ಬಂದವರಿಗೆ7ನೇ ದಿನ ನಡೆಸಿದ ಪರೀಕ್ಷೆ ಸೇರಿದಂತೆ ಎÇÉಾ ಮಾಹಿತಿಲಭ್ಯವಿರುತ್ತದೆ. ಈ ಪೋರ್ಟಲ್‌ ಮೂಲಕ ತ್ವರಿತವಾಗಿಕಾರ್ಯನಿರ್ವಹಿಸಬಹುದು ಎಂದು ಆಯುಕ್ತರು ತಿಳಿಸಿದ್ದಾರೆ.

ಸಂಯೋಜಕರ ನೇಮಕ :

ನಗರದಲ್ಲಿ ಕೋವಿಡ್ ಎರಡನೇ ಅಲೆ ಆತಂಕಹಿನ್ನೆಲೆಯಲ್ಲಿ ಎಂಟು ಮಂದಿ ಐಎಎಸ್‌ಅಧಿಕಾರಿಗಳನ್ನು ವಲಯ ಸಂಯೋಜಕರನ್ನಾಗಿನೇಮಕ ಮಾಡಲಾಗಿದೆ. ಬೆಂಗಳೂರು ಪೂರ್ವದಮನೋಜ್‌ ಕುಮಾರ್‌ ಮೀನಾ, ಬೆಂಗಳೂರುಪಶ್ಚಿಮ ವಿಭಾಗದ ಉಜ್ವಲ್‌ಕುಮಾರ್‌ ಘೋಷ್‌,ಬೊಮ್ಮನಹಳ್ಳಿಯ ರವಿಕುಮಾರ್‌ ಸುರಪುರ, ಯಲಹಂಕದ ವಿ.ಅನ್ಬುಕುಮಾರ್‌, ಬೆಂಗಳೂರುದಕ್ಷಿಣ ಪಂಕಜ್‌ಕುಮಾರ್‌ ಪಾಂಡೆ, ಮಹದೇವಪುರದ ಎನ್‌.ಮಂಜುಳ,ದಾಸರಹಳ್ಳಿಯ ಪಿ.ಸಿ.ಜಾಫ‌ರ್‌,ರಾಜರಾಜೇಶ್ವರಿನಗರದ ಆರ್‌.ವಿಶಾಲ್‌ಅವರನ್ನು ವಲಯ ಸಂಯೋಜಕರಾಗಿ ನೇಮಿಸಲಾಗಿದೆ.

ವಲಯ ಮಟ್ಟದ ವೈದ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯ ಆರೋಗ್ಯ ಕೇಂದ್ರಗಳಿಗೆಭೇಟಿ ನೀಡಿ,ಪರಿಸ್ಥಿತಿಯನ್ನು ಅವ ಲೋಕಿಸಬೇಕು. ಸ್ವಾಬ್‌ಸಂಗ್ರಹ, ಕೋವಿಡ್‌ ಪ್ರಕರಣ ಕಂಡುಬರುವ ಬಗ್ಗೆ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಸರಿಯಾಗಿ ಕೆಲಸ ಮಾಡದ ವೈದ್ಯಾಧಿಕಾರಿಗಳನ್ನು ಅಮಾನತು ಮಾಡಲಾಗುತ್ತದೆ. -ಎನ್‌.ಮಂಜುನಾಥ್‌ ಪ್ರಸಾದ್‌, ಬಿಬಿಎಂಪಿ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next