Advertisement

ಯಾದಗಿರಿ: ನವೋದಯ ಶಾಲೆಯ 75 ಮಕ್ಕಳಿಗೆ ಕೋವಿಡ್ ದೃಢ; ಒಂದು ವಾರ ಶಾಲೆ ಬಂದ್

06:19 PM Jan 27, 2022 | Team Udayavani |

ಯಾದಗಿರಿ: ತಾಲೂಕಿನ ಹೋತಪೇಟೆಯ ನವೋದಯ ಶಾಲೆಯ 75 ಮಕ್ಕಳಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, ಶಾಲೆಯನ್ನು ಒಂದು ವಾರ ಬಂದ್ ಮಾಡಲು ಜಿಲ್ಲಾಧಿಕಾರಿ ಡಾ.ರಾಗಪ್ರಿಯ ಆದೇಶಿಸಿದ್ದಾರೆ.

Advertisement

ಈ ಕುರಿತು ಮಾತಾನಾಡಿರುವ ಜಿಲ್ಲಾಧಿಕಾರಿ ಡಾ.ರಾಗಪ್ರಿಯ, ತಾಲೂಕಿನ ಹೋತಪೇಟೆಯ ನವೋದಯ ಶಾಲೆಯಲ್ಲಿ 538 ಜನ ಮಕ್ಕಳಿದ್ದಾರೆ. ಇವರಲ್ಲಿ 424 ಮಕ್ಕಳಿಗೆ ಟೆಸ್ಟ್ ಮಾಡಲಾಗಿದೆ. ಅವರ ಪೈಕಿ 75 ಮಕ್ಕಳಿಗೆ ಕೋವಿಡ್ ಸೋಂಕು ಪಾಸಿಟಿವ್ ಬಂದಿದೆ. ಇದರಲ್ಲಿ ಪ್ರಿನ್ಸಿಪಾಲ್  ಸೇರಿ ಜನ ಸಿಬ್ಬಂದಿಗಳಿಗೂ 7 ಪಾಸಿಟಿವ್ ಬಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಹೀಗಾಗಿ ಒಂದು ವಾರಗಳ ಕಾಲ ನಾವು ಸ್ಕೂಲ್ ಬಂದ್ ಮಾಡುತ್ತಿದ್ದೇವೆ. ಎಲ್ಲಾ ಮಕ್ಕಳನ್ನೂ ಅವರವರ ಊರಿಗೆ ಕಳುಹಿಸಲಾಗುತ್ತಿದೆ. ಪಾಸಿಟಿವ್ ಬಂದ ವಿದ್ಯಾರ್ಥಿಗಳಿಗೆ ಹೊಂ ಐಸೊಲೆಷನ್ ಗೆ ಒಳಪಡಿಸಲಾಗಿದೆ ಎಂದು ಹೇಳಿದರು.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next