Advertisement

ಗೋವಾ: ಕೋವಿಡ್ ನಿಯಂತ್ರಣಕ್ಕೆ ನೈಟ್ ಕರ್ಫ್ಯೂ ಜಾರಿಗೊಳಿಸಿ; ತಜ್ಞರು ಸಲಹೆ

05:01 PM Dec 28, 2021 | Team Udayavani |

ಪಣಜಿ: ಕರೋನಾ ಬಿಕ್ಕಟ್ಟು ಮತ್ತೊಮ್ಮೆ ದೇಶಾದ್ಯಂತ ತಲೆದೋರಿದೆ. ಕ್ರಮೇಣ ಪರಿಸ್ಥಿತಿಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಮುಂಜಾಗೃತಾ ಕ್ರಮವಾಗಿ ಎಲ್ಲೆಡೆ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಫ್ರಾನ್ಸ್ ಕೂಡ ತನ್ನ ದೇಶದಲ್ಲಿ ಕೋವಿಡ್ ಹೊಸ ನಿರ್ಬಂಧಗಳನ್ನು ಜಾರಿಗೊಳಿಸಿದೆ. ಗೋವಾ ರಾಜ್ಯದಲ್ಲಿಯೂ ಮುಂಜಾಗೃತಾ ಕ್ರಮವಾಗಿ ರಾತ್ರಿ ಕರ್ಫ್ಯೂ ಜಾರಿಗೊಳಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.

Advertisement

ಸೋಮವಾರವಷ್ಟೇ ಗೋವಾದಲ್ಲಿ ಓಮಿಕ್ರಾನ್ ಮೊದಲ ಸೋಂಕಿತ ವ್ಯಕ್ತಿ ಪತ್ತೆಯಾಗಿದ್ದಾನೆ. ಗೋವಾದಲ್ಲಿ ಕರೋನಾ ಸೋಂಕಿತರ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇದರೊಂದಿಗೆ ಮಂಗಳವಾರ ಇಂಗ್ಲೆಂಡ್‍ನಿಂದ್ ಗೋವಾಕ್ಕೆ ಬಂದಿಳಿದ 181 ಪ್ರವಾಸಿಗರ ಪೈಕಿ 4 ಜನರಿಗೆ ಕರೋನಾ ಸೋಂಕು ದೃಢಪಟ್ಟಿದೆ.

ಶಾರ್ಜಾದಿಂದ ಗೋವಾಕ್ಕೆ ಬಂದಿಳಿದ 49 ಪ್ರಯಾಣಿಕರ ಪೈಕಿ ಒಬ್ಬರಿಗೆ ಕರೋನಾ ಸೋಂಕು ದೃಢಪಟ್ಟಿದೆ. ವಿದೇಶದಿಂದ ಆಗಮಿಸಿದ ಒಟ್ಟೂ 5 ಜನರಿಗೆ ಕರೋನಾ ಸೋಂಕು ದೃಢಪಟ್ಟಿದ್ದು ಇವರ ಮಾದರಿಗಳನ್ನು ತಪಾಸಣೆಗಾಗಿ ಪುಣೆಯ ಲ್ಯಾಬ್‍ಗೆ ಕಳುಹಿಸಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next