Advertisement

ಜೂನ್ ನಿಂದ ಅಕ್ಟೋಬರ್ ವರೆಗೆ ಕೋವಿಡ್ ಹೆಚ್ಚಾಗುವ ಸಾಧ್ಯತೆ: ಸಚಿವ ಕೆ.ಸುಧಾಕರ್

10:50 AM Apr 26, 2022 | Team Udayavani |

ಬೆಂಗಳೂರು: ಕೋವಿಡ್ ಬಗ್ಗೆ ಇಲ್ಲಿಯವರೆಗೆ ಐಐಟಿ ಕಾನ್ಪುರದವರು ನಮಗೆ ಅಂಕಿಅಂಶಗಳು ಕೊಡುತ್ತಿದ್ದರು. ಈಗ ಕೂಡ ಅವರೇ ನಮಗೆ ವರದಿ ನೀಡಿದ್ದಾರೆ. ಅದರ ಪ್ರಕಾರ ಜೂನ್ ಅಂತ್ಯದಲ್ಲಿ ಕೋವಿಡ್ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ತಿಂಗಳ ಮೊದಲೇ ಅಲ್ಪ ಪ್ರಮಾಣದಲ್ಲಿ ಪ್ರಾರಂಭವಾಗಿದೆ. ಅವರು ಹೇಳಿದ ಪ್ರಕಾರ ಜೂನ್ ನಲ್ಲಿ ಕೋವಿಡ್ ಸೋಂಕು ಪ್ರಮಾಣ ಹೆಚ್ಚಾಗುತ್ತದೆ. ಸೆಪ್ಟೆಂಬರ್ ಅಕ್ಟೋಬರ್ ವರೆಗೂ ಇದೇ ಪರಿಸ್ಥಿತಿ ಇರಬಹುದು ಎಂಬುದು ಅವರ ಅಂಕಿ ಅಂಶ. ಕಳೆದ ಮೂರು ಕೋವಿಡ್ ಅಲೆಗಳಲ್ಲಿ ಅವರ ವರದಿ ಸರಿಯಾಗಿದೆ. ಹೀಗಾಗಿ ಅವರ ವರದಿ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಸರಿ ಹೊಂದುತ್ತದೆ ಎಂದರು.

ಮೋದಿ ಸಭೆ: ದಿನದಿಂದ ದಿನಕ್ಕೆ ಕೋವಿಡ್ ಹೆಚ್ಚಾಗುತ್ತಿದೆ. ಈ ಸಂಬಂಧ ಮೋದಿ ಎಲ್ಲಾ ರಾಜ್ಯದ ಸಿಎಂಗಳ ಜೊತೆಗೆ ಸಭೆ ಕರೆದಿದ್ದಾರೆ. ಎಲ್ಲಾ ರಾಜ್ಯದ ಸ್ಥಿತಿ ಗತಿ ಅವಲೋಕನದ ಮಾಡಲಿದ್ದಾರೆ. ಸಿದ್ದತೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.

ಇದನ್ನೂ ಓದಿ:ಕೋವಿಡ್ 19…ಭಾರತದಲ್ಲಿ ಮತ್ತೆ ನಾಲ್ಕನೇ ಅಲೆ; ಆರೋಗ್ಯ ತಜ್ಞರ ಅಭಿಪ್ರಾಯವೇನು?

ಈಗಾಗಲೇ ಮೂರನೇ ಅಲೆ ಬಂದು ಹೋಗಿದೆ. ಮೂರನೇ ಅಲೆಯಲ್ಲಿ ಸಾವು ನೋವು ಹೆಚ್ಚಾಗಿ ಕಂಡು ಬಂದಿಲ್ಲ. ಲಸಿಕೆಯ ಕಾರಣದಿಂದ ಕೋವಿಡ್ ಅಷ್ಟೊಂದು ಹರಡಲಿಲ್ಲ. ನಮ್ಮ ಸರ್ಕಾರ ಗರಿಷ್ಠ ಲಸಿಕೆ ನೀಡಿದೆ. ನಮ್ಮ ರಾಜ್ಯದಲ್ಲಿ ಎರಡು ಡೋಸ್ 10 ಕೋಟಿಗೂ ಹೆಚ್ಚು ಲಸಿಕೆ ನೀಡಿದ್ದೇವೆ.  ವ್ಯಾಕ್ಸಿನ್ ತೆಗೆದುಕೊಂಡರೆ ಕೋವಿಡ್ ಬರುವುದಿಲ್ಲ ಎಂದಲ್ಲ, ಆದರೆ ಸಾವು ನೋವಿನ ಪ್ರಮಾಣ ಕಡಿಮೆಯಾಗುತ್ತದೆ.  ಮೂರನೇ ಡೋಸ್ ತೆಗೆದುಕೊಂಡವರ ಪ್ರಮಾಣ ಕಡಿಮೆಯಿದೆ. ಮುಂದಿನ ಅಲೆ ಬರುವ ತನಕ ಕಾಯುವುದು ಬೇಡ ಲಸಿಕೆ ಲಭ್ಯವಿದ್ದಾಗ ತೆಗೆದುಕೊಳ್ಳಿ ಎಂದರು.

Advertisement

ವರ್ಷಕ್ಕೊಂದು ಲಸಿಕೆ: ಪ್ರಾರಂಭದಲ್ಲಿ ಲಸಿಕೆ ಕಡಿಮೆಯಿದೆ ಎಂದು ಅಪಪ್ರಚಾರ ಮಾಡಿದ್ದರು. ಲಸಿಕೆ ಏಳೆಂಟು ತಿಂಗಳಿಂದ ಸಾಕಷ್ಟು ಲಸಿಕೆ ಲಭ್ಯ ಇದೆ. ಕನಿಷ್ಠ ಜನಜಂಗುಳಿ ಇರುವ ಕಡೆ ಮಾಸ್ಕ್ ಕಡ್ಡಾಯವಾಗಿ ಹಾಕಿಕೊಳ್ಳಿ. ಒಳಾಂಗಣ ಹಾಗೂ ಜನರ ಗುಂಪು ಇರುವ ಕಡೆ ಮಾಸ್ಕ್ ಕಡ್ಡಾಯವಾಗಿ ಬಳಸಿ. 60 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆ ಇದೆ. ಬರುವಂತಹ ದಿನಗಳಲ್ಲಿ ವರ್ಷಕ್ಕೆ ಒಂದು ಡೋಸ್ ಲಸಿಕೆ ನೀಡಬೇಕೆ ಎಂಬ ಚರ್ಚೆ ನಡೆಯುತ್ತಿದೆ ಎಂದು ಸುಧಾಕರ್ ಹೇಳಿದರು.

ಶಾಲೆ ಆರಂಭ ವಿಚಾರವಾಗಿ ಮಾತನಾಡಿದ ಅವರು, ಕೋವಿಡ್ ಬಂದು ಈಗಾಗಲೇ ಎರಡು ವರ್ಷ ಮೇಲೆಯಾಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ನಮ್ಮಲ್ಲಿದೆ. ಯಾವ ರೀತಿ ವೈಜ್ಞಾನಿಕ ಜೀವನ ನಡೆಸಬೇಕು ಎಂಬುದು ಗೊತ್ತಾಗಿದೆ.  ಹೀಗಾಗಿ ಕೋವಿಡ್ ನೊಂದಿಗೆ ಬದುಕುವ ವಿಧಾನ ನಾವು ಕಲಿಯಬೇಕು. ಬಹಳ ಸರಳ ವಿಧಾನ ಕೈಗೊಳ್ಳುವ ಮೂಲಕ ಕೋವಿಡ್ ನಿಂದ ದೂರ ಉಳಿಯಬಹುದು. ಲಸಿಕೆ ಹಾಗೂ ನಮ್ಮಲ್ಲಿ ಮಾಸ್ಕ್ ಇದೆ. ಅಪಾಯದಿಂದ ಪಾರಾಗಬಹುದು ಎಂಬ ಅನುಭವ ಕಲಿತಿದ್ದೇವೆ. ಅಧಿಕೃತವಾಗಿ ನಾಲ್ಕನೇ ಈಗಾಗಲೇ ಬಂದಿದೆ ಎಂದು ಹೇಳಲಾಗಲ್ಲ, ಎರಡೂ ದಿನಗಳಲ್ಲಿ ವರದಿ ಬರಲಿದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next