Advertisement

ಕೋವಿಡ್‌ ಪ್ರಯೋಗಾಲಯಕ್ಕೆ ಚಾಲನೆ

11:15 AM Apr 25, 2020 | Suhan S |

ಧಾರವಾಡ: ನಗರದ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್‌) ಆವರಣದಲ್ಲಿ ಸ್ಥಾಪಿಸಲಾಗಿರುವ ಕೋವಿಡ್‌-19 ನೂತನ ಪ್ರಯೋಗಾಲಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಅವರು ಶುಕ್ರವಾರ ಉದ್ಘಾಟಿಸಿದರು.

Advertisement

ಕೇಂದ್ರ ಸರ್ಕಾರದ ಆರ್ಥಿಕ ನೆರವು ಹಾಗೂ ರಾಜ್ಯ ಸರ್ಕಾರದ ಮೂಲ ಸೌಕರ್ಯಗಳೊಂದಿಗೆ ಪ್ರಯೋಗಾಲಯ ಆರಂಭಗೊಂಡಿದ್ದು, ಆರೋಗ್ಯ ಸಂಶೋಧನಾ ನಿರ್ದೇಶನಾಲಯ 5 ವರ್ಷ ಈ ಪ್ರಯೋಗಾಲಯಕ್ಕೆ ನೆರವು ನೀಡಲಿದೆ.

ಆರ್‌ಟಿಪಿಸಿಆರ್‌, ಆರ್‌ಎನ್‌ಎ  ಎಕ್ಸಾಕ್ಟರ್‌, ಬಯೋ ಸೇಫ್ ಕ್ಯಾಬಿನೆಟ್‌ ಮೊದಲಾದ ಅಗತ್ಯ ಉಪಕರಣಗಳನ್ನು ಹಾಗೂ ತಜ್ಞ ಮಾನವ ಸಂಪನ್ಮೂಲಗಳೊಂದಿಗೆ ಡಿಮ್ಹಾನ್ಸ್‌ನ ಮಲ್ಟಿ ಡಿಸಿಪ್ಲೆನರಿ ರಿಸರ್ಚ್‌ ಯೂನಿಟ್‌ ಕಟ್ಟಡದಲ್ಲಿ ಈ ಪ್ರಯೋಗಾಲಯ ಕಾರ್ಯನಿರ್ವಹಿಸಲಿದೆ. ಪ್ರತಿದಿನ ಸುಮಾರು 100 ಗಂಟಲು ದ್ರವ ಮಾದರಿಗಳನ್ನು ಇಲ್ಲಿ ಪರೀಕ್ಷಿಸಬಹುದು ಎಂದು ಡಿಮ್ಹಾನ್ಸ್‌ ನಿರ್ದೇಶಕ ಡಾ|ಮಹೇಶ್‌ ದೇಸಾಯಿ ತಿಳಿಸಿದ್ದಾರೆ.

ಸಂಚಾರಿ ಕೇಂದ್ರಕ್ಕೂ ಚಾಲನೆ: ಕೋವಿಡ್‌-19 ನಿಯಂತ್ರಣಕ್ಕೆ ಗಂಟಲು ದ್ರವ ಮಾದರಿಗಳನ್ನು ಹೆಚ್ಚು ಸಂಖ್ಯೆಯಲ್ಲಿ ಪರೀಕ್ಷೆಗೆ ಒಳಪಡಿಸುವ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಡಿಸಿ ದೀಪಾ ಚೋಳನ್‌ ಅವರ ಇಚ್ಛಾಶಕ್ತಿಯೊಂದಿಗೆ ರೂಪಿಸಲಾಗಿರುವ ಸಂಚಾರಿ ಗಂಟಲು ದ್ರವ ಸಂಗ್ರಹಣಾ ಕೇಂದ್ರ (ಮೊಬೈಲ್‌ ಸ್ವಾಬ್‌ ಕಲೆಕ್ಷನ್‌ ಸೆಂಟರ್‌)ವನ್ನು ಸಚಿವ ಜಗದೀಶ ಶೆಟ್ಟರ್‌ ಅವರು ಪರಿಶೀಲಿಸಿ, ಚಾಲನೆ ನೀಡಿದರು.

ಡಿಸಿ ಕಚೇರಿ ಆವರಣದಲ್ಲಿ ಈ ಸಂಚಾರಿ ಗಂಟಲು ದ್ರವ ಸಂಗ್ರಹಣೆ ಕೇಂದ್ರ ವೀಕ್ಷಿಸಿದ ಸಚಿವರು, ಅದರ ಕಾರ್ಯ ವಿಧಾನ, ಮಾದರಿ ಸಂಗ್ರಹ ಮಾಡಲು ಅನುಸರಿಸುವ ಪದ್ಧತಿ, ಮೊದಲಾದ ಅಂಶಗಳ ಬಗ್ಗೆ ಪರಿಶೀಲನೆ ನಡೆಸಿದರು.

Advertisement

ಈ ವೇಳೆ ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಸಿ.ಎಂ. ನಿಂಬಣ್ಣವರ, ಶಂಕರ ಪಾಟೀಲ ಮುನೇನಕೊಪ್ಪ, ಪ್ರಸಾದ ಅಬ್ಬಯ್ಯ, ವಿಧಾನ ಪರಿಷತ್‌ ಸದಸ್ಯರಾದ ಪ್ರದೀಪ ಶೆಟ್ಟರ್‌, ಶ್ರೀನಿವಾಸ ಮಾನೆ, ಎಸ್‌.ವಿ. ಸಂಕನೂರ, ಡಿಸಿ ದೀಪಾ ಚೋಳನ್‌, ಜಿ.ಪಂ.ಸಿಇಒ ಡಾ| ಬಿ.ಸಿ. ಸತೀಶ್‌, ಡಿಎಚ್‌ಒ ಡಾ| ಯಶವಂತ ಮದೀನಕರ, ಜಿಲ್ಲಾ ಆರ್‌ಸಿಎಚ್‌ ಅ ಧಿಕಾರಿ ಡಾ|ಎಸ್‌.ಎಂ. ಹೊನಕೇರಿ, ಐಎಂಎ ಅಧ್ಯಕ್ಷ ಡಾ| ಸಂದೀಪ ಪ್ರಭು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next