Advertisement
ಚಾಮರಾಜನಗರ: ಕೋವಿಡ್ ಮೊದಲನೇ ಅಲೆಯಸಂದರ್ಭದಲ್ಲಿ ಇಡೀ ರಾಜ್ಯಕ್ಕೆ ಮಾದರಿಯಾಗಿ ಅನೇಕತಿಂಗಳ ಕಾಲ ಶೂನ್ಯ ಪಾಸಿಟಿವ್ ಪ್ರಕರಣ ಹೊಂದಿದ್ದು,ಬಳಿಕವೂ ಪ್ರತಿದಿನದ ಪ್ರಕರಣಗಳು ನೂರರ ಗಡಿದಾಟದೆ ನಿಯಂತ್ರಣ ಹೊಂದಿದ್ದ ಚಾಮರಾಜನಗರಜಿಲ್ಲೆಯಲ್ಲಿ 2ನೇ ಅಲೆಯಲ್ಲಿ ನಿರೀಕ್ಷಿಸಿರದಸಂಖ್ಯೆಯಲ್ಲಿ ಪ್ರಕರಣಗಳು ವರದಿಯಾಗುತ್ತಿವೆ.
Related Articles
Advertisement
ಪ್ರಕರಣ ಹೆಚ್ಚಲು ಕಾರಣವೇನು?: ಮೊದಲಅಲೆಯಲ್ಲಿ ಕಡಿಮೆ ಲಕ್ಷಣಗಳುಳ್ಳರೋಗಿಗಳನ್ನು ಕೋವಿಡ್ ಕೇರ್‌ಸೆಂಟರ್‌ನಲ್ಲಿ ಇರಿಸಲಾಗುತ್ತಿತ್ತು.ನಗರದ ಸರ್ಕಾರಿ ಎಂಜಿನಿಯರಿಂಗ್‌ಕಾಲೇಜು, ಸರ್ಕಾರಿ ಮೆಡಿಕಲ್‌ಕಾಲೇಜಿನಲ್ಲಿ ಕೋವಿಡ್ ಕೇರ್ ಸೆಂಟರ್‌ಅನ್ನು ಸ್ಥಾಪಿಸಿ ಸುಮಾರು 250ಕ್ಕೂ ಹೆಚ್ಚು ರೋಗಿಗಳನ್ನು ಅಲ್ಲಿ ಐಸೋಲೇಷನ್ ಮಾಡಲಾಗುತ್ತಿತ್ತು.
ತೀವ್ರ ರೋಗ ಲಕ್ಷಣ ಉಳ್ಳವರಿಗೆ ಜಿಲ್ಲಾಸ್ಪತ್ರೆಯಲ್ಲಿಚಿಕಿತ್ಸೆ ನೀಡಲಾಗುತ್ತಿತ್ತು.ಹೋಂ ಐಸೋಲೇಷನ್‌ಗೆ ತೆರಳುವವರು ಕಡಿಮೆಇದ್ದರು. ಆರಂಭದ ಮೂರು ತಿಂಗಳು ಹೋಂ ಐಸೋಲೇಷನ್‌ಗಿಂತ ಕೇರ್ ಸೆಂಟರ್‌ನಲ್ಲೇ ಹೆಚ್ಚು ಜನರಿದ್ದರು.ಸೋಂಕಿತರು ಪ್ರತ್ಯೇಕವಾಗಿ ಐಸೋಲೇಟ್ ಆಗುತ್ತಿದ್ದುದರಿಂದ ಸೋಂಕು ಹೆಚ್ಚು ಹರಡುವುದುನಿಯಂತ್ರಣದಲ್ಲಿತ್ತು.ಆದರೆ ಈ ಬಾರಿ, ಜಿಲ್ಲೆಯಲ್ಲಿ ಸರ್ಕಾರಿಎಂಜಿನಿಯರಿಂಗ್ ಕಾಲೇಜ್, ವೈದ್ಯಕೀಯ ಕಾಲೇಜಿನಕೋವಿಡ್ ಕೇರ್ ಸೆಂಟರ್ ಇಲ್ಲ! ಅಥವಾ ಅಲ್ಲಿತರಗತಿಗಳು ನಡೆಯುತ್ತಿದ್ದುದರಿಂದ ಕೋವಿಡ್‌ಸೆಂಟರ್ ಮಾಡಲಾಗದಿದ್ದರೆ ಬೇರೆಡೆಯೂ ಕೋವಿಡ್‌ಕೇರ್ ತೆರೆಯಲಿಲ್ಲ.
ಹೀಗಾಗಿ ಕಡಿಮೆ ಸೋಂಕು ಲಕ್ಷಣಉಳ್ಳವರು ಮನೆಯಲ್ಲೇ ಐಸೋಲೇಷನ್ ಆಗಲು,ಅಗತ್ಯವಿದ್ದವರು ಕೋವಿಡ್ ಆಸ್ಪತ್ರೆಗೆ ದಾಖಲಾಗಲುಸೂಚಿಸಲಾಗುತ್ತಿದೆ.ಹೋಂ ಐಸೋಲೇಷನ್ ಪ್ರಕರಣ ಹೆಚಳಕ್ಚ ಕ್ಕೆ ಾರಣ?:ಹೀಗಾಗಿ, ಹೆಚ್ಚಿನ ಜನರು ಮನೆಯಲ್ಲೇ ಐಸೋಲೇಷನ್ ಆಗುತ್ತಿದ್ದಾರೆ. ಹೀಗೆ ಮನೆಯಲ್ಲೇ ಇದ್ದು ಚಿಕಿತ್ಸೆಪಡೆಯುವ ಸೋಂಕಿತರು, ಪ್ರತ್ಯೇಕ ಕೋಣೆಯಲ್ಲಿರಬೇಕು.
ಅವರ ಸಂಪರ್ಕ ಮನೆ ಯವರಿಗೆ ಆಗಬಾರದು. ಆದರೆ ಮಾಸ್ಕ್ ಧರಿಸಿ, ಭೌತಿಕ ಅಂತರ ಕಾಪಾಡಿಕೊಳ್ಳಿ ಎಂಬ ಸರಳ ನಿಯಮವನ್ನೇ ಅನುಸರಿಸದಜನರು, ಮನೆಯಲ್ಲಿ ಸೋಂಕಿತರೊಂದಿಗೆ ಸೂಕ್ತಅಂತರ ಕಾಪಾಡಿ ಕೊಳ್ಳುವುದನ್ನು ಕಟ್ಟುನಿಟ್ಟಾಗಿಪಾಲಿಸುತ್ತಾರೆಂಬ ಯಾವ ಗ್ಯಾರಂಟಿಯೂ ಇಲ್ಲ.ಅಲ್ಲದೇ ಎರಡನೇ ಅಲೆಯ ರೂಪಾಂತರಿ ವೈರಸ್‌ಬಹಳ ಬೇಗನೆ ಹರಡುವುದರಿಂದ ಮನೆಯ ಇತರಸದಸ್ಯರಿಗೂ ಪಾಸಿಟಿವ್ ಆಗುತ್ತಿದೆ.
ಸೋಂಕುಇರುವವರಿಗೆ ಸೋಂಕು ಪತ್ತೆ ಪರೀಕ್ಷೆ ನಡೆಸಿ ಫಲತಾಂಶಬರುವವರೆಗೆ ಅವರು ಸಾರ್ವಜನಿಕ ಸ್ಥಳಗಳಲ್ಲಿಓಡಾಡಿ, ಕೆಮ್ಮಿ, ಸೀನುವ ಮೂಲಕ ಹಲವರಿಗೆಸೋಂಕು ಹರಡಿರುತ್ತಾರೆ. ಹೀಗಾಗಿ ಜಿಲ್ಲೆಯಲ್ಲಿಸೋಂಕು ವ್ಯಾಪಕವಾಗಿ ಹರಡುತ್ತಿದೆ. ಅದರಲ್ಲೂಚಾಮರಾಜನಗರ ತಾಲೂಕಿನಲ್ಲಿ ಸೋಂಕು ಹೆಚ್ಚುವರದಿಯಾಗುತ್ತಿದೆ.ಹೀಗಾಗಿ ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಂಡು,ನಗರದಲ್ಲಿ ಎರಡು ಮೂರು ಕಡೆ ಕೋವಿಡ್ ಕೇರ್‌ಸೆಂಟರ್‌ಗಳನ್ನು ತೆರೆಯಬೇಕಾಗಿದೆ. ಇಲ್ಲವಾದರೆಸೋಂಕು ಇನ್ನಷ್ಟು ತೀವ್ರವಾಗಿ ಹರಡುತ್ತದೆ ಎಂಬುದುಆರೋಗ್ಯ ತಜ್ಞರ ಅಭಿಪ್ರಾಯ.