Advertisement

ಕೋವಿಡ್ ಸಂಕಟಕ್ಕೆ ನಿರ್ಲಕ್ಷ್ಯವೇ ಕಾರಣ

03:06 PM Apr 28, 2021 | Team Udayavani |

ಬೆಂಗಳೂರು: ಎರಡನೇ ಅಲೆ ಎಷ್ಟು ಭೀಕರವಾಗಿರುತ್ತದೆ ಮತ್ತು ಅದಕ್ಕೆ ತಕ್ಕಂತೆ ಮಾಡಿಕೊಳ್ಳಬೇಕಾದ ಸಿದ್ಧತೆ ಕುರಿತು ತಜ್ಞರ ಸಮಿತಿ 2020 ನವೆಂಬರ್‌ 30ರಂದೇಸರ್ಕಾರಕ್ಕೆ ವರದಿ ನೀಡಿತ್ತು. ಈ ವರದಿಯನ್ನು ಸರ್ಕಾರಸಂಪೂರ್ಣವಾಗಿ ನಿರ್ಲಕ್ಷಿಸಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳದಿರುವುದೇ ಇಷ್ಟೆಲ್ಲಾ ಸಾವು, ನೋವು,ಸಂಕಟ, ಕಣ್ಣೀರಿಗೆಕಾರಣವಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದನಾಯಕ ಸಿದ್ದರಾಮಯ್ಯಆರೋಪಿಸಿದ್ದಾರೆ.

Advertisement

ಹಿರಿಯ ಕಾಂಗ್ರೆಸ್‌ ನಾಯಕರ ವಿಡಿಯೊ ಸಂವಾದದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮತ್ತೂಂದು ಕಡೆ ಕೇಂದ್ರ ಸರ್ಕಾರ ಕೂಡ ಇದೇರೀತಿಯ ಬೇಜವಾಬ್ದಾರಿಯಿಂದ ವರ್ತಿಸಿತು. ಎರಡನೇಅಲೆ ಜನವರಿ ಬಳಿಕ ಬರುತ್ತದೆ ಎನ್ನುವುದು ಕೇಂದ್ರಮತ್ತು ರಾಜ್ಯ ಸರ್ಕಾರಕ್ಕೆ ಗೊತ್ತಿತ್ತು. ಆದರೂ ಕೇಂದ್ರಸರ್ಕಾರ ಐದು ರಾಜ್ಯಗಳ ಚುನಾವಣೆ ಘೋಷಿಸಿತು.ಕುಂಭಮೇಳ ನಡೆಯುವುದಕ್ಕೂ ಅವಕಾಶ ನೀಡಿತು.ಇತರೆ ದೇಶಗಳಲ್ಲಿ ಎರಡನೇ ಅಲೆ ಸಂದರ್ಭದಲ್ಲಿಉಂಟಾದ ಸ್ಥಿತಿ ಗೊತ್ತಿದ್ದೂ ಕೇಂದ್ರ ಸರ್ಕಾರ ಸಂಪೂರ್ಣಮೈಮರೆಯಿತು ಎಂದು ಆರೋಪಿಸಿದರು.

ಪ್ಯಾಕೇಜ್‌ ಘೋಷಿಸಿ: ಕೇಂದ್ರ ಮತ್ತು ರಾಜ್ಯಸರ್ಕಾರಗಳು ಹೀಗಾಗಿ ಈ ಹಿಂದೆಯೇ ನಾನು ಒತ್ತಾಯಿಸಿರುವಂತೆ ಅವತ್ತೇ ದುಡಿದು ಅವತ್ತೇ ತಿನ್ನಬೇಕಾದ ಬಡ ಕುಟುಂಬಗಳಿಗೆ 10 ಕೆಜಿ ಅಕ್ಕಿಜತೆಗೆ ಅವರ ಕೈಗೆ 10 ಸಾವಿರ ರೂ. ಕೊಡಬೇಕು ಎಂದು ಮತ್ತೂಮ್ಮೆ ಒತ್ತಾಯಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next