Advertisement

ಆರೋಗ್ಯ ಸಮಸ್ಯೆ ಇರುವವರಿಗೆ ಕೋವಿಡ್‌ ಹೆಚ್ಚು ಅಪಾಯಕಾರಿ

01:30 PM Jun 20, 2020 | mahesh |

ಜಿನೇವಾ: ಒಂದಕ್ಕಿಂತ ಹೆಚ್ಚು ಆರೋಗ್ಯ ಸಮಸ್ಯೆಗಳಿರುವವರು, ಹೃದಯ, ಯಕೃತ್ತಿನ ಕಾಯಿಲೆಗಳು ಮತ್ತು ಧೂಮಪಾನಿಗಳು ಕೋವಿಡ್‌ -19ಗೆ ಬಲಿಯಾಗುವ ಸಾಧ್ಯತೆ ಹೆಚ್ಚು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಅಂತಹವರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಿರುವುದರಿಂದ ಅವರಿಗೆ ಕೊರೊನಾ ವೈರಸ್‌ ತಗಲಿದರೆ ಅದು ಅಪಾಯಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಿಳಿಸಿದ್ದಾರೆ.

Advertisement

ಧೂಮಪಾನಿಗಳಲ್ಲಿ ಎಸಿಇ 2 (ಆಂಜಿಯೋಟೆನ್ಸಿನ್‌ ಪರಿವರ್ತಿಸುವ ಕಿಣ್ವ 2) ಹೆಚ್ಚಿರುತ್ತವೆ. ಅದರಿಂದ ಉರಿಯೂತ ಉಂಟಾಗುವ ಸಾಧ್ಯತೆಯಿದೆ ಮತ್ತು ಅದು ಹೆಚ್ಚು ಸ್ರವಿಸುವುದರಿಂದ ಕೋಶಗಳು ಸೋಂಕುಗಳಿಗೆ ತುತ್ತಾಗುವ ಅಪಾಯ ಅಧಿಕ. ಶ್ವಾಸಕೋಶಗಳು, ಅಪಧಮನಿಗಳು, ಹೃದಯ, ಮೂತ್ರಪಿಂಡ ಮತ್ತು ಕರುಳಿನಲ್ಲಿನ ಕೋಶಗಳ ಹೊರ ಮೇಲ್ಮೆ„ಯಲ್ಲಿ ಕಾಣಿಸುವ ಎಸಿಇ 2 ಕೊರೊನಾ ವೈರಸ್‌ ಪ್ರವೇಶ ಬಿಂದುವಾಗಿಯೂ ಕಾರ್ಯನಿರ್ವಹಿಸು ಸಾಧ್ಯತೆಯಿದೆ ಎನ್ನಲಾಗಿದೆ.

ಯೂನಿವರ್ಸಿಟಿ ಕಾಲೇಜ್‌ ಲಂಡನ್‌ ಅಧ್ಯಯನದ ಪ್ರಕಾರ, ಧೂಮಪಾನಿಗಳು ಧೂಮಪಾನಿಗಳಲ್ಲದವರಿಗೆ ಮತ್ತು ಧೂಮಪಾನವನ್ನು ತ್ಯಜಿಸುವವರಿಗೆ ಹೋಲಿಸಿದರೆ 1.45 ಪಟ್ಟು ಹೆಚ್ಚು ತೀವ್ರವಾದ ತೊಂದರೆಗಳನ್ನು ಹೊಂದಿರುತ್ತಾರೆ. ಧೂಮಪಾನವು ಶ್ವಾಸಕೋಶದ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುವುದರಿಂದ ಸೋಂಕುಗಳ ವಿರುದ್ಧ ಹೊರಾಡುವ ದೇಹದ ರೋಗನಿರೋಧಕ ಶಕ್ತಿಯನ್ನು ನಿಗ್ರಹಿಸಲ್ಪಡುತ್ತದೆ. ಧೂಮಪಾನವು ಶ್ವಾಸಕೋಶ ಮತ್ತು ಗಂಟಲಿನ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.

ದೀರ್ಘ‌ಕಾಲದ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿರುವ ಕೋವಿಡ್‌ -19 ಸೋಂಕಿಗೆ ತುತ್ತಾದರೆ ಮರಣ ಹೊಂದುವ ಅಪಾಯ ಶೇ. 63ರಷ್ಟಿದೆ.
60 ವರ್ಷ ವಯಸಿಗಿಂತ ಮೇಲಿನ ಮಧುಮೇಹ ಮತ್ತು ಅಧಿಕ ರಕ್ತದೊತ್ತಡವನ್ನು ಹೊಂದಿರುವವರನ್ನು ಕೊಮೊರ್ಬಿಡಿಟಿಗಳೆಂದು ಪರಿಗಣಿಸಲಾಗುತ್ತದೆ. ಡಬ್ಲ್ಯುಎಚ್‌ಒ ಪ್ರಕಟಿಸಿದ ಸಾರ್ವಜನಿಕ ಆರೋಗ್ಯ ತಜ್ಞರ ಅಧ್ಯಯನಗಳ ವಿಮರ್ಶೆಯಲ್ಲಿ, ಧೂಮಪಾನಿಗಳ ಮೇಲೆ ಕೋವಿಡ್‌ -19 ಗಂಭೀರ ಪರಿಣಾಮ ಬೀರಬಹುದು. ಅಲ್ಲದೆ ಕೊಮೊರ್ಬಿಡಿಟಿಗಳ ಮೇಲೂ ಹೆಚ್ಚು ತೀವ್ರತರವಾದ ಅಪಾಯ ಉಂಟು ಮಾಡಬಹುದು ಎಂದು ಕಾಂಟಿನೆಂಟಲ್‌ ಆಸ್ಪತ್ರೆ ಗಳ ಹಿರಿಯ ಸಲಹೆಗಾರ ಪಲ್ಮನೊಲೊಜಿಸ್ಟ್  ಡಾ| ನಿಶಾಂತ್‌ ಸಿನ್ಹಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next