Advertisement

ವಿದ್ಯಾರ್ಥಿಗಳಿಗೆ ವಕ್ಕರಿಸಿದ ಸೋಂಕು

08:11 PM Apr 22, 2021 | Team Udayavani |

ತೇರದಾಳ: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಬುಧವಾರ 14 ಜನರಿಗೆ ಕೋವಿಡ್‌ ಸೋಂಕು ದೃಢಪಟ್ಟಿದ್ದು, ಇದರಿಂದ ಸೋಂಕಿತರ ಸಂಖ್ಯೆ 34ಕ್ಕೇರಿದೆ.

Advertisement

ಬುಧವಾರದ 14 ಸೋಂಕಿತರ ಪೈಕಿ ಐವರು ಮೆಡಿಕಲ್‌ ವಿದ್ಯಾರ್ಥಿಗಳು, ಮೂವರು ಪಟ್ಟಣದ ಬೇರೆ ಬೇರೆ ವಾರ್ಡ್‌ಗಳಲ್ಲಿನ ನಿವಾಸಿಗಳಾದರೆ, ಸಮೀಪದ ಗ್ರಾಮಗಳಾದ ಗೋಲಭಾವಿಯಲ್ಲಿ 4, ಸಸಾಲಟ್ಟಿ ಹಾಗೂ ಹಳಿಂಗಳಿ ಗ್ರಾಮದಲ್ಲಿ ತಲಾ ಒಬ್ಬರು ಸೋಂಕಿತರು ಕಾಣಿಸಿಕೊಂಡಿದ್ದಾರೆ. ಒಟ್ಟು 14ರಲ್ಲಿ ಐವರು ಪುರುಷರು ಮತ್ತು ಒಂಭತ್ತು ಮಹಿಳೆಯರಾಗಿದ್ದಾರೆ. ಪಟ್ಟಣದ ಆಯುರ್ವೇದಿಕ್‌ ಮೆಡಿಕಲ್‌ ಕಾಲೇಜಿನ ಐವರು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗಲಿದ್ದು, ಕಾಲೇಜಿಗೆ ರಜೆ ನೀಡಲಾಗಿದೆ.

ಮೆಡಿಕಲ್‌ ಕಾಲೇಜಿನಲ್ಲಿ ಬೇರೆ ಬೇರೆ ಜಿಲ್ಲೆ ಹಾಗೂ ವಿವಿಧ ರಾಜ್ಯಗಳ ನೂರಾರು ವಿದ್ಯಾರ್ಥಿಗಳಿದ್ದು, ಎಲ್ಲ ವಿದ್ಯಾರ್ಥಿಗಳನ್ನು ಅವರ ಊರುಗಳಿಗೆ ವಾಪಸ್‌ ಕಳುಹಿಸಲಾಗಿದೆ. ಇದರಿಂದ ಕಾಲೇಜಿನ ಸಿಬ್ಬಂದಿಯಲ್ಲಿ ಕೂಡ ಆತಂಕ ಶುರುವಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಪ್ರತಿದಿನ 120ರಷ್ಟು ಜನರಿಗೆ ಲಸಿಕೆ ಹಾಗೂ 150ರಷ್ಟು ಜನರಿಗೆ ಕೋವಿಡ್‌ ತಪಾಸಣೆ ನಡೆಯುತ್ತಿದೆ. ಸದ್ಯಕ್ಕೆ ತಪಾಸಣೆಗಾಗಲಿ ಮತ್ತು ಲಸಿಕೆಗೆಯಾಗಲಿ ಯಾವುದೇ ಕೊರತೆ ಎಲ್ಲ ಎಂದು ಆಸ್ಪತ್ರೆಯ ಆಯುಷ್‌ ವೈದ್ಯಾಧಿಕಾರಿ ಡಾ| ಸುದರ್ಶನ ನಡೋನಿ, ಹಿರಿಯ ಆರೋಗ್ಯ ಸಹಾಯಕ ಎ.ಎಲ್‌. ಬಡಿಗೇರ, ಎಂ.ಆರ್‌. ದಮಾನಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next