Advertisement
ಕಟಪಾಡಿ ಏಣಗುಡ್ಡೆ ದಿ| ಭುಜಂಗ ಶೆಟ್ಟಿ ಮತ್ತು ಬಲ್ಲಾಡಿಗುತ್ತು ಪ್ರೇಮಾ ಶೆಟ್ಟಿ ದಂಪತಿಯ ಪುತ್ರಿ ಯಾಗಿರುವ ಡಾ| ಪೂರ್ಣಿಮಾ ಸೋಲಾಪುರದಲ್ಲಿ ಎಂಬಿಬಿಎಸ್ ಮತ್ತು ಅರಿವಳಿಕೆ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. ಆ ಬಳಿಕ ನಾಲ್ಕು ವರ್ಷ ಬ್ರಿಟನ್‌ನಲ್ಲಿದ್ದು ಅರಿವಳಿಕೆಯ ಫೆಲೋಶಿಪ್ ಪಡೆದಿದ್ದಾರೆ. ರಿಯಾದ್‌ನಲ್ಲಿ 12 ವರ್ಷ ಅರಿವಳಿಕೆ ತಜ್ಞೆಯಾಗಿ ಕಾರ್ಯನಿರ್ವಹಿಸಿದ ಬಳಿಕ ಈಗ 11 ವರ್ಷಗಳಿಂದ ಅಬುಧಾಬಿಯ ಶೇಖ್ ಖಲೀಫಾ ಸಿಟಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಆಸ್ಪತ್ರೆಯಲ್ಲಿ ಸಂಭವಿಸುವ ರೋಗಿಗಳ ಸಾವು ಮಾನಸಿಕ ಸ್ಥೈರ್ಯ ವನ್ನು ಅಲ್ಲಾಡಿಸುತ್ತಿದ್ದರೂ ವೈದ್ಯಕೀಯ ಅನುಭವ ಮತ್ತು ಸ್ಥಿತಪ್ರಜ್ಞೆಯ ಜತೆ ಪತಿ ಮಹೇಶ್ ಹೆಗ್ಡೆ, ಮಕ್ಕಳಾದ ನಿಮಿತ್ ಮತ್ತು ಕ್ರಿಸ್ಮಿತಾ ಅವರ ಭಾವನಾತ್ಮಕ ಬೆಂಬಲ ನನ್ನ ಮನಸ್ಸನ್ನು ಗಟ್ಟಿಗೊಳಿಸಿತು ಎನ್ನುತ್ತಾರೆ ಡಾ| ಪೂರ್ಣಿಮಾ ಹೆಗ್ಡೆ ಅವರು. ಅವರ ಓರ್ವ ಸಹೋದರಿ ಮುಂಬಯಿಯ ಸರಕಾರಿ ಆಸ್ಪತ್ರೆಯಲ್ಲಿ ರೋಗ ಲಕ್ಷಣ ಶಾಸ್ತ್ರಜ್ಞೆ, ಇನ್ನೊಬ್ಟಾಕೆ ಸೂಕ್ಷ್ಮಜೀವ ಶಾಸ್ತ್ರಜ್ಞೆ ಆಗಿದ್ದು, ಅಲ್ಲಿ ಕೋವಿಡ್ ರೋಗಿಗಳ ಶುಶ್ರೂಷೆಯಲ್ಲಿ ನಿರತರಾಗಿದ್ದಾರೆ. ವೈದ್ಯ ವೃತ್ತಿಗೆ ಋಣಿ
ಸಂಯುಕ್ತ ಅರಬ್ ಸಂಸ್ಥಾನ ಯಾವುದೇ ರಾಷ್ಟ್ರೀಯತೆ, ಜಾತಿ, ಮತ, ಲಿಂಗ ಭೇದವಿಲ್ಲದೆ ಕೊರೊನಾದ ವಿರುದ್ಧ ಸಮರ ಸಾರಿದ ಪರಿಣಾಮ ಇಂದು ಅಬುಧಾಬಿಯ ನಮ್ಮ ಆಸ್ಪತ್ರೆಯು ಕೊರೊನಾ ಮುಕ್ತ ಆಸ್ಪತ್ರೆಯಾಗಿದೆ. ನಮ್ಮ ಆಸ್ಪತ್ರೆಗೆ ಕರ್ನಾಟಕ ಕರಾವಳಿಯವರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ನಮ್ಮೂರ ಜನರಿಗೆ ಚಿಕಿತ್ಸೆ ನೀಡುವ ಸಂದರ್ಭ ಪ್ರಾಪ್ತವಾದುದಕ್ಕೆ ಎಲ್ಲರಿಗೂ ಋಣಿಯಾಗಿದ್ದೇನೆ.
– ಡಾ| ಪೂರ್ಣಿಮಾ ಹೆಗ್ಡೆ