Advertisement

ಭಾರತಕ್ಕೆ ಆಗಮಿಸುವ ಈ ಹನ್ನೊಂದು ದೇಶಗಳ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ

07:49 PM Oct 20, 2021 | Team Udayavani |

ನವದೆಹಲಿ: ಹೊರದೇಶಗಳಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರಿಗೆ ಈ ಹಿಂದೆ ವಿಧಿಸಲಾಗಿದ್ದ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಪರಿಷ್ಕರಿಸಿದೆ. ಎರಡು ಡೋಸ್‌ ಕೊರೊನಾ ಲಸಿಕೆಯನ್ನು ಪಡೆದಿರುವ ಪ್ರಯಾಣಿಕರಿಗೆ ಹೋಂ ಕ್ವಾರಂಟೈನ್‌ ಹಾಗೂ ಇನ್ನಿತರ ಮರುಪರೀಕ್ಷೆಗಳಿಂದ ವಿನಾಯ್ತಿ ನೀಡಲಾಗಿದೆ. ಆರ್‌ಟಿ-ಪಿಸಿಆರ್‌ ಪರೀಕ್ಷೆಯ ಪ್ರಮಾಣಪತ್ರವನ್ನು ತೋರಿಸುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Advertisement

ಈ ಪ್ರಮಾಣಪತ್ರಗಳ ಖಚಿತತೆ ಖಾತ್ರಿಯಾಗದ ಹೊರತು ಯಾರನ್ನೂ ವಿಮಾನ ನಿಲ್ದಾಣದಿಂದ ಆಚೆ ಕಳಿಸಲಾಗದು. ಈ ಹೊಸ ನಿಯಮಗಳು ಅ. 25ರಿಂದ ಜಾರಿಗೊಳ್ಳಲಿದ್ದು, ಈ ಹಿಂದೆ, ಫೆ. 17ರಂದು ವಿದೇಶಿ ಪ್ರಯಾಣಿಕರಿಗಾಗಿ ಜಾರಿಗೊಳಿಸಲಾಗಿದ್ದ ಮಾರ್ಗಸೂಚಿಗಳ ಬದಲಾಗಿ ಜಾರಿಗೊಳ್ಳುತ್ತದೆ ಎಂದು ಕೇಂದ್ರ ಸ್ಪಷ್ಟಪಡಿಸಿದೆ.
ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಭಾರತ ಸರ್ಕಾರಗಳಿಂದ ಅಂಗೀಕೃತಗೊಂಡಿರುವ ದೇಶಗಳಿಂದ ಆಗಮಿಸುವವರಿಗೆ ಮಾತ್ರ ಭಾರತಕ್ಕೆ ಬರಲು ಅವಕಾಶ ಕಲ್ಪಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಡೋಸ್‌ ಪಡೆಯದಿದ್ದರೆ ಕ್ವಾರಂಟೈನ್‌
ಒಂದು ಡೋಸ್‌ ಪಡೆದವರು ಅಥವಾ ಯಾವುದೇ ಡೋಸ್‌ ಪಡೆಯದಿದ್ದವರು, ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೂಡಲೇ ಅವರು ಕೊರೊನಾ ಪರೀಕ್ಷೆಗೆ ಒಳಪಡಬೇಕು ಎಂದು ಪರಿಷ್ಕೃತ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಪರೀಕ್ಷೆಗಳಿಗಾಗಿ ಸ್ಯಾಂಪಲ್‌ಗ‌ಳನ್ನು ಸಂಗ್ರಹಿಸಿದ ನಂತರ ಅವರನ್ನು ವಿಮಾನ ನಿಲ್ದಾಣದಿಂದ ಹೊರಕ್ಕೆ ಹೋಗಲು ಅನುಮತಿ ನೀಡಲಾಗುತ್ತದೆ. ಕೊರೊನಾ ಲಕ್ಷಣಗಳಿದ್ದರೆ, ಕಡ್ಡಾಯವಾಗಿ 7 ದಿನಗಳ ಕ್ವಾರಂಟೈನ್‌ಗೆ ಒಳಪಡಬೇಕಾಗುತ್ತದೆ. ಎಂಟನೇ ದಿನ ಅವರು ಪುನಃ ಮರು ಪರೀಕ್ಷೆಗೊಳಗಾಗಬೇಕಿರುತ್ತದೆ. ಆಗ, ಪುನಃ ನೆಗೆಟಿವ್‌ ಫ‌ಲಿತಾಂಶ ಬಂದರೆ, ಅಂಥವರು ಇನ್ನೂ ಏಳು ದಿನ ಸ್ವಯಂ ಅವಗಾಹನೆಗೆ ಒಳಪಡಬೇಕಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ :ಸಫಾಯಿ ಕರ್ಮಚಾರಿ ಸಾವು; ಸಾಂತ್ವನ ಹೇಳಲು ಬಂದ ಪ್ರಿಯಾಂಕಾಗೆ ತಡೆ

ಯಾವ ದೇಶದಿಂದ ಬರುವವರಿಗೆ ಅನ್ವಯ?
ಯುನೈಟೆಡ್‌ ಕಿಂಗ್‌ಡಮ್‌, ಫ್ರಾನ್ಸ್‌, ಜರ್ಮನಿ, ನೇಪಾಳ, ಬೆಲಾರಸ್‌, ಲೆಬನಾನ್‌, ಅರ್ಮೇನಿಯಾ, ಉಕ್ರೇನ್‌, ಬೆಲ್ಜಿಯಂ, ಹಂಗೇರಿ, ಸರ್ಬಿಯಾ.

Advertisement
Advertisement

Udayavani is now on Telegram. Click here to join our channel and stay updated with the latest news.

Next