ಕುಷ್ಟಗಿ: ತಾಲೂಕಿನ ಹನುಮಸಾಗರದಲ್ಲಿ ಏ. 1 ಹಾಗೂ 2ರಂದು ನಿಗದಿಯಾಗಿರುವ ಕೊಪ್ಪಳ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೊರೊನಾ ಕರಿನೆರಳಿನ ನಿರ್ಬಂಧ ಹೇರಲಾಗಿದೆ.
ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಮುಂಜಾಗ್ರತೆ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್ ಮಾರ್ಗಸೂಚಿ ಪಾಲಿಸಲೇಬೇಕಿದೆ. ಕೊಪ್ಪಳ ಜಿಲ್ಲೆಯಲ್ಲಿ ನಡೆದ ತಾಲೂಕು ಸಮ್ಮೇಳನಗಳಿಗೆ ಯಾವುದೇ ಕೋವಿಡ್ ಮಾರ್ಗಸೂಚಿಯ ನಿರ್ಬಂಧಗಳಿರಲಿಲ್ಲ. ಹೀಗಾಗಿ ಅದ್ಧೂರಿಯಾಗಿ ಸಮ್ಮೇಳನಗಳು ನಡೆದಿವೆ.
ಆದರೀಗ ಕೊಪ್ಪಳ ಜಿಲ್ಲೆಯ 12ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಿರ್ಬಂಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಬುಧವಾರ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ಎಂ. ಸಿದ್ದೇಶ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಕೇವಲ ಇಬ್ಬರೇ ಅಧಿ ಕಾರಿಗಳು ಭಾಗವಹಿಸಿದ್ದರಿಂದ ಯಾವೂದೇ ಚರ್ಚೆಗೆ ಅವಕಾಶ ಇರಲಿಲ್ಲ.
ಈ ಹಿನ್ನೆಲೆಯಲ್ಲಿ ಸರ್ಕಾರದ ಕೋವಿಡ್ ಮಾರ್ಗಸೂಚಿ ಪಾಲಿಸುವ ನಿರ್ಣಯ ಕೈಗೊಳ್ಳಲಾಯಿತು. ಸಮ್ಮೇಳನಕ್ಕೆ ಪರವಾನಗಿಯನ್ನು ಕೋವಿಡ್ ಮಾರ್ಗಸೂಚಿ ಪ್ರಕಾರ ನೀಡಲಾಗಿದೆ. 10 ವರ್ಷದೊಳಗಿನ ಹಾಗೂ 60 ವರ್ಷ ಮೇಲ್ಪಟ್ಟವರನ್ನು ಸಮ್ಮೇಳನಕ್ಕೆ ನಿರ್ಬಂಧಿ ಸಿದೆ. ಸಮ್ಮೇಳನದಲ್ಲಿ 500 ಜನಸಂಖ್ಯೆ ಮೀರುವಂತಿಲ್ಲ.
ಸಮ್ಮೇಳನದಲ್ಲಿ ಭಾಗವಹಿಸಿದವರು ಕಡ್ಡಾಯ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಬಳಸಬೇಕೆಂದು ಸೂಚಿಸಲಾಗಿದೆ. ಯಾವೂದೇ ಕಾರಣಕ್ಕೂ ಕೋವಿಡ್ ಮಾರ್ಗಸೂಚಿ ಉಲ್ಲಂಘಿ ಸದಂತೆ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯವರಿಗೆ ಜವಾಬ್ದಾರಿ ವಹಿಸಲಾಗಿದೆ. ಈ ಸಭೆಯಲ್ಲಿ ಆರೋಗ್ಯ ಇಲಾಖೆಯ ಡಾ| ಶರಣು ಮೂಲಿಮನಿ ಹಾಗೂ ಇತರರು ಪಾಲ್ಗೊಂಡಿದ್ದರು