Advertisement

ನರ್ಸಿಂಗ್‌ ಸ್ಕೂಲ್‌ನ 15 ವಿದ್ಯಾರ್ಥಿನಿಯರಿಗೆ ಕೋವಿಡ್

01:19 PM Dec 24, 2020 | Suhan S |

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣ ಕಡಿಮೆಯಾಗು ತ್ತಿರುವ ಬೆನ್ನಲ್ಲೇ ಕೊಳ್ಳೇಗಾಲತಾಲೂಕಿನ ಕಾಮಗೆರೆಯ ಹೋಲಿಕ್ರಾಸ್‌ ಆಸ್ಪತ್ರೆಯ ನರ್ಸಿಂಗ್‌ ಸ್ಕೂಲ್‌ನ 15 ವಿದ್ಯಾರ್ಥಿನಿಯರಿಗೆ ಕೋವಿಡ್ ಸೋಂಕು ತಗುಲಿದೆ.

Advertisement

ಹೋಲಿ ಕ್ರಾಸ್‌ ಆಸ್ಪತ್ರೆಯ ಕಾಂಪೌಂಡ್‌ನೊಳಗೆ, ಆಸ್ಪತ್ರೆಯ ಹಿಂಬದಿ ನರ್ಸಿಂಗ್‌ ಸ್ಕೂಲ್‌ ಇದೆ. ಕೋವಿಡ್‌ ಹಿನ್ನೆಲೆ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರಿಗೆ ಆನ್‌ಲೈನ್‌ ಕ್ಲಾಸ್‌ ನಡೆಯುತ್ತಿವೆ. 130 ವಿದ್ಯಾರ್ಥಿನಿಯರುಹಾಸ್ಟೆಲ್‌ನಲ್ಲಿದ್ದಾರೆ.ಇಲ್ಲಿಕೇರಳ,ಮಣಿಪುರ, ಛತ್ತಿಸ್‌ಗಢ, ಜಾರ್ಖಂಡ್‌ ಹಾಗೂ ಕರ್ನಾಟಕದ ವಿದ್ಯಾರ್ಥಿಗಳಿದ್ದಾರೆ.

ಹಾಸ್ಟೆಲ್‌ನ ವಿದ್ಯಾರ್ಥಿನಿಯರಲ್ಲಿ ಕೆಲವರಿಗೆ ನೆಗಡಿ, ತಲೆನೋವು, ಕೆಮ್ಮು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ಕೂಲ್‌ನ ಪ್ರಿನ್ಸಿಪಾಲ್‌ ಅವರು ಕಾಮಗೆರೆಯ ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿಯರ ಕೋವಿಡ್‌ ಪರೀಕ್ಷೆಗೆ ಮನವಿಮಾಡಿದ್ದರು. ಸೋಮವಾರ ವಿದ್ಯಾರ್ಥಿನಿಯರಗಂಟಲು ದ್ರವ ಮಾದರಿ ಪರೀಕ್ಷೆ ಮಾಡಲಾಯಿತು.ಅದರ ಫ‌ಲಿತಾಂಶ ಮಂಗಳವಾರ ಬಂದಿದ್ದು, 15 ವಿದ್ಯಾರ್ಥಿನಿಯರಿಗೆ ಪಾಸಿಟಿವ್‌ ಇರುವುದು ದೃಢಪಟ್ಟಿದೆ. ಮಂಗಳವಾರ ಜಿಲ್ಲೆಯಲ್ಲಿ ಒಟ್ಟು 26 ಪ್ರಕರಣಗಳು ಪತ್ತೆಯಾಗಿವೆ. ಇವುಗಳಲ್ಲಿ 15 ಕೇಸ್‌ಗಳು ನರ್ಸಿಂಗ್‌ ಶಾಲೆಯದೇ ಆಗಿದ್ದವು! ಈ 15 ಪಾಸಿಟಿವ್‌ ಪ್ರಕರಣಗಳಲ್ಲಿ ಮೂವರು ಕೊಳ್ಳೇಗಾಲದವರು ಎಂದು ತಿಳಿದುಬಂದಿದೆ.

ವಿದ್ಯಾರ್ಥಿನಿಯರಿಗೆ ಕೋವಿಡ್‌ ಹೇಗೆ ಹರಡಿರಬಹುದೆಂದು ತಿಳಿದುಬಂದಿಲ್ಲ. 10 ದಿನಗಳ ಹಿಂದೆ ನರ್ಸಿಂಗ್‌ ತರಗತಿಯ ವಾರ್ಷಿಕ ಪರೀಕ್ಷೆಗಳುಇಲ್ಲಿ ನಡೆದಿದ್ದವು. ಇದು ಪರೀಕ್ಷಾ ಸೆಂಟರ್‌ ಆಗಿರುವುದರಿಂದ ಬೇರೆ ಕಾಲೇಜುಗಳಿಂದಲೂ ವಿದ್ಯಾರ್ಥಿಗಳು ಬರೆದಿದ್ದರು. ಈ ವೇಳೆ ಹೊರಗಿನಿಂದ ಬಂದವರಿಂದ ಕೋವಿಡ್‌ ಹರಡಿರಬಹುದು.ಹಾಸ್ಟೆಲ್‌ ಆದ್ದರಿಂದ ಒಬ್ಬರಿಂದೊಬ್ಬರಿಗೆ ಸೋಂಕುತಗುಲಿರಬಹುದೆಂದು ಶಂಕಿಸಲಾಗಿದೆ. ಅಲ್ಲದೇವಿದ್ಯಾರ್ಥಿನಿಯರನ್ನು ನೋಡಲು ಪೋಷಕರು ಹೊರಗಿನಿಂದ ಬರುತ್ತಾರೆ. ಜೊತೆಗೆ ವಾರಂತ್ಯದಲ್ಲಿವಿದ್ಯಾರ್ಥಿನಿಯರು ಶಾಪಿಂಗ್‌ಗಾಗಿ ಕೊಳ್ಳೇಗಾಲ, ಮೈಸೂರಿಗೂ ಹೋಗುತ್ತಾರೆ. ಆಗ ಹರಡಿರಬಹುದೆಂದು ಹೇಳಲಾಗುತ್ತಿದೆ.

ಸೋಮವಾರ 48 ವಿದ್ಯಾರ್ಥಿಗಳ ಪರೀಕ್ಷೆ ನಡೆಸಲಾಗಿತ್ತು.ಮತ್ತೆಮಂಗಳವಾರ25ವಿದ್ಯಾರ್ಥಿನಿಯರ ಪರೀಕ್ಷೆ ನಡೆಸಿದ್ದು, ಎಲ್ಲರಲ್ಲೂ ನೆಗೆಟಿವ್‌ ಬಂದಿದೆ. ಸೋಂಕಿತ ವಿದ್ಯಾರ್ಥಿನಿಯರನ್ನು ಹೋಲಿ ಕ್ರಾಸ್‌ಆಸ್ಪತ್ರೆಯ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಐಸೋಲೇಷನ್‌ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಪರೀಕ್ಷೆಯಲ್ಲಿ ನೆಗೆಟಿವ್‌ ಫ‌ಲಿತಾಂಶ ಬಂದವಿದ್ಯಾರ್ಥಿನಿಯರನ್ನು ಒಂದು ವಿಭಾಗದಲ್ಲಿ, ಇನ್ನೂ ಪರೀಕ್ಷೆ ನಡೆಸದ ವಿದ್ಯಾರ್ಥಿನಿಯರನ್ನು ಇನ್ನೊಂದು ವಿಭಾಗದಲ್ಲಿ ಇರಿಸಲಾಗಿದೆ.

Advertisement

ಈ ನರ್ಸಿಂಗ್‌ ಸ್ಕೂಲ್‌ನ ವಿದ್ಯಾರ್ಥಿನಿಯರು ಹೋಲಿಕ್ರಾಸ್‌ ಆಸ್ಪತ್ರೆಗೆ ಬಂದಿಲ್ಲ. ಆಸ್ಪತ್ರೆ, ನರ್ಸಿಂಗ್‌ಸ್ಕೂಲ್‌ ಪ್ರತ್ಯೇಕವಾಗಿವೆ. ಹೀಗಾಗಿ ರೋಗಿಗಳು,ಸಾರ್ವಜನಿಕರು ಆತಂಕಪಡಬೇಕಾಗಿಲ್ಲ ಎಂದು ಆಸ್ಪತ್ರೆ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

 

ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next