ಕೋಲಾರ: ಹೆಚ್ಚುತ್ತಿರುವ ಕೋವಿಡ್ ಆತಂಕದ ನಡುವೆಯೇ ಒಂದೇ ಗ್ರಾಮದಲ್ಲಿ ನಾಲ್ವರ ಸಾವನ್ನಪ್ಪಿರುವ ಘಟನೆ ತಾಲೂಕಿನ ಗ್ರಾಮದಲ್ಲಿ ಮಂಗಳವಾರ ಜರುಗಿದೆ.
ಕೋಲಾರ ತಾಲೂಕಿನ ಕ್ಯಾಲನೂರು ಸಮೀಪದ ಕಾಮಾಂಡಹಳ್ಳಿ ಗ್ರಾಮದಲ್ಲಿ ಈ ಘಟನೆ ಜರುಗಿದ್ದು, ಗ್ರಾಮದಲ್ಲಿ ಆತಂಕ ಮೂಡಿಸಿದೆ.
ಗ್ರಾಮದ ಒಂದೆ ಕುಟುಂಬದ ಮೂರು ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟರೆ, ಒಬ್ಬರು ಸ್ವಾಭಾವಿಕವಾಗಿ ಸಾವನ್ನಪ್ಪಿದ್ದಾರೆ.
ಗ್ರಾಮದ 70 ವರ್ಷದ ವೃದ್ಧೆ ಸ್ವಾಭಾವಿಕವಾಗಿ ಸಾವನ್ನಪ್ಪಿದರೆ, ಇನ್ನುಳಿದಂತೆ 40 ಮತ್ತು 50 ವರ್ಷದ ಪುರುಷರು ಹಾಗೂ 65 ವರ್ಷದ ಮಹಿಳೆ ಮೃತಪಟ್ಟವರಾಗಿದ್ದಾರೆ. ಗ್ರಾಮದಲ್ಲಿ ಸರಣಿ ಸಾವಿನಿಂದ ಹೆಚ್ಚಾದ ಕಾರಣ ಆತಂಕ ಹೆಚ್ಚಾಗಿದೆ.
ಗ್ರಾಮದಲ್ಲಿ ಸ್ಯನಿಟೈಸರ್ ಸಿಂಪಡಣೆ ಮಾಡಿ ಪಂಚಾಯ್ತಿ ಅಧಿಕಾರಿಗಳು ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ. ಸದ್ಯ ಗ್ರಾಮದಲ್ಲಿ ಇನ್ನೂ 12 ಜನರಲ್ಲಿ ಕೋವಿಡ್ ಸೋಂಕಿತರು ಇದ್ದು, ಇಡೀ ಗ್ರಾಮವನ್ನು ಕಂಟೈನ್ಮೆಂಟ್ ವಲಯ ಎಂದು ಘೋಷಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ಮಂಗಳವಾರ ಕೊರೊನದಿಂದ ಏಳು ಮಂದಿ ಕೊನೆಯುಸಿರು ಎಳೆದಿದ್ದು ಈವರೆಗೂ 244 ಮಂದಿ ಸಾವನ್ನಪ್ಪಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಒಟ್ಟು 3669 ಕೋವಿಡ್ ಸಕ್ರಿಯ ಪ್ರಕರಣಗಳಿವೆ.