Advertisement

ಕೋವಿಡ್ ನಿಮಿತ್ತ ಈ ಬಾರಿಯೂ ದಾಂಡೇಲಿಯಲ್ಲಿ ದಾಂಡಿಯಾ ಡೌಟ್

07:33 PM Oct 05, 2021 | Team Udayavani |

ದಾಂಡೇಲಿ : ಗುಜರಾತಿನ ಸಾಂಪ್ರದಾಯಿಕ ನೃತ್ಯ ರೂಪವಾದ ದಾಂಡಿಯಾ ಉತ್ಸವವನ್ನಂತು ದಾಂಡೇಲಿಯ ಗಲ್ಲಿ ಗಲ್ಲಿಗಳಲ್ಲಿ ಆಚರಿಸಿಕೊಂಡು ಬರಲಾಗುತ್ತಿರುವುದು ವಿಶೇಷ. ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಗೆ ಉದ್ಯೋಗವನ್ನರಸಿ ಗುಜರಾತಿನ ಬಂದು ಇಲ್ಲಿ ನೆಲೆಸಿದವರು ದಾಂಡಿಯಾವನ್ನು ದಾಂಡೇಲಿಯಲ್ಲಿ ರೂಢಿ ಮಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಅನೇಕತೆಯಲ್ಲಿ ಏಕತೆಯನ್ನು ಸಾರುವ ದಾಂಡೇಲಿಯಲ್ಲಿ ಎಲ್ಲ ಧರ್ಮಿಯರ ಹಬ್ಬ ಹರಿದಿನಗಳನ್ನು ಸಂಭ್ರಮ, ಸಡಗರದಿಂದ ಆಚರಿಸಿಕೊಂಡು ಬರಲಾಗುತ್ತಿದೆ.

Advertisement

ನವರಾತ್ರಿಯ ಈ ವಿಶೇಷ ಸಂದರ್ಭದಲ್ಲಿ ಸಂಜೆಯಾಗುತ್ತಲೆ ಗಲ್ಲಿ ಗಲ್ಲಿಗಳಲ್ಲಿ ಕೋಲಾಟದ ಶಬ್ದ ಮೇಳೈಸುತ್ತದೆ. ಜಾತಿ, ಮತ, ಧರ್ಮ ಎಂಬ ಬೇಧವೆನ್ನದೇ ಸರ್ವರು ಒಂದಾಗಿ ಆಚರಿಸುವ ದಾಂಡಿಯಾ ಕೋಲಾಟ ಈ ಬಾರಿಯೂ ನಡೆಯುವುದು ಕಷ್ಟ ಎಂಬ ಸ್ಥಿತಿಯಿದೆ. ಕಳೆದ ವರ್ಷವೂ ಕೊರೊನಾ ಕಾರಣದಿಂದ ದಾಂಡಿಯಾದ ಕೋಲಾಟ ಶಬ್ದ ಮಾಡಿರಲಿಲ್ಲ. ಈ ವರ್ಷವೂ ಕೊರೊನಾ ಮೂರನೆ ಅಲೆಯ ಕಾರಣವನ್ನು ಮುಂದಿಟ್ಟುಕೊಂಡು ದಾಂಡಿಯಾಕ್ಕೆ ಅನುಮತಿ ನೀಡುವುದು ಡೌಟ್ ಅನಿಸುವಂತಿದೆ.

ಇದೇ ಕಾರಣಕ್ಕಾಗಿ ದಾಂಡಿಯಾ ಉತ್ಸವ ಸಮಿತಿಗಳು ದಾಂಡಿಯಾ ಮಾಡಲು ಯಾವುದೇ ಸಿದ್ದತೆಯನ್ನು ನಡೆಸಿರುವುದು ನಗರದಲ್ಲಿ ಕಂಡುಬರುತ್ತಿಲ್ಲ. ಆದರೆ ನಗರಾಡಳಿತ, ತಾಲೂಕಾಡಳಿತ ಮತ್ತು ಪೊಲೀಸ್ ಇಲಾಖೆ ಅನುಮತಿ ನೀಡಿದ್ದೇಯಾದಲ್ಲಿ ಒಂದೆ ದಿನಕ್ಕೆ ದಾಂಡಿಯಾ ಉತ್ಸವ ಸಮಿತಿಗಳು ಎಲ್ಲ ಸಿದ್ದತೆಗಳನ್ನು ಮಾಡಲು ತುದಿಗಾಲಲ್ಲಿ ನಿಂತಿವೆ ಎನ್ನುವುದು ವಾಸ್ತವ ಸತ್ಯ, ಕಾರಣವಿಷ್ಟೆ ದಾಂಡಿಯಾ ಉತ್ಸವದ ಮಜಾವೆ ಅಂತಹದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next