Advertisement

ಕಲಾವಿದರಿಗೆ ಈ ವರ್ಷವೂ ತಪ್ಪದ ಕೊರೊನಾ ಕಾಟ

08:01 PM Jul 21, 2021 | Team Udayavani |

ವರದಿ: ಬಸವರಾಜ ಹೂಗಾರ

Advertisement

ಹುಬ್ಬಳ್ಳಿ: ಕೊರೊನಾ ಹೊಡೆತಕ್ಕೆ ಸಿಲುಕಿ, ಮೂರ್ತಿಗಳನ್ನು ತಯಾರಿಸುವ ಕಲಾವಿದರ ಬದುಕು ಅಲ್ಲೋಲ-ಕಲ್ಲೋಲವಾಗಿದೆ. ಕಳೆದ ವರ್ಷವೂ ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದ ಗಣೇಶ ಮೂರ್ತಿಗಳನ್ನು ತಯಾರಿಸುವ ಕಲಾವಿದರು ಈ ವರ್ಷವೂ ಏನು-ಹೇಗೆ ಎಂಬ ಗೊಂದಲದಲ್ಲಿದ್ದು, ಸರಕಾರದ ನಿರ್ದೇಶನದತ್ತ ಕಾಯುತ್ತ ಕುಳಿತಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷ ಸರಕಾರ ಗಣೇಶೋತ್ಸವಕ್ಕೆ ಒಲ್ಲದ ಮನಸ್ಸಿನಿಂದ ಪರವಾನಗಿ ನೀಡಿತ್ತು. ಕೊನೆ ಕ್ಷಣದಲ್ಲಿ ಅವಕಾಶ ನೀಡಿದ್ದರಿಂದ ಸಾರ್ವಜನಿಕ ಗಣೇಶೋತ್ಸವಕ್ಕೆ ದೊಡ್ಡ ಹೊಡೆತ ಬಿದ್ದಿತ್ತು. ಕಳೆದ ವರ್ಷ ಮುಂಚಿತವಾಗಿ ಸಾರ್ವಜನಿಕ ಗಣೇಶ ಸಿದ್ಧಪಡಿಸಲು ನೂರಾರು ಸಂಘ-ಸಂಸ್ಥೆಯವರು ಮುಂಗಡ ನೀಡಿ ಬುಕ್ಕಿಂಗ್‌ ಮಾಡಿ ಕೊನೆಯ ಕ್ಷಣದವರೆಗೆ ಕಾಯ್ದು ಬುಕ್ಕಿಂಗ್‌ ರದ್ದುಪಡಿಸಿ ಹಣ ಮರಳಿ ಪಡೆದಿದ್ದರು. ಇದು ಕಲಾವಿದರ ಸಂಕಷ್ಟ ಹೆಚ್ಚುವಂತೆ ಮಾಡಿತ್ತು. ಕಲಾವಿದರು ಸಾಲ ಮಾಡಿ ತಯಾರಿಸಿದ್ದ ದೊಡ್ಡ ದೊಡ್ಡ ಗಣೇಶ ಮೂರ್ತಿಗಳು ಮಾರಾಟವಾಗದೆ ಹಾಗೇ ಉಳಿದುಕೊಂಡು ಬಿಟ್ಟಿದ್ದವು.

ಮಹಾರಾಷ್ಟ್ರದಲ್ಲಿ ಈಗಾಗಲೇ ಹಲವಾರು ನಿಯಮಗಳೊಂದಿಗೆ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಿದ್ದು, ಅದೇ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಗಣೇಶೋತ್ಸವ ಆಚರಣೆಗೆ ಎಲ್ಲ ನಿಯಮಗಳೊಂದಿಗೆ ಅವಕಾಶ ನೀಡಬೇಕೆಂಬುದು ಕಲಾವಿದರ ಬೇಡಿಕೆ.

Advertisement

Udayavani is now on Telegram. Click here to join our channel and stay updated with the latest news.

Next