Advertisement
ಕಳೆದ ವರ್ಷ ಇದೇ ಅವಧಿಯಲ್ಲಿ ಬಂದು ವಕ್ಕರಿಸಿದ ಮಹಾಮಾರಿ ಕೊರೊನಾದಿಂದಾಗಿ ಇಲ್ಲಿನ ಬೀಚ್ ಸಂಪೂರ್ಣ ಸ್ತಬ್ದವಾಗಿತ್ತು. ಇದೀಗ ಎರಡನೇಯ ಹಂತದ ಕೊರೊನಾ ಸೋಂಕು ಹರಡುತ್ತಿದೆ ಎಂಬ ಸುದ್ದಿ ಮಾದ್ಯಮಗಳಲ್ಲಿ, ಸಾಮಾಜಿಕ ಜಾಲ ತಾಣಗಳಲ್ಲಿ ಬರಲಾರಂಭಿಸುತ್ತಿದ್ದಂತೆ ಭಯ ಹುಟ್ಟಿಕೊಂಡಿದ್ದು, ವಿಪರೀತ ಸೆಕೆ ಇದ್ದರೂ ಜನರು ಹೊರಬರಲು ಹಿಂದೇಟು ಹಾಕುತ್ತಿದ್ದಾರೆನ್ನಲಾಗಿದೆ. ಕಳೆದ ಮೂರು ವಾರಗಳಿಂದ ಮಲ್ಪೆ ಬೀಚ್‌ಗೆ ಬರುವ ಪ್ರವಾಸಿಗರ ಸಂಖ್ಯೆ ಶೇ. 75ರಷ್ಟು ಕಡಿಮೆಯಾಗಿದ್ದು ಸ್ಥಳೀಯರಷ್ಟೆ ಬರುತ್ತಿದ್ದಾರೆ. ಇತ್ತ ಸೀವಾಕ್ ವೇ, ಉದ್ಯಾವನ, ಸೈಂಟ್ ಮೇರೀಸ್ ದ್ವೀಪಕ್ಕೂ ಜನ ಬರುತ್ತಿಲ್ಲ. ಸಾಮಾನ್ಯವಾಗಿ ವಿಕೆಂಡ್‌ಗಳಲ್ಲಿ ಬೀಚ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಿದ್ದು, ಸರಕಾರದ ನೈಟ್ ಕರ್ಫ್ಯೂನಿಂದಾಗಿ ರವಿವಾರವೂ ವಿರಳ ಸಂಖ್ಯೆಯಲ್ಲಿ ಕಂಡು ಬಂದಿದೆ.
ಕಳೆದ ವರ್ಷ ಕೊರೊನಾದಿಂದಾಗ ಕರಾವಳಿಯ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿತ್ತು. ಪ್ರವಾಸಿಗರಿಲ್ಲದೆ ಬೀಚ್‌ನಲ್ಲಿ ಹೊಟೇಲ್,ಅಂಗಡಿ ಸೇರಿದಂತೆ ಪ್ರವಾಸಿಗರ ಅವಲಂಬಿತ ಉದ್ಯಮಗಳಿಗೆ ಬಿಸಿ ತಟ್ಟಿದೆ. ಈ ನಡುವೆ ಕೊಂಚ ಚೇತರಿಕೆ ಕಂಡಿದ್ದ ಪ್ರವಾಸೋದ್ಯಮಕ್ಕೆ ಇದೀಗ ಮತ್ತೆ ಕೊರೊನಾ ಕಾಟ ಎದುರಾಗಿದ್ದು, ಪ್ರವಾಸಿಗರನ್ನೇ ನಂಬಿಕೊಂಡಿದ್ದ ಫಾಸ್ಟ್‌ಫುಡ್ ಅಂಗಡಿ, ಹೊಟೇಲುಗಳಿಗೆ ವ್ಯಾಪಾರ ಇಲ್ಲದೆ ನಷ್ಟ ಅನುಭವಿಸುವಂತಾಗಿದೆ.
Related Articles
– ರಿಯಾಜ್, ಲಿಂಬು ಪಾನೀಯ ವ್ಯಾಪಾರಿ
Advertisement
ಕಳೆದೊಂದು ತಿಂಗಳಿನಿಂದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಸ್ಥಳೀಯರಷ್ಟೆ ಇಲ್ಲಿ ಸೇರುತ್ತಾರೆ. ಜಿಲ್ಲಾಡಳಿತ ನೀಡಿದ ಸೂಚನೆಯಂತೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಜಾಗೃತಿ ಮೂಡಿಸಲಾಗುತ್ತದೆ. ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸ್ ಮಾಡಲಾಗುತ್ತಿದೆ. ಅಲ್ಲಲ್ಲಿ ಗುಂಪು ಸೇರದಂತೆ ನೋಡಿಕೊಳ್ಳಲಾಗುತ್ತದೆ. ಅಂತರ ಕಾಯ್ದುಕೊಳ್ಳಲು ಮತ್ತು ಮಾಸ್ಟ್ ಧರಿಸುವಂತೆ ನಮ್ಮ ಸಿಬಂದಿಗಳು ಪ್ರವಾಸಿಗರಿಗೆ ಸೂಚನೆಯನ್ನು ನೀಡುತ್ತಿದ್ದಾರೆ.– ಪಾಂಡುರಂಗ ಮಲ್ಪೆ, ಅಧ್ಯಕ್ಷರು, ಮಲ್ಪೆ ಬೀಚ್ ಅಭಿವೃದ್ದಿ ಸಮಿತಿ