Advertisement

ಸಹೋದರನ ಸಾವಾಗಿದೆ ಎಂದ್ರೂ ಬಿಡದ ಪೊಲೀಸರು

12:35 PM Apr 29, 2021 | Team Udayavani |

“ಸರ್‌.. ನಾನು ಮೈಸೂರಿನಿಂದ ಬರುತ್ತಿದ್ದೇನೆ.ನನ್ನ ಸಹೋದರ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾನೆ. ಆಸ್ಪತ್ರೆ ಬಳಿ ಯಾರೂ ಇಲ್ಲ.ಮೈಸೂರಿನಿಂದ ಇಲ್ಲಿಯವರೆಗೂ ಎಲ್ಲಾ ಪೊಲೀಸರು ಬಿಟ್ಟಿದ್ದಾರೆ. ದಯಬಿಟ್ಟು ನನ್ನನ್ನು ಬಿಟ್ಟುಬಿಡಿ ಸರ್‌..’ಇದು..ಬುಧವಾರ ಸಹೋದರನ ಸಾವಿನ ವಿಷಯ ತಿಳಿದು ಸಹೋದರನನ್ನು ಕಾಣಲು ಮೈಸೂರಿನಿಂದ ಬೆಂಗಳೂರಿಗೆ ಕಾರಿನಲ್ಲಿ ಬಂದಿದ್ದ ಯುವಕರನನ್ನು ತಡೆದ ಪೊಲೀಸರು, ವಾಹನ ಸೀಜ್‌ ಮಾಡಿದಾಗ ಯುವಕರು ಪೊಲೀಸರಿಗೆ ಪರಿ ಪರಿಯಾಗಿ ಬೇಡಿಕೊಂಡ ಮನ ಮಿಡಿಯುವ ಘಟನೆ.

Advertisement

ಕೊರೊನಾ ಕರ್ಫ್ಯೂ ಜಾರಿಯಾಗಿರುವ ಹಿನ್ನೆಲೆಯಲ್ಲಿ ನಗರದಾದ್ಯಂತ ಪೊಲೀಸ್‌ ಬಿಗಿ ಬಂದೋ ಬಸ್ತ್ ಮಾಡಲಾಗಿದ್ದು, 10 ಗಂಟೆ ಬಳಿಕ ಅನಗತ್ಯ ಓಡಾಟ ನಡೆಸುತ್ತಿರುವವರ ವಾಹನಗಳನ್ನು ಸಿಬ್ಬಂದಿ ಸೀಜ್‌ಮಾಡುತ್ತಿದ್ದು, ಈ ವೇಳೆ ಮೈಸೂರಿನಿಂದ ಬೆಂಗಳೂರಿಗೆ ಬಂದ ಯುವಕರನ್ನು ಪೊಲೀಸರು ತಡೆದು, ಅವರ ವಾಹನವನ್ನು ಸೀಜ್‌ ಮಾಡಿದ್ದಾರೆ.

“ಸರ್‌.. ತುಂಬಾ ಎಮರ್ಜೆನ್ಸಿ ಇದೆ. ನನ್ನಸಹೋದರ ಸಾವನ್ನಪ್ಪಿದ್ದಾನೆ. ಅಲ್ಲಿಗೆ ಹೋಗಲೇಬೇಕು ಎಂದು ಮನವಿ ಮಾಡಿದರೂ ಸಹ ವಾಹನ ಸೀಜ್‌ ಮಾಡಿರುವುದಕ್ಕೆ ಪೊಲೀಸರ ವಿರುದ್ಧ ಯುವಕರು ಅಸಮಾಧಾನ ಹೊರಹಾಕಿದ್ದಾರೆ. ಕೊನೆಗೆ ಪೊಲೀಸರು, ಯುವಕರ ಸಂಬಂಧಿಕರೊಡನೆ ಫೋನ್‌ನಲ್ಲಿ ಮಾತನಾಡಿ ಸಹೋದರನ ಸಾವಿನ ವಿಚಾರ ಖಚಿತ ಪಡಿಸಿಕೊಂಡು ವಾಹನ ಬಿಟ್ಟುಕಳುಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next