Advertisement

ಕೊರೊನಾದಿಂದ ಕ್ರೀಡೆ- ಸಾಂಸ್ಕೃತಿಕ ಕ್ಷೇತ್ರಕ್ಕೆ ಧಕ್ಕೆ

06:47 PM Sep 27, 2021 | Adarsha |

ಶಿವಮೊಗ್ಗ:ಕ್ರೀಡಾ ಹಾಗೂ ಸಾಂಸ್ಕೃತಿಕಕ್ಷೇತ್ರದ ಮೇಲೆಕೊರೊನಾ ಬೇರೆ ಕ್ಷೇತ್ರಗಳಿಗಿಂತ ಹೆಚ್ಚು ಋಣಾತ್ಮಕಪರಿಣಾಮ ಬೀರಿದೆ. ಪ್ರೇಕ್ಷಕರಿಲ್ಲದೆ ಕ್ರೀಡಾ ಹಾಗೂಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವಂತಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಧ್ಯಕ್ಷಡಾ| ಸತೀಶ್‌ ಕುಮಾರ್‌ ಅಂಡಿಂಜೆ ಅಭಿಪ್ರಾಯಪಟ್ಟರು.

Advertisement

ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ದೈಹಿಕಶಿಕ್ಷಣ ವಿಭಾಗವು ಬಿ.ಪಿಎಡ್‌ ಹಾಗೂ ಎಂ.ಪಿ.ಎಡ್‌ವಿದ್ಯಾರ್ಥಿಗಳಿಗಾಗಿ ವಿಶ್ವವಿದ್ಯಾಲಯದ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಎರಡುದಿನಗಳ ಪಥ ಸಂಚಲನ ಹಾಗೂ ಬ್ಯಾಂಡ್‌ಸೆಟ್‌ಕಾರ್ಯಾಗಾರವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡೆಯಂತಹ ಪ್ರದರ್ಶನಾತ್ಮಕ ಚಟುವಟಿಕೆಗಳನ್ನುಪ್ರೇಕ್ಷಕರ ಮುಂದೆ ಮಾಡಿದರೆ ಮಾತ್ರ ಪ್ರೇಕ್ಷಕರಪ್ರೋತ್ಸಾಹದಿಂದ ಸ್ಫೂರ್ತಿ ಪಡೆದು ಉತ್ಸಾಹ,ಉಲ್ಲಾಸದಿಂದ ಮಾಡಬಹುದು. ಆದರೆ ಕೊರೊನಾಸಂದರ್ಭದಲ್ಲಿಪ್ರೇಕ್ಷಕರ ಮೇಲೆ ನಿರ್ಬಂಧವಿದ್ದ ಕಾರಣ,ಪ್ರೇಕ್ಷಕರಿಲ್ಲದೆ ಖಾಲಿ ಮೈದಾನದಲ್ಲಿ ನಿರುತ್ಸಾಹದಿಂದ ಚಟುವಟಿಕೆಗಳು ನಡೆಯಬೇಕಾಯಿತು ಎಂದು ಅವರು ಹೇಳಿದರು.

ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆಅದೃಷ್ಟಕ್ಕಿಂತ ಪ್ರಯತ್ನ ಮುಖ್ಯ. ವಿದ್ಯಾರ್ಥಿಗಳುಅವಕಾಶಕ್ಕಾಗಿ ಕಾಯದೆ, ಸಿಗುವ ಅವಕಾಶಗಳನ್ನುಕಸಿದುಕೊಳ್ಳುವ ಪ್ರಯತ್ನ ಮಾಡಬೇಕು. ದೈಹಿಕ ಶಿಕ್ಷಣ ಓದುವ ವಿದ್ಯಾರ್ಥಿಗಳಿಗೆ ಅವಕಾಶಗಳು ಅಗಾಧವಾಗಿದ್ದು ಅವುಗಳನ್ನು ಪಡೆಯುವ ಹಾಗೂ ಬಳಸುವ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ಅವರುಕರೆ ನೀಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಯಾವುದಾದರೊಂದು ಪ್ರತಿಭೆ ಅಡಗಿರುತ್ತದೆ.ಅದನ್ನು ಬೆಳಕಿಗೆ ತರಬೇಕಾದರೆ ಅದರ ಅರಿವು ವಿದ್ಯಾರ್ಥಿಗಿರಬೇಕು. ಕೆಲವೊಮ್ಮೆ ಹನುಮಂತನಸಾಮರ್ಥ್ಯವನ್ನು ಜಾಂಬವಂತ ಗುರುತಿಸಿದಂತೆ ವಿದ್ಯಾರ್ಥಿಗಳ ಪ್ರತಿಭೆಯನ್ನು ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಅವರುಅಭಿಪ್ರಾಯಪಟ್ಟರು.

Advertisement

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ನಾತಕೋತ್ತರದೈಹಿಕ ಶಿಕ್ಷಣ ವಿಭಾಗದ ಅಧ್ಯಕ್ಷ ಡಾ| ಗಜಾನನ ಪ್ರಭುಮಾತನಾಡಿ, ವಿದ್ಯಾರ್ಥಿಗಳು ಕಲಿತ ವಿದ್ಯೆಯನ್ನುಸಾರ್ವಜನಿಕ ಪ್ರದರ್ಶನ ಮಾಡಿ ಜನರ ಪ್ರಶಂಸೆ ಪಡೆದಾಗಲೇ ಕಲಿಸಿದ ಗುರುಗಳಿಗೆ ತೃಪ್ತಿಯಾಗುತ್ತದೆ.ಆ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕುಎಂದರು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿಭಾಗವಹಿಸಿದ್ದ ಪಥ ಸಂಚಲನ ಹಾಗೂ ಬ್ಯಾಂಡ್‌ಸೆಟ್‌ ತರಬೇತುದಾರರಾದ ಸಿದ್ಧಪ್ಪ ಜಿ.ಎಂ. ಹಾಗೂ ಸುಂದರ್‌ರಾಜ್‌ ಕೆ.ಆರ್‌.ಈ ಸಂದರ್ಭದಲ್ಲಿ ಮಾತನಾಡಿದರು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next