Advertisement

ತಗ್ಗಿತು ಸಂಚಾರ, ನಿಂತಿತು ಬದುಕಿನ ಬಂಡಿ..

05:09 PM Jun 07, 2021 | Team Udayavani |

ಬೆಂಗಳೂರು: ವಾಹನ ದಟ್ಟಣೆಯಿಂದ ನಗರವಾಸಿಗಳಿಗೆ ತಾತ್ಕಾಲಿಕರಿಲೀಫ್ ಸಿಕ್ಕಿದೆ. ವಾಯುಮಾಲಿನ್ಯ ಮತ್ತು ಶಬ್ದಮಾಲಿನ್ಯ ತಗ್ಗಿದೆ.ಪೊಲೀಸರಿಗೂ ಕೊಂಚ ನೆಮ್ಮದಿ ದೊರಕಿದೆ. ಆದರೆ, ಇದೇ ವಾಹನದಟ್ಟಣೆಯನ್ನು ಅವಲಂಬಿಸಿದ್ದ ನೂರಾರು ಕುಟುಂಬಗಳ ಬದುಕುಬೀದಿಗೆ ಬಿದ್ದಿವೆ!

Advertisement

ಹೌದು, ನಗರದಲ್ಲಿ ಹೆಜ್ಜೆ-ಹೆಜ್ಜೆಗೂ ಬೀಳುವ ಸಿಗ್ನಲ್‌ಗ‌ಳು ವಾಹನಸವಾರರಿಗೆ ಕಿರಿಕಿರಿ ಉಂಟುಮಾಡುತ್ತಿದ್ದವು. ಆದರೆ, ಇದಕ್ಕೆ ಪರ್ಯಾಯವಾಗಿ ಅದೇ ಸಿಗ್ನಲ್‌ಗ‌ಳು ಅಲೆಮಾರಿ ಕುಟುಂಬಗಳ ನಿರ್ವಹಣೆಗೆಆಧಾರವೂ ಆಗಿದ್ದವು. ಕೆಂಪುದೀಪದ ಸಿಗ್ನಲ್‌ ಬೀಳುತ್ತಿದ್ದಂತೆ ಕಾರು,ಜೀಪು, ದ್ವಿಚಕ್ರ ವಾಹನಗಳ ಬಳಿ ಬಂದು ಬಲೂನು, ಪೆನ್ನು, ಲೈಟಿಂಗ್‌ಬಲೂನು, ವಿಮಾನ, ಹೆಲಿಕಾಪ್ಟರ್‌, ಮೊಬೈಲ್‌ ಸ್ಟ್ಯಾಂಡ್‌ ಸೇರಿದಂತೆ ಹತ್ತಾರು ಪ್ರಕಾರದ ಸಾಮಗ್ರಿಗಳನ್ನು ಹಿಡಿದು ಮಕ್ಕಳು-ಮಹಿಳೆಯರು ಧಾವಿಸುತ್ತಿದ್ದರು.

ಹತ್ತು ಸಿಗ್ನಲ್‌ಗ‌ಳಲ್ಲಿ ಒಂದು ಬಾರಿಯಾದರೂಮಾರಾಟ ಆಗುತ್ತಿತ್ತು. ನಿತ್ಯ ಇದರಿಂದ ಪ್ರತಿಯೊಬ್ಬರೂ 500-800ರೂ. ಆದಾಯ ಗಳಿಸುತ್ತಿದ್ದರು.

ಎಲ್ಲೆಲ್ಲಿ ಬೀಡು?

ಎಂ.ಜಿ. ರಸ್ತೆ, ಚಾಲುಕ್ಯರಸ್ತೆ, ಎಲೆಕ್ಟ್ರಾನಿಕ್‌ ಸಿಟಿ ರಸ್ತೆ,ಇಂದಿರಾನಗರ, ವಿಜಯನಗರ, ರಾಜಾಜಿನಗರ ಸೇರಿದಂತೆ ಪ್ರಮುಖಸಿಗ್ನಲ್‌ಗ‌ಳಲ್ಲಿ ರಾಜಸ್ತಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರಸೇರಿದಂತೆ ಉತ್ತರ ಭಾರತದ ನಾನಾ ಭಾಗಗಳಿಂದ ಬಂದ ವಲಸಿಗರು ಬೀಡುಬಿಟ್ಟಿರುತ್ತಿದ್ದರು.

Advertisement

ವಾಹನ ಸವಾರರಿಗೆ ಬೆಳಗ್ಗೆ ಮತ್ತು ಸಂಜೆ ದಟ್ಟಣೆ ವಿಪರೀತ ಇರುತ್ತದೆ.ಸವಾರರು ಗಂಟೆಗಟ್ಟಲೆ ಹಸಿರು ಸಿಗ್ನಲ್‌ಗಾಗಿ ಕಾಯುತ್ತಿದ್ದರೆ, ಇದೇಸಂದರ್ಭದಲ್ಲಿ ಕಣ್ಣುಗಳನ್ನು ಕಿರಿದಾಗಿಸಿಕೊಂಡು, ದಯವಿಟ್ಟುಖರೀದಿಸುವಂತೆ ಮನವಿ ಮಾಡುವ ಮುಖಗಳು ವಾಹನಗಳಕಿಟಕಿಗಳಲ್ಲಿ ಇಣುಕುತ್ತಿದ್ದವು. ಆಗ ಬಹುತೇಕರು ಅವರತ್ತ ತಿರುಗಿಯೂನೋಡುತ್ತಿರಲಿಲ್ಲ. ಕೆಲವರು ಖರೀದಿಸುವ ಮೂಲಕ ಕನಿಕರತೋರಿಸುತ್ತಿದ್ದರು. ಇದರಿಂದ ವಲಸೆ ಕುಟುಂಬಗಳ ನಿರ್ವಹಣೆಸಾಗುತ್ತಿತ್ತು. ಆದರೆ, ಬಹುತೇಕ ಎಲ್ಲ ರಸ್ತೆಗಳು ಈಗ ಸಿಗ್ನಲ್‌ ಕಾರಿಡಾರ್‌ಗಳಾಗಿಬಿಟ್ಟಿವೆ. ಇದರಿಂದ ಕಚೇರಿಗೆ ಹೋಗಿ ಕೆಲಸಮಾಡುವ ಕಿರಿಕಿರಿ ತಪ್ಪಿದೆ.ರಸ್ತೆಗಳ ಮೇಲಿನ ಒತ್ತಡ ತಗ್ಗಿದೆ.ವಾಯುಮಾಲಿನ್ಯವೂ ಇಳಿಮುಖವಾಗಿದೆ. ಆದರೆ, ಅಲೆಮಾರಿಗಳ ನೆಮ್ಮದಿ ಮಾತ್ರಕದಡಿದಂತಾಗಿದೆ.

ತಗ್ಗಿದ ದಟ್ಟಣೆ; ಕದಡಿದ ನೆಮ್ಮದಿ: ನಗರದ ಟ್ರಾಕ್‌ ಬಹುತೇಕರ ನೆಮ್ಮದಿಗೆ ಭಂಗ ಉಂಟುಮಾಡಿರಬಹುದು. ಆದರೆ,ಮತ್ತೂಂದು ದೃಷ್ಟಿಯಲ್ಲಿ ಆ ಸಿಗ್ನಲ್‌ಗ‌ಳು ಆರ್ಥಿಕವಾಗಿ ನಮಗೆ ನೆಮ್ಮದಿತಂದುಕೊಡುತ್ತಿದ್ದವು. ನಾವು ನಿರ್ಮಾಣ ಮತ್ತಿತರ ಕೆಲಸಕ್ಕೆ ತೆರಳಿದರೆ,ಇತ್ತ ಮಹಿಳೆಯರು ಮತ್ತು ಮಕ್ಕಳು ವಿವಿಧ ಉತ್ಪನ್ನಗಳಿಂದ ಕೊಂಚಆದಾಯ ಗಳಿಸುತ್ತಿದ್ದರು. ಇದು ನಗರದಲ್ಲಿ ಜೀವನ ನಡೆಸುವುದರಜತೆಗೆ ಊರಲ್ಲಿ ನಮ್ಮ ವೃದ್ಧ ಪೋಷಕರನ್ನು ಸಾಕಲಿಕ್ಕೂ ನೆರವಾಗುತ್ತಿತ್ತು.ಕೊರೊನಾ ನಗರಕ್ಕೆ ಕಾಲಿಟ್ಟ ದಿನದಿಂದ ಇದೆಲ್ಲದಕ್ಕೂ ಹೊಡೆತಬಿದ್ದಿದೆಎಂದು ವಿಜಯನಗರದ ಮೆಟ್ರೋ ಫ್ಲೆçಓವರ್‌ ಕೆಳಗೆ ವಾಸಿಸುವವಲಸಿಗರ ತಂಡದಲ್ಲಿರುವ ಮಹೇಶ್‌ ಅಲವತ್ತುಕೊಳ್ಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next