ಚಿಕ್ಕಬಳ್ಳಾಪುರ: ಜಿಲ್ಲೆಯ ಕೊರೊನಾ ಸೋಂಕಿತರಿಗೆಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಜಿಲ್ಲಾಉಸ್ತುವಾರಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ಶೇ.15 ಹಾಸಿಗೆ ಮೀಸಲಿಟ್ಟಿರುವುದು ಸಾಕಷ್ಟುವಿವಾದಕ್ಕೆ ಕಾರಣವಾಗಿದೆ.ಜಿಲ್ಲೆಯ ಕೊರೊನಾ ಸೋಂಕಿತರಿಗೆಬೆಂಗಳೂರು ಮಾರ್ಗದಲ್ಲಿರುವ ಸಹಕಾರ ನಗರದಆಸ್ಟರ್, ಕೊಲಂಬಿಯ ಏಷ್ಯಾ ಹಾಗೂ ಬ್ಯಾಪ್ಟಿಸ್ಟ್‌ಆಸ್ಪತ್ರೆಗಳಲ್ಲಿ ಶೇ.15 ಹಾಸಿಗೆ ಮೀಸಲಿಟ್ಟು, ಅದರಮೇಲ್ವಿಚಾರಣೆಗೆ ಅ ಧಿಕಾರಿಗಳನ್ನು ನಿಯೋಜಿಸಲಾಗಿದೆ.
ಇದರಿಂದ ಜಿಲ್ಲೆಯ ಸೋಂಕಿತರಿಗೆಅನುಕೂಲ ಆಗುತ್ತಿದೆ. ಆದರೆ, ಇದು ಬೆಂಗಳೂರಿನಕಾಂಗ್ರೆಸ್ ಶಾಸಕರ ಕಣ್ಣು ಕೆಂಪಾಗಿಸಿದೆ.ಅದರಲ್ಲಿಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಶಾಸಕಕೃಷ್ಣಬೈರೇಗೌಡ ಒಬ್ಬರು.ಜಿಲ್ಲೆಯ ಜನರಿಂದ ಆಕ್ರೋಶ: ತಮ್ಮ ಕ್ಷೇತ್ರದವ್ಯಾಪ್ತಿಗೆ ಬರುವ ಆಸ್ಟರ್ ಆಸ್ಪತ್ರೆಯಲ್ಲಿ ಶೇ.15ಹಾಸಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಕೋವಿಡ್‌ಸೋಂಕಿತರಿಗೆ ಮೀಸಲಿಟ್ಟಿರುವುದಕ್ಕೆ ಅಸಮಾಧಾನವ್ಯಕ್ತಪಡಿಸಿ, ಸಿಎಂಗೆ ಪತ್ರ ಬರೆದಿದ್ದು, ಇದೀಗಕೃಷ್ಣಬೈರೇಗೌಡರ ವಿರುದ್ಧ ಜಿಲ್ಲೆಯ ಜನ ಆಕ್ರೋಶವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಸ್ಥಿತಿ ಗೊತ್ತಿದ್ದರೂ ಅಪಸ್ವರ: ನೀರಾವರಿಸೌಲಭ್ಯಗಳಿಂದ ವಂಚಿತವಾಗಿರುವ ಚಿಕ್ಕಬಳ್ಳಾಪುರಜಿಲ್ಲೆ ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲಿದ್ದರೂನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಕೊರೊನಾದಿಂದಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.ಕೋಲಾರ ಜಿಲ್ಲೆಯವರೂ ಆದ ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಕೃಷ್ಣಬೈರೇಗೌಡ, ಜಿಲ್ಲೆಯಜನರ ಸ್ಥಿತಿಗತಿಯ ಅರಿವು ಇದ್ದರೂ ಕೇವಲ ತಮ್ಮಕ್ಷೇತ್ರದ ವ್ಯಾಪ್ತಿಯ ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿಲಭ್ಯವಿರುವ ಐಸಿಯು ಮತ್ತು ಆಕ್ಸಿಜನ್ ಹಾಸಿಗೆಜಿಲ್ಲೆಯವರಿಗೆ ಮೀಸಲಿಟ್ಟಿರುವ ಆದೇಶ ವಾಪಸ್‌ಪಡೆಯಬೇಕೆಂದು ಸಿಎಂಗೆ ಪತ್ರ ಬರೆದಿರುವುದುಎಷ್ಟು ಸರಿ ಎಂದು ಜಿಲ್ಲಾ ಬಿಜೆಪಿ ಮುಖಂಡರುಪ್ರಶ್ನಿಸಿದ್ದಾರೆ.
ವೈದ್ಯಕೀಯ ಕಾಲೇಜಿಗೆ ಕಿರಿಕಿರಿ: ಈ ಹಿಂದೆಚಿಕ್ಕಬಳ್ಳಾಪುರ ಜಿಲ್ಲೆಗೆ ವೈದ್ಯಕೀಯ ಕಾಲೇಜುಮಂಜೂರು ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಪಸ್ವರ ಎತ್ತಿದ್ದರು. ಈಗ ಜಿಲ್ಲೆಯಸೋಂಕಿತರಿಗೆ ಹಾಸಿಗೆಗಳು ಮೀಸಲಿಡುವ ವಿಚಾರದಲ್ಲಿ ಹೊರಡಿಸಿರುವ ಆದೇಶ ವಿವಾದ ಸೃಷ್ಟಿಸಿದೆ.