Advertisement
ಲಾಕ್‌ಡೌನ್ ವಿಸ್ತರಣೆ ಇಲ್ಲ: ಮಹಾರಾಷ್ಟ್ರ ಮತ್ತು ದಿಲ್ಲಿಯಲ್ಲಿ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಕಾರಣ ಸರಕಾರಗಳು ಲಾಕ್ ಡೌನ್ ವಿಸ್ತರಿಸಲು ಚಿಂತನೆ ನಡೆಸಿವೆ ಎಂಬ ವರದಿಯನ್ನು ಎರಡೂ ರಾಜ್ಯಗಳು ತಳ್ಳಿಹಾಕಿವೆ. ಈ ಕುರಿತು ಶುಕ್ರವಾರ ಸ್ಪಷ್ಟನೆ ನೀಡಿದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಕೆಲವು ವರದಿಗಳು ಜನರಲ್ಲಿ ಗೊಂದಲ ಮೂಡಿಸುತ್ತಿವೆ. ಲಾಕ್ ಡೌನ್ ವಿಸ್ತರಣೆ ಮಾಡಲಾಗುತ್ತದೆ, ಎಲ್ಲ ಮಳಿಗೆಗಳನ್ನೂ ಮುಚ್ಚಲಾಗುತ್ತದೆ ಎನ್ನುವುದು ಸುಳ್ಳು ಸುದ್ದಿ. ಆರ್ಥಿಕ ಚಟುವಟಿಕೆಗಳಿಗೆ ಮರು ಜೀವ ನೀಡಲೆಂದೇ ನಿರ್ಬಂಧವನ್ನು ಹಂತ ಹಂತವಾಗಿ ತೆರವು ಮಾಡುತ್ತಿ ದ್ದೇವೆ. ಹೀಗಿರುವಾಗ, ಮತ್ತೆ ನಿರ್ಬಂಧ ವಿಧಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಜತೆಗೆ, ಇಂಥ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು, ಜನರ ಹಾದಿ ತಪ್ಪಿಸುವಂಥ ಸಂದೇಶಗಳನ್ನು ಫಾರ್ವರ್ಡ್ ಮಾಡು ವುದು ಅಪರಾಧ ಎಂದೂ ಠಾಕ್ರೆ ಪುನರುಚ್ಚರಿಸಿದ್ದಾರೆ. ಇದೇ ವೇಳೆ, ದಿಲ್ಲಿ ಸರಕಾರ ಕೂಡ ಲಾಕ್ ಡೌನ್ ವಿಸ್ತರಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದಿದೆ.
ಮಹಾರಾಷ್ಟ್ರದ ಮತ್ತೂಬ್ಬ ಸಚಿವರಿಗೆ ಸೋಂಕು ದೃಢಪಟ್ಟಿದೆ. ಎನ್ ಸಿಪಿ ನಾಯಕರಾದ ಸಚಿವ ಧನಂಜಯ್ ಮುಂಢೆ ಹಾಗೂ ಅವರೊಂದಿಗೆ ಕಾರ್ಯನಿರ್ವ ಹಿಸುತ್ತಿದ್ದ ಕನಿಷ್ಠ ಐವರು ವೈಯಕ್ತಿಕ ಸಿಬಂದಿಗೆ ಸೋಂಕಿ ರುವುದು ಖಚಿತವಾಗಿದ್ದು, ಎಲ್ಲರನ್ನೂ ಐಸೋಲೇಷನ್‌ನಲ್ಲಿ ಇಡಲಾಗಿದೆ. ಈ ಮೂಲಕ ಮಹಾರಾಷ್ಟ್ರ ಸಂಪುಟದ ಮೂವರು ಸಚಿವರಿಗೆ ಈವರೆಗೆ ಸೋಂಕು ದೃಢಪಟ್ಟಂತಾಗಿದೆ. ಈ ಹಿಂದೆ ಸಚಿವರಾದ ಅಶೋಕ್ ಚವಾಣ್ ಹಾಗೂ ಜಿತೇಂದ್ರ ಅವ್ಹಾದ್ ಅವರಿಗೂ ಸೋಂಕು ತಗಲಿ, ಚಿಕಿತ್ಸೆ ಬಳಿಕ ಅವರಿಬ್ಬರೂ ಗುಣಮುಖರಾಗಿ ದ್ದರು. ಗಮನಾರ್ಹ ಅಂಶವೆಂದರೆ, ಈಗ ಸೋಂಕು ತಗಲಿರುವ ಧನಂಜಯ್ ಮುಂಢೆ ಅವರು ಪ್ರಸಕ್ತ ವಾರದ ಆರಂಭದಲ್ಲೇ ಮುಂಬಯಿ ನಲ್ಲಿ ನಡೆದ ಸಂಪುಟ ಸಭೆಯಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ಸಭೆಯಲ್ಲಿದ್ದ ಇತರರಿಗೂ ಸೋಂಕು ವ್ಯಾಪಿಸಿರಬಹುದೇ ಎಂಬ ಆತಂಕ ಮೂಡಿದೆ.