Advertisement

5 ಸಾವಿರ ಗಡಿ ದಾಟಿದ ಕೋವಿಡ್ ಸೋಂಕಿತರು

04:23 PM Aug 17, 2020 | Suhan S |

ರಾಯಚೂರು: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 5 ಸಾವಿರ ಗಡಿ ದಾಟಿದ್ದು ಆತಂಕ ಮೂಡಿಸಿದರೆ, ಹೆಚ್ಚಿನ ಸಂಖ್ಯೆಯಲ್ಲಿ ನೆಗೆಟಿವ್‌ ಪ್ರಕರಣಗಳು ಬರುತ್ತಿರುವುದು ಸಮಾಧಾನ ತಂದಿದೆ.

Advertisement

ಜಿಲ್ಲೆಯಲ್ಲಿ ರವಿವಾರ 183 ಪಾಸಿಟಿವ್‌ ಪ್ರಕರಣ ದೃಢಪಟ್ಟಿದ್ದು, ಮೂವರು ಮೃತಪಟ್ಟಿದ್ದಾರೆ. ಅದರ ಜತೆಗೆ ಪರೀಕ್ಷೆಗೆ ಶಂಕಿತರ ಮಾದರಿಯಲ್ಲಿ 815 ನೆಗೆಟಿವ್‌ ಬಂದಿವೆ. ಇದರಿಂದ ಶಂಕಿತರಲ್ಲಿ ಪಾಸಿಟಿವ್‌ ಕಾಣಿಸಿಕೊಳ್ಳುತ್ತಿರುವುದು ಹಂತ ಹಂತವಾಗಿ ಹೆಚ್ಚಾಗುತ್ತಿದೆ. ನೆಗಡಿ, ಕೆಮ್ಮು, ಜ್ವರ ಹಾಗೂ ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಪಿ-196119, ಪಿ-185496, ಪಿ-195220 ಸಂಖ್ಯೆಯ ರೋಗಿಗಳು ಮೃತಪಟ್ಟಿದ್ದಾರೆ. ಇನ್ನು ರಾಯಚೂರು ತಾಲೂಕಿನಲ್ಲಿ 103, ಮಾನ್ವಿಯಲ್ಲಿ 24, ಲಿಂಗಸುಗೂರಲ್ಲಿ 9, ಸಿಂಧನೂರಲ್ಲಿ 37, ದೇವದುರ್ಗದಲ್ಲಿ 10 ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿವೆ. ಬಹುತೇಕ ಪ್ರಕರಣಗಳು ಸಂಪರ್ಕದಿಂದಲೇ ಹರಡಿವೆ. ಈವರೆಗೆ 5084 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

ಅವರಲ್ಲಿ ಶನಿವಾರ 71 ಜನ ಸೇರಿದಂತೆ ಈವರಗೆ 3,135 ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ದೇವದುರ್ಗ ತಾಲೂಕಿನಿಂದ 45, ಲಿಂಗಸುಗೂರು 42, ಮಾನ್ವಿ 25, ಸಿಂಧನೂರು 31 ಮತ್ತು ರಾಯಚೂರು ತಾಲೂಕಿನಿಂದ 68 ಸೇರಿದಂತೆ 211 ಜನರ ಗಂಟಲು ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಹಿಂದೆ ಕಳುಹಿಸಿದ್ದ ಫಲಿತಾಂಶಗಳಲ್ಲಿ 815 ವರದಿ ನೆಗೆಟಿವ್‌ ಬಂದಿವೆ. ಫೀವರ್‌ ಕ್ಲಿನಿಕ್‌ ಗಳಲ್ಲಿಂದು 316 ಜನರನ್ನು ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಪಡಿಸಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 591 ಜನರನ್ನು ಸಾಂಸ್ಥಿಕ ಕ್ವಾರೆಂಟೈನ್‌ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಡಳಿತ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next