Advertisement

ಸಾಮಾಜಿಕ ಅಂತರದಿಂದ ಕೋವಿಡ್ ನಿಯಂತ್ರಣ

07:25 AM May 31, 2020 | Suhan S |

ಗೊರೇಬಾಳ: ಸರ್ಕಾರ ಸಾಕಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಆದರೂ ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಪಾಡುವುದರಿಂದ ಮಾತ್ರ ಮಾರಕ ಕೋವಿಡ್ ವೈರಸ್‌ ನಿಯಂತ್ರಣ ಸಾಧ್ಯ ಎಂದು ಜಿಪಂ ಸದಸ್ಯ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮರೇಗೌಡ ವಿರುಪಾಪುರ ಹೇಳಿದರು.

Advertisement

ಸಾಲಗುಂದಾ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರನ್ನು ಸನ್ಮಾನಿಸಿ ಆಹಾರ ಪದಾರ್ಥಗಳ ಕಿಟ್‌ ವಿತರಿಸಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದಿಟ್ಟ ನಿರ್ಧಾರ ಹಾಗೂ ಪೊಲೀಸ್‌, ಆರೋಗ್ಯ, ಕಂದಾಯ, ನಗರಸಭೆ, ಗ್ರಾಪಂ ಹಾಗೂ ಇತರ ಇಲಾಖೆಗಳು ಯುಧ್ದೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಭಾರತದಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ. ಅಮೆರಿಕ, ಇಟಲಿ, ಜರ್ಮನಿ ಸೇರಿದಂತೆ ಅನೇಕ ಮುಂದುವರಿದ ರಾಷ್ಟ್ರಗಳಲ್ಲಿ ಅನೇಕ ಸಾವು ನೋವುಗಳು ಸಂಭವಿಸಿವೆ ಎಂದು ಹೇಳಿದರು.

ಮುಖಂಡರಾದ ಪರಮೇಶಪ್ಪ ಆದಿಮನಿ, ಶರಣೇಗೌಡ ಹೊಸಳ್ಳಿ, ಶ್ರೀನಿವಾಸ ಗುಡಿ, ಹನುಮಂತ ಕುರಿ, ರಾಮಣ್ಣ ಪೂಜಾರ, ಹುಸೇನ್‌, ಜಡಿಯಪ್ಪ ಹೂಗಾರ, ಮಲ್ಲಿಕಾರ್ಜುನ, ಮಲ್ಲಿಕಾರ್ಜುನ ಜೀನೂರು, ರೇಣುಕಪ್ಪ ಬಸಾಪುರ, ಮಾರ್ಕಂಡೇಯ, ಮಂಜುನಾಥ ದಾಸರ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next