Advertisement
62, 54, 47, 31 ವರ್ಷದ ವ್ಯಕ್ತಿಗಳು ಸೇರಿದಂತೆ ಒಟ್ಟು ಐದು ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಎಲ್ಲರೂ ತೀವ್ರ ಉಸಿರಾಟದ ತೊಂದರೆ, ಜ್ವರ, ಕೆಮ್ಮಿನಿಂದ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇದರಿಂದ ಸಾವಿನ ಸಂಖ್ಯೆ 216ಕ್ಕೇರಿದೆ.
ಲಾಕ್‌ಡೌನ್ ಮಾಡಿದ್ದರೂ ಪ್ರತಿನಿತ್ಯ ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವುದು ಆತಂಕ ತಂದೊಡ್ಡಿದ್ದು, ಒಂದೇ ದಿನ ಬರೊಬ್ಬರಿ 1348 ಮಂದಿಗೆ ಸೋಂಕು ಸುತ್ತಿಕೊಂಡಿದೆ. ಮಂಡ್ಯ 468, ಮದ್ದೂರು 169, ಮಳವಳ್ಳಿ 208, ಪಾಂಡವಪುರ 138, ಶ್ರೀರಂಗಪಟ್ಟಣ 120, ಕೆ.ಆರ್.ಪೇಟೆ 72, ನಾಗಮಂಗಲ 150 ಹಾಗೂ ಹೊರ ಜಿಲ್ಲೆಯ 22 ಮಂದಿಗೆ ಸೋಂಕು ದೃಢಪಟ್ಟಿದೆ. ಇದುವರೆಗೂ ಜಿಲ್ಲೆಯಾದ್ಯಂತ 30462 ಪ್ರಕರಣಗಳು ದಾಖಲಾಗಿದೆ. ಇದನ್ನೂ ಓದಿ :ಕೋವಿಡ್ ಸೋಂಕಿಗೆ ಗಣಿ ಅಧಿಕಾರಿ ವಿಲಾಸಿನಿ ಸಾವು : ಕಂಬನಿ ಮಿಡಿದ ನಿರಾಣಿ
Related Articles
ಶುಕ್ರವಾರ ಜಿಲ್ಲೆಯಾದ್ಯಂತ 814 ಮಂದಿ ಸೋಂಕಿನಿoದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೂ 24525 ಮಂದಿ ಚೇತರಿಸಿಕೊಂಡಿದ್ದಾರೆ. ಒಟ್ಟು ಜಿಲ್ಲೆಯಲ್ಲಿ 5720 ಸಕ್ರಿಯ ಪ್ರಕರಣಗಳಿದ್ದು, ಇದರಲ್ಲಿ 624 ಸರ್ಕಾರಿ ಆಸ್ಪತ್ರೆ, 190 ಖಾಸಗಿ ಆಸ್ಪತ್ರೆ, 993 ಮಂದಿ ಕೋವಿಡ್ ಕೇರ್ ಸೆಂಟರ್ ಹಾಗೂ 3913 ಮಂದಿ ಮನೆಗಳಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
4965 ಮಂದಿಗೆ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ 4490 ಆರ್‌ಟಿಪಿಸಿಆರ್ ಹಾಗೂ 475 ಮಂದಿಗೆ ರ‍್ಯಾಪಿಡ್ ಪರೀಕ್ಷೆ ಮಾಡಿಸಿಕೊಂಡಿದ್ದರು. ಇದುವರೆಗೂ ಒಟ್ಟು 6,53,953 ಮಂದಿ ಪರೀಕ್ಷೆಗೊಳಗಾಗಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.