Advertisement

ಕೋವಿಡ್ ಕಾಟ ಕ್ರಮೇಣ ಇಳಿಕೆ : ಹೊಸ ರೂಪಾಂತರಿಗಳು ಹೆಚ್ಚು ಬಾಧಿಸವು ಎಂದ ತಜ್ಞರು

09:06 PM Jul 10, 2021 | Team Udayavani |

ನವದೆಹಲಿ: “ಕೋವಿಡ್ ವೈರಾಣುಗಳ ಸತತವಾಗಿ ರೂಪಾಂತರಗೊಳ್ಳುತ್ತಲೇ ಇರುತ್ತದೆ. ಆದರೆ, ಮನುಷ್ಯರ ಮೇಲೆ ಇವುಗಳ ದುಷ್ಪರಿಣಾಮ ಕ್ರಮೇಣ ಕಡಿಮೆಯಾಬಹುದು. ಅದರಿಂದಾಗಿ, ಮುಂದಿನ ಒಂದೆರಡು ವರ್ಷಗಳಲ್ಲಿ ಕೊರೊನಾ ಪ್ರಕರಣಗಳು ತೀವ್ರವಾಗಿ ಕಡಿಮೆಯಾಗಬಹುದು” ಎಂದು ಕೆಲವು ತಜ್ಞರು ಹೇಳಿದ್ದಾರೆ.

Advertisement

ಎಲ್‌ಎನ್‌ಜೆಪಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಸುರೇಶ್‌ ಕುಮಾರ್‌, ಕೊರೊನಾ ಪ್ರಕರಣಗಳ ಸಂಖ್ಯೆ ಶೂನ್ಯಕ್ಕಿಳಿಯುತ್ತದೆ ಎಂದು ಹೇಳಲಾಗದು. ಆದರೆ, ವೈರಾಣುವಿನ ರೂಪಾಂತರಿಗಳು ಮುಂದೆ ಮನುಷ್ಯರ ಮೇಲೆ ಪ್ರಭಾವ ಬೀರುವುದು ಕಡಿಮೆಯಾಗಬಹುದು” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಚೀನಾದೊಂದಿಗೆ ತಾಲಿಬಾನ್‌ ಸ್ನೇಹ! ಬೀಜಿಂಗ್‌ ನಮ್ಮ “ಫ್ರೆಂಡ್‌’ ಎಂದ ಅಫ್ಘನ್ ನ ಉಗ್ರರು

ಸೀಡ್ಸ್‌ ಆಫ್ ಇನ್ನೋಸೆನ್ಸ್‌ ಸಂಸ್ಥೆಯ ಸಂಸ್ಥಾಪಕಿ ಹಾಗೂ ಐವಿಎಫ್ ತಜ್ಞೆ ಡಾ. ಗೌರಿ ಅಗರ್ವಾಲ್‌ ಪ್ರಕಾರ, “”1918ರ ಸಾಂಕ್ರಾಮಿಕ ವೈರಾಣುಗಳ ಕಾಲಘಟ್ಟವನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ, ಆಗ ಕಾಣಿಸಿಕೊಂಡಿದ್ದ ವೈರಾಣುಗಳ ಸಂಖ್ಯೆ ಕ್ರಮೇಣ ಕಡಿಮೆಯಾಗಿ, ಅವುಗಳಿಂದ ಬಾಧಿತರಾಗುವವರ ಪ್ರಮಾಣವೂ ಗಣನೀಯವಾಗಿ ಇಳಿಕೆಯಾಗಿತ್ತು. ಈಗ ಆರ್ಭಟಿಸುತ್ತಿರುವ ಕೊರೊನಾ ವೈರಾಣುಗಳ ಪ್ರಮಾಣ ಇಳಿಕೆಯಾದ ನಂತರ, 12ರಿಂದ 24 ತಿಂಗಳುಗಳಲ್ಲಿ ಕೊರೊನಾ ವೈರಾಣುಗಳ ದುರಾಕ್ರಮಣ ಕಡಿಮೆಯಾಗುತ್ತದೆ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next