Advertisement
ಪ್ರಾಥಮಿಕ ಮಾಹಿತಿಗಳಂತೆ ಕಾರ್ಕಳ ತಾಲೂಕಿನ ಇಬ್ಬರು, ಕುಂದಾಪುರ ತಾಲೂಕಿನ ಮೂವರು ಹಾಗೂ ಉಡುಪಿ ತಾಲೂಕಿನ ಮೂವರು ರವಿವಾರ ರಾತ್ರಿ ಮತ್ತು ಸೋಮವಾರ ಮೃತಪಟ್ಟಿದ್ದಾರೆ. ಇವರು ಉಡುಪಿ ಮತ್ತು ಬ್ರಹ್ಮಾವರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಸೋಂಕಿತರಲ್ಲಿ ರೋಗ ಲಕ್ಷಣ ಇರುವ 61 ಪುರುಷರು, 25 ಮಹಿಳೆಯರು, ರೋಗ ಲಕ್ಷಣ ಇರದ 110 ಪುರುಷರು, 74 ಮಹಿಳೆಯರಿದ್ದಾರೆ. ಉಡುಪಿ ತಾಲೂಕಿನ 107, ಕುಂದಾಪುರ ತಾಲೂಕಿನ 141, ಕಾರ್ಕಳ ತಾಲೂಕಿನ 15 ಮಂದಿ ಇದ್ದಾರೆ. 60 ಮಂದಿ ಆಸ್ಪತ್ರೆಗಳಲ್ಲಿಯೂ 210 ಮಂದಿ ಮನೆಗಳ ಐಸೊಲೇಶನ್‌ಗೂ ದಾಖಲಾಗಿದ್ದಾರೆ. ಸೋಮವಾರ 376 ಜನರ ಮಾದರಿಗಳನ್ನು ಸಂಗ್ರಹಿಸಿದ್ದು 870 ಜನರ ವರದಿಗಳು ಬರಬೇಕಾಗಿವೆ. 85 ಮಂದಿ ಆಸ್ಪತ್ರೆಗಳಿಂದಲೂ 184 ಮಂದಿ ಮನೆಗಳ ಐಸೊಲೇಶನ್‌ನಿಂದಲೂ ಒಟ್ಟು 269 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಪ್ರಸ್ತುತ 1,372 ಮಂದಿ ಆಸ್ಪತ್ರೆಗಳಲ್ಲಿಯೂ 1,165 ಮಂದಿ ಮನೆಗಳ ಐಸೊಲೇಶನ್‌ನಲ್ಲಿಯೂ ಶುಶ್ರೂಷೆ ಪಡೆಯುತ್ತಿದ್ದಾರೆ.
Related Articles
ಪಡುಬಿದ್ರಿ: ಕೆಳಗಿನ ಪೇಟೆ ಹಾಗೂ ಬೆಂಗ್ರೆಯ ಪುರುಷರಿಬ್ಬರಿಗೆ ಸೋಮವಾರ ಕೋವಿಡ್ ಪಾಸಿಟಿವ್ ವರದಿಯಾಗಿದೆ. ಜ್ವರದಿಂದ ಬಳಲುತ್ತಿರುವ ಕೆಳಗಿನ ಪೇಟೆಯ ವ್ಯಕ್ತಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೋರ್ವನನ್ನು ಹೋಂ ಕ್ವಾರಂಟೈನ್‌ಗೊಳಪಡಿಸಲಾಗಿದೆ.
Advertisement
ಕುಂದಾಪುರ, ಬೈಂದೂರು 69 ಮಂದಿಗೆ ಸೋಂಕುಕುಂದಾಪುರ: ಹಾಲಾಡಿ ಗ್ರಾಮದ 26 ಮಂದಿ ಸೇರಿದಂತೆ ಕುಂದಾಪುರ ತಾಲೂಕಿನಲ್ಲಿ 35 ಮಂದಿ ಹಾಗೂ ಬೈಂದೂರಿನ 34 ಮಂದಿಗೆ ಸೇರಿದಂತೆ ಒಟ್ಟು 69 ಮಂದಿಗೆ ಸೋಮವಾರ ಕೊರೊನಾ ಪಾಸಿಟಿವ್ ಬಂದಿದೆ. ಹಾಲಾಡಿಯ 26 ಮಂದಿ, ಕಟ್‌ಬೆಲೂ¤ರು, ತ್ರಾಸಿ, ಶಂಕರನಾರಾಯಣದ ತಲಾ ಮೂವರು, ಬೈಂದೂರು ತಾಲೂಕಿನ ಶಿರೂರಿನ 13 ಮಂದಿ, ಬಡಾಕೆರೆಯ 6 ಮಂದಿ, ಕಂಬದಕೋಣೆಯ ಐವರು, ಯಡ್ತರೆಯ ನಾಲ್ವರು, ನಾಡ, ಕಾಲೊ¤àಡಿನ ತಲಾ ಇಬ್ಬರು, ಹಳ್ಳಿಹೊಳೆ, ಹೆರಂಜಾಲಿನ ತಲಾ ಒಬ್ಬರಿಗೆ ಬಾಧಿಸಿದೆ. ಹಿಂಜಾವೇಯಿಂದ ಅಂತ್ಯಸಂಸ್ಕಾರ
ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ ಮೃತರಾದ ಕೋವಿಡ್ ಸೋಂಕಿತ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಯನ್ನು ಹಿಂದೂ ಜಾಗರಣ ವೇದಿಕೆಯ ಪ್ರಕಾಶ್ ಕುಕ್ಕೆಹಳ್ಳಿ, ಸಾಜನ್ ಶೆಟ್ಟಿ, ಮಹೇಶ್ ಗಂಗೊಳ್ಳಿ ನವೀನ್ ಗಂಗೊಳ್ಳಿ, ಮಹೇಶ್ ಕುಕ್ಕೆಹಳ್ಳಿ ತಂಡ ನೆರವೇರಿಸಿದ್ದು, ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಯಿತು.