Advertisement

ರೇಷ್ಮೆನಗರಿಯಲ್ಲಿ ಕೊರೊನಾ ನರ್ತನ

12:56 PM Jan 19, 2022 | Team Udayavani |

ರಾಮನಗರ: ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ದಿನೇ ದಿನೇ ಏರುತ್ತಿದೆ. ಕಳೆದೊಂದು ವಾರದಲ್ಲೇ ಕೋವಿಡ್‌ ಸೋಂಕಿತರ ಸಂಖ್ಯೆ ಸಾವಿರ ಸಂಖ್ಯೆ ದಾಟಿದೆ. ಕೋವಿಡ್‌ ಸೋಂಕಿನ 3ನೇ ಅಲೆ ಅಬ್ಬರಿಸಲಾರಂಭಿಸಿದೆ.

Advertisement

ಕಳೆದೊಂದು ವಾರದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. 130 ಮಕ್ಕಳು, 41 ಶಿಕ್ಷಕರು, 50ಕ್ಕೂ ಹೆಚ್ಚು ಪೊಲೀಸರಿಗೆ ಕೋವಿಡ್‌ ಸೋಂಕು ತಗುಲಿದೆ. ಒಂದೆಡೆ ಹೀಗೆ ಸೋಂಕು ವ್ಯಾಪ್ತಿಸುತ್ತಿದೆ. ಮತ್ತೂಂದೆಡೆಕೋವಿಡ್‌ ಲಸಿಕೆ ವಿತರಣೆಯಲ್ಲಿ ಜಿಲ್ಲೆ ಪ್ರಗತಿ ಸಾಧಿಸುತ್ತಿದೆ.

1350 ಮಂದಿಗೆ ಸೋಂಕು: ಜಿಲ್ಲೆಯಲ್ಲಿ ಮಂಗಳವಾರಕ್ಕೆ ಅನ್ವಯಿಸುವಂತೆ 1350 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಚನ್ನಪಟ್ಟಣದಲ್ಲಿ 112, ಕನಕಪುರದಲ್ಲಿ 603, ಮಾಗಡಿಯಲ್ಲಿ 236 ಮತ್ತು ರಾಮನಗರದಲ್ಲಿ 399 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಸರ್ಕಾರಿ ಲೆಕ್ಕಕ್ಕೆ ಸಿಗದ ನೂರಾರು ಮಂದಿಯಲ್ಲೂ ಸೋಂಕು ಇರಬಹುದುಎಂದು ಹೇಳಲಾಗುತ್ತಿದೆ. ಅತಿ ಹೆಚ್ಚು ಸೋಂಕಿತರು ಇರುವ ತಾಲೂಕು ಕನಕಪುರ. ಇಲ್ಲಿಯವರೆಗೆ ಈತಾಲೂಕಿನಲ್ಲಿ 8643 ಮಂದಿ ಸೋಂಕಿತರು ಪತ್ತೆಯಗಿದ್ದಾರೆ. ರಾಮನಗರದಲ್ಲಿ 7803, ಚನ್ನಪಟ್ಟಣದಲ್ಲಿ 5499 ಮತ್ತು ಮಾಗಡಿಯಲ್ಲಿ 4284 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಮಂಗಳವಾರ ಒಂದೇ ದಿನದಲ್ಲಿ ಜಿಲ್ಲೆಯಲ್ಲಿ 385ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಈ ಪೈಕಿ ಕನಕಪುರ ತಾಲೂಕುವೊಂದರಲ್ಲೇ237 ಮಂದಿ ಸೋಂಕಿ ತರು ಪತ್ತೆಯಾಗಿದ್ದಾರೆ.

ಅಧಿಕಾರಿ, ಜನಪ್ರತಿನಿಧಿಗಳಿಗೆ ಸೋಂಕು: ಜಿಪಂ ಸಿಇಒ ಇಕ್ರಮ್‌ ಕೋವಿಡ್‌ಸೋಂಕಿನಿಂದ ಚೇತರಿಸಿಕೊಂಡು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಜಿಲ್ಲಾಧಿಕಾರಿ ಡಾ.ರಾಕೇಶ್‌ ಕುಮಾರ್‌ ಇನ್ನು ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಬೆನ್ನಲ್ಲೇ ರಾಮನಗರ ಜಿಲ್ಲಾ ಎಸ್‌ಪಿ ಗಿರೀಶ್‌ಆ್ಯಂಟಿಜನ್‌ ಪರೀಕ್ಷೆಯಲ್ಲಿ ಕೋವಿಡ್‌ ಸೋಂಕು ಪಾಸಿಟಿವ್‌ ಆಗಿದ್ದಾರೆ.

Advertisement

ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿಯವರು ಮತ್ತು ಕಾಂಗ್ರೆಸ್‌ ಪಾದಯಾತ್ರೆಯಲ್ಲಿ ಭಾಗವ ಹಿಸಿದ್ದ ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ ಅವರಿಗೆ ಸೋಂಕು ತಗುಲಿದೆ. ಹೋಂ ಐಸೋಲೇಷನ್‌ನಲ್ಲಿ 1074 ಮಂದಿ: ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ 138 ಮಂದಿ ಚಿಕಿತ್ಸೆಪಡೆಯುತ್ತಿದ್ದಾರೆ. ಐಸೋಲೇಷನ್‌ ಕೇಂದ್ರಗಳಲ್ಲಿ 58ಮಂದಿಗೆ ಚಿಕಿತ್ಸೆ ದೊರೆಯುತ್ತಿದೆ. 1074 ಮಂದಿ ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕನಕಪುರದ ದಯಾನಂದ ಸಾಗರ್‌ ಆಸ್ಪತ್ರೆಯಲ್ಲಿ 43 ಮಂದಿ,ಸರ್ಕಾರದ ಜೊತೆ ಒಡಂಬಡಿಕೆ ಮಾಡಿಕೊಂಡ ಖಾಸಗಿ ಆಸ್ಪತ್ರೆಗಳಲ್ಲಿ 35, ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಇಬ್ಬರು ಸೋಂಕಿತರಿಗೆ ಚಿಕಿತ್ಸೆ ದೊರೆಯುತ್ತಿದೆ.

ಜಿಲ್ಲೆಯಲ್ಲಿ ಇಲ್ಲಿಯವರೆಗೆ 6 ಲಕ್ಷ 49 ಸಾವಿರದ18 ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಈ ಪೈಕಿ 6ಲಕ್ಷ 22 ಸಾವಿರದ 420 ಮಾದರಿಗಳು ನೆಗೆಟಿವ್‌ ಫ‌ಲಿತಾಂಶ ಬಂದಿದೆ.

ಸಾವಿರ ಗಡಿ ದಾಟಿದ ಸೋಂಕು: ಜನವರಿ ಮಾಸದಆರಂಭದಲ್ಲಿ ಜಿಲ್ಲೆಯಲ್ಲಿ ದಿನನಿತ್ಯದ ಕೋವಿಡ್‌ಸೋಂಕಿ ತರ ಸಂಖ್ಯೆ ಒಂದಂಕಿಯನ್ನು ದಾಟುತ್ತಿರಲಿಲ್ಲ.ಇದೀಗ ದಿನನಿತ್ಯ ಸೋಂಕಿತರ ಸಂಖ್ಯೆ ಮೂರಂಕಿದಾಟಿದೆ. ಕಳೆದ ಎರಡು ವಾರಗಳಲ್ಲಿ ಸೋಂಕಿತರ ಸಂಖ್ಯೆಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ 1 ಸಾವಿರಗಡಿದಾಟಿದೆ. ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ.

ಆಸ್ಪತ್ರೆಗಳಲ್ಲಿ ಜನ ಸಾಗರ! :  ಜಿಲ್ಲೆಯ ಬಹುತೇಕಆಸ್ಪತ್ರೆಗಳಲ್ಲಿ ಜನಸಾಗರವೇ ನೆರೆಯುತ್ತಿದೆ. ನೆಗಡಿ,ಕೆಮ್ಮು, ಜ್ವರದಿಂದ ಬಳಲಿಕೆ ಇದೆ. ಖಾಸಗಿ ವೈದ್ಯಾಲಯಗಳಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಗಣನೀಯವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲೂ ಜನತೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿಯಮ ಉಲ್ಲಂಘನೆ: ಕೋವಿಡ್‌ ಸೋಂಕುಏರುತ್ತಿದೆ. ಹಾದಿ, ಬೀದಿಗಳಲ್ಲಿ ಕೆಮ್ಮುತ್ತ, ಉಗುಳುತ್ತ, ಸೀನುತ್ತ ಸಾಗುವ ಮಂದಿಗೆ ಲೆಕ್ಕವಿಲ್ಲ. ಮಾರಾಟ ಮಳಿಗೆಗಳಲ್ಲಿ ಮಾಸ್ಕ್ ಧರಿಸದವರಿಗೂ ಮನ್ನಣೆ ದೊರೆಯುತ್ತಿದೆ. ಒಂದೆರೆಡು ಹೋಟೆಲ್‌ಗ‌ಳನ್ನು ಹೊರತು ಪಡಿಸಿ ಇನ್ನೆಲ್ಲು ಕೋವಿಡ್‌ ನಿಯಮ ಪಾಲನೆಯಾಗುತ್ತಿಲ್ಲ.

ತಾಲೂಕುವಾರು ಮಕ್ಕಳಲ್ಲಿ ಸೋಂಕು? :  ಜಿಲ್ಲಾದ್ಯಂತ 130ಮಕ್ಕಳಲ್ಲಿ ಸೋಂಕು ದೃಢಪಟ್ಟಿದೆ.ಸರ್ಕಾರಿ, ಖಾಸಗಿ ಶಾಲೆಗಳ ಕಿರಿಯ ಪ್ರಾಥಮಿಕಶಾಲೆಗಳಲ್ಲೇ ಸೋಂಕು ಹೆಚ್ಚು ಕಂಡುಬಂದಿದೆ. ರಾಮನಗರ ತಾಲೂಕಿನಲ್ಲಿ 34 ಮಕ್ಕಳಲ್ಲಿ ಸೋಂಕುಪತ್ತೆಯಾಗಿದೆ. ಮಾಗಡಿ ತಾಲೂಕಿನಲ್ಲಿ 34,ಕನಕಪುರ ತಾಲೂಕಿನಲ್ಲಿ 56 ಮತ್ತು ಚನ್ನಪಟ್ಟಣದಲ್ಲಿ 6 ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ.

ಪೊಲೀಸರಲ್ಲಿ ಸೋಂಕು :  ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಗಳಿಗೆಕೊರೋನಾ ಸೋಂಕು ದೃಢಪಟ್ಟಿದೆ. ಕಾಂಗ್ರೆಸ್‌ ಪಾದಯಾತ್ರೆಗೆ ಬಂದೋಬಸ್ತ್ಗೆ ತೆರಳಿದ್ದ ಬಹುತೇಕ ಸಿಬ್ಬಂದಿಗೆ ರೋಗ ಲಕ್ಷಣ ಕಂಡುಬಂದಿದೆ.ದೂರದ ಜಿಲ್ಲೆಗಳಿಂದ ಆಗಮಿಸಿದ್ದ ಪೊಲೀಸರದ್ದುಅದೇ ಕಥೆ. ರಾಮನಗರ ಜಿಲ್ಲೆಯೊಂದರಿಂದಲೇ900ಕ್ಕೂ ಹೆಚ್ಚು ಸಿಬ್ಬಂದಿ ಪಾದಯಾತ್ರೆಗೆ ನಿಯೋಜನೆಗೊಂಡಿದ್ದರು. ಸಾವಿರಾರು ಮಂದಿ ಕಾಂಗ್ರೆಸ್‌ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಕನಕಪುರ ಟೌನ್‌ ಪೊಲೀಸ್‌ ಠಾಣೆ, ಎಸ್‌ಐ ಎಸ್‌.ಉಷಾನಂದಿನಿ, ಸಂಚಾರಿ ಪೊಲೀಸ್‌ ಠಾಣೆಎಸ್‌ಐ ಭಗವಾನ್‌, ಸಾತನೂರು ಪೊಲೀಸ್‌ ಠಾಣೆಎಸ್‌ಐ ರವಿಕುಮಾರ್‌ ಹಾಗೂ ಆರು ಮಂದಿಪೊಲೀಸ್‌ ಪೇದೆಗಳಿಗೆ ಕೊರೊನಾ ಸೋಂಕು ತಗುಲಿದ್ದು, ಎಲ್ಲರು ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲೆಯಲ್ಲಿ ಒಮಿಕ್ರಾನ್‌ ಸೋಂಕು ಪತ್ತೆಯಾಗಿಲ್ಲ. ಒಮಿಕ್ರಾನ್‌ ಸೋಂಕು ಪತ್ತೆಗೆ ಮಾದರಿಗಳನ್ನು ಬೆಂಗಳೂರಿಗೆ ಕಳುಹಿಸಲಾಗುತ್ತಿದೆ. ಕೋವಿಡ್‌ ಸೋಂಕುಪತ್ತೆಗೆ ಜಿಲ್ಲೆಯಲ್ಲೇ ವ್ಯವಸ್ಥೆ. ತಜ್ಞರಅಭಿಪ್ರಾಯದಂತೆ ಕೋವಿಡ್‌ ಸೋಂಕುರಾಜ್ಯದಲ್ಲಿ ಇನ್ನೊಂದು ವಾರದಲ್ಲಿತೀವ್ರಗೊಂಡು ತಕ್ಷಣ ಇಳಿಕೆಯಾಗುತ್ತದೆ. ನಾಗರಿಕರು ಕೋವಿಡ್‌ ಮಾರ್ಗಸೂಚಿತಪ್ಪದೆ ಪಾಲಿಸಬೇಕಿದೆ. ಡಾ.ನಿರಂಜನ್, ಡಿಎಚ್

ಜಿಲ್ಲೆಯಲ್ಲಿ ಸೋಂಕು ನಿರಂತರ ಹೆಚ್ಚಳವಾಗುತ್ತಿದ್ದರೂ ಸ್ಥಳೀಯ ಸಂಸ್ಥೆಗಳೇಕೆಸಮುದಾಯ ಸ್ಯಾನಿಟೈಸೇಷನ್‌ ಆರಂಭಿಸಿಲ್ಲ ಎಂದು ತಾಪಂ ಮಾಜಿ ಅಧ್ಯಕ್ಷ ಗಾಣಕಲ್‌ ನಟರಾಜ್‌ ಪ್ರಶ್ನಿಸಿದ್ದಾರೆ. ನಗರಸಭೆ, ಪುರಸಭೆ, ಪಂಚಾಯ್ತಿಗಳು ಈವಿಚಾರ ಮರೆತು ಬಿಟ್ಟಿವೆಯೇ? ಸೋಂಕು ಇನ್ನಷ್ಟು ಹೆಚ್ಚಳವಾಗಲಿ ಎಂದು ಕಾಯಲಾಗುತ್ತಿದೆಯೇ? ಎಂದು ಅವರು ಜಿಲ್ಲಾಡಳಿತವನ್ನು ಪ್ರಶ್ನಿಸಿದ್ದಾರೆ. ಗಾಣಕಲ್ ನಟರಾಜ್,ತಾಪಂ ಮಾಜಿ ಅಧ್ಯಕ್ಷ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next