Advertisement

ಕೊರಟಗೆರೆಯಲ್ಲಿ ಮುಂದುವರೆದ ಕೋವಿಡ್ ಅಟ್ಟಹಾಸ; ಇಂದು 39 ಪಾಸಿಟಿವ್ ಪ್ರಕರಣ

06:33 PM Jan 09, 2022 | Team Udayavani |

ಕೊರಟಗೆರೆ : ಕೊರಟಗೆರೆ ತಾಲೂಕಿನಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಒಂದೇ ಶಾಲೆಯ 22 ವಿದ್ಯಾರ್ಥಿಗಳಿಗೆ ನೆನ್ನೆ ಕೊರೋನಾ ಸೋಂಕು ಪತ್ತೆಯಾದ ಬೆನ್ನಲ್ಲೇ ಇಂದು 39 ಪಾಸಿಟಿವ್ ಬರುವ ಮೂಲಕ ಮತ್ತೆ ನಾಗರಿಕರ ನಿದ್ದೆಗೆಡಿಸಿದಂತಾಗಿದೆ.

Advertisement

ಕೊರೋನಾ 3ನೇ ಅಲೆ ಕೊರಟಗೆರೆ ತಾಲೂಕಿನಲ್ಲಿ ಹೆಚ್ಚು  ಉಲ್ಬಣವಾಗುವ ಲಕ್ಷಣಗಳು ಕಂಡುಬರುತ್ತಿದ್ದು, ಶುಕ್ರವಾರ ಒಂದೇ ಶಾಲೆಯ 22 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ಧೃಡಪಟ್ಟ ಬೆನ್ನಲ್ಲೇ ಶನಿವಾರ 9 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 39 ಜನರಿಗೆ ಕೋವಿಡ್-19 ಹರಡುವ ಮೂಲಕ ಮತ್ತೆ ಸಾರ್ವಜನಿಕರ ನಿದ್ದೆಗೆಡಿಸುವಂತಾಗಿದೆ.

ಕೊರಟಗೆರೆ ತಾಲೂಕಿನಲ್ಲಿ ಕೊರೋನಾ 1 ಹಾಗೂ 2ನೇ ಅಲೆ ಬಹಳಷ್ಟು ಜನರಿಗೆ ಸಂಕಷ್ಟಕ್ಕೆ ದೂಡಿ, ಆರ್ಥಿಕ ಸಂಕಷ್ಟದ ಜೊತೆಗೆ ಸಾವು-ನೋವುಗಳ ಸಂಖ್ಯೆಯೂ ಹೆಚ್ಚಾಗಿ ಸಾರ್ವಜನಿಕರ ಜೀವನ ಮೂರಾಬಟ್ಟೆ ಮಾಡಿದ ಕೊರೋನಾ ಮತ್ತೆ ತನ್ನ ಅಟ್ಟಹಾಸ ಮೆರೆಯಲು ಪ್ರಾರಂಭಿಸಿದ್ದು, ಕಳೆದ ಎರಡು ದಿನಗಳಿಂದ 50ಕ್ಕೂ ಹೆಚ್ಚು ಸೋಂಕು ಧೃಡಪಟ್ಟಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಎಡೆಮಾಡಿಕೊಟ್ಟಂತ್ತಾಗಿದೆ.

ಕೊರಟಗೆರೆ ತಾಲೂಕಿನ ಒಂದೇ ಶಾಲೆಯಲ್ಲಿ 22 ಸೋಂಕು ವಿದ್ಯಾರ್ಥಿಗಳಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ಜಂಟಿ ಸಹಯೋಗದಲ್ಲಿ ಕಾರ್ಯೋನ್ಮುಖರಾಗಿ ಅದೇ ಶಾಲೆಯ ಬಹಳಷ್ಟು ವಿದ್ಯಾರ್ಥಿಗಳಿಗೆ ಸ್ವ್ಯಾಬ್ ಟೆಸ್ಟ್ ನಡೆಸಿದ್ದು ಅದರಲ್ಲಿ 9 ವಿದ್ಯಾರ್ಥಿಗಳು, ಅಡುಗೆ-ಸಹಾಯಕರು, ಒಬ್ಬ ಸಿಸ್ಟರ್ ಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಉಳಿದಂತೆ ಇತರ ಭಾಗಗಳಿಂದ 30 ಜನ ಸೋಂಕಿತರು ಪತ್ತೆಯಾಗಿರುವುದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಕಂಡು ಬಂದಂತಾಗಿದೆ.

ಸೋಂಕು‌ ಕಂಡ ವಿದ್ಯಾರ್ಥಿಗಳನ್ನ ವಿದ್ಯಾರ್ಥಿನಿಲಯದಲ್ಲಿ ಪ್ರತ್ಯೇಕ ಕೊಠಡಿ ಗಳಲ್ಲಿ ಕ್ವಾರಂಟೈನ್ ಮಾಡಲಾಗಿ ಉಳಿದ ಇತರ ಸಾರ್ವಜನಿಕರನ್ನ ಅವರವರ ಮನೆಯಲ್ಲಿ ಪ್ರತ್ಯೇಕವಾಗಿ ಹೊಂ ಕ್ವಾರಂಟೈನ್ ಮಾಡಲಾಗಿದೆ.

Advertisement

ತಹಶೀಲ್ದಾರ್ ನಾಹಿದಾ ಜಮ್ ಜಮ್ ಸ್ವತಃ ಮುಂದೆ ನಿಂತು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸ್ವ್ಯಾಬ್ ಟೆಸ್ಟ್ ನಂತರ ಧೃಡಪಟ್ಟವರನ್ನು ಕ್ವಾರಂಟೈನ್ ಮಾಡಲಾಗಿ ಸಾರ್ವಜನಿಕರು ಕೊರೋನಾ  ಸೋಂಕಿನ ಬಗ್ಗೆ ಹೆಚ್ಚು ಜಾಗೃತರಾಗಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next