Advertisement

ಡೆಲ್ಟಾವೂ ಮತ್ತೊಮ್ಮೆ ಬದಲು?

03:47 PM Aug 12, 2021 | Team Udayavani |

ಹೊಸದಿಲ್ಲಿ/ತಿರುವನಂತಪುರ: ಕೇರಳದಲ್ಲಿ ಸೋಂಕಿನ ಡೆಲ್ಟಾ ರೂಪಾಂತರಿ ಮತ್ತೂಂದು ಹೊಸ ರೂಪ ಪಡೆಯುತ್ತಿದೆ. ಹೀಗೆಂದು ಕೇಂದ್ರ ಆರೋಗ್ಯ ಸಚಿವಾಲಯವೇ ದೃಢಪಡಿಸಿದೆ.

Advertisement

ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಆರು ಮಂದಿ ಸದಸ್ಯರ ತಂಡ ನಡೆಸಿದ ಅಧ್ಯಯನದಲ್ಲಿ ಈ ಅಂಶ ವ್ಯಕ್ತವಾಗಿದೆ. ಸುಮಾರು 40 ಸಾವಿರ ಹೊಸ ರೀತಿಯ (ಬ್ರೇಕ್‌ಥ್ರೂ) ಪ್ರಕರಣಗಳು ದೃಢಪಟ್ಟಿವೆ. ಹೀಗಾಗಿ ಡೆಲ್ಟಾ ಕೂಡ ಹೊಸ ರೂಪ ಪಡೆದುಕೊಂಡಿದೆಯೇ ಎಂದು ಸಂಶಯಿಸಲಾಗುತ್ತಿದೆ. ಆ.1ರಿಂದ 20ರ ನಡುವೆ ರಾಜ್ಯದಲ್ಲಿ 4.6 ಲಕ್ಷ ಕೇಸುಗಳು ದೃಢಪಡಲಿವೆ ಎಂದು ಎಚ್ಚರಿಕೆ ನೀಡಿತ್ತು.

23, 500 ಹೊಸ ಕೇಸು:  ಕೇರಳದಲ್ಲಿ ಬುಧವಾರ 1.62 ಲಕ್ಷ ಸೋಂಕು ಪತ್ತೆ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ 23,500 ಹೊಸ ಕೇಸುಗಳು ದೃಢಪಟ್ಟಿವೆ.

ಸಕ್ರಿಯ ಸೋಂಕು ಕನಿಷ್ಠ: 140 ದಿನಗಳಿಗೆ ಹೋಲಿಕೆ ಮಾಡಿದರೆ ದೇಶದಲ್ಲಿ ಸಕ್ರಿಯ ಸೋಂಕು ಸಂಖ್ಯೆ 3,86,351ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಸರಕಾರ ಹೇಳಿದೆ. ಇದೇ ವೇಳೆ ಮಂಗಳವಾರದಿಂದ ಬುಧವಾ ರದ ಅವಧಿಯಲ್ಲಿ 38, 353 ಹೊಸ ಪ್ರಕರಣಗಳು ಮತ್ತು 497 ಮಂದಿ ಅಸುನೀಗಿದ್ದಾರೆ. ದೇಶದಲ್ಲಿ 53.24 ಕೋಟಿ ಡೋಸ್‌ ಲಸಿಕೆಯನ್ನು ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ ಎಂದು ಕೇಂದ್ರ ಸರಕಾರ ಹೇಳಿದೆ.

ಶೀಘ್ರ ಫೈಜರ್‌ ಲಸಿಕೆ? :

Advertisement

ಮೂರು ಕೊರೊನಾ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡಿರುವ ಭಾರತದಲ್ಲಿ ಇನ್ನೊಂದು ಲಸಿಕೆಗೆ ಶೀಘ್ರವೇ ಅನುಮತಿ ಸಿಗುವ ಸಾಧ್ಯತೆ ಇದೆ. ಅಮೆರಿಕದ ಫೈಜರ್‌ ಐಎನ್‌ಸಿ ಮತ್ತು ಜರ್ಮನ್‌ನ ಬಯೋನ್‌ಟೆಕ್‌ ಸಂಸ್ಥೆ ಜಂಟಿಯಾಗಿ ತಯಾರಿಸಿರುವ ಕೊರೊನಾ ಲಸಿಕೆಗೆ ಅನುಮತಿ ಸಿಗುವ ಸಾಧ್ಯತೆಯಿದೆ. ಆ ಲಸಿಕೆಯ 5 ಕೋಟಿ ಡೋಸ್‌ ಖರೀದಿಸುವ ಬಗ್ಗೆ ಭಾರತವು ತಯಾರಕ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು “ವಾಲ್‌ ಸ್ಟ್ರೀಟ್‌ ಜರ್ನಲ್‌’  ವರದಿ ಮಾಡಿದೆ. ಈಗಾಗಲೇ ಅಮೆರಿಕ ಮತ್ತು ಐರೋಪ್ಯ ಒಕ್ಕೂಟಗಳಲ್ಲಿ ಫೈಜರ್‌ ಬಳಕೆಯಲ್ಲಿದೆ.

ಹೈದರಾಬಾದ್‌ನ ಭಾರತ್‌ ಬಯೋಟೆಕ್‌ ತಯಾರಿಸುತ್ತಿರುವ  ಮೂಗಿನ ಮೂಲಕ ನೀಡುವ ಲಸಿಕೆ (ಅಡೆನೊವೈರಲ್‌ ಇಂಟ್ರಾನಸಲ್‌ ಲಸಿಕೆ) ಮತ್ತು ಕೊವ್ಯಾಕ್ಸಿನ್‌ ಲಸಿಕೆಯ ಮಿಶ್ರಣ ಮಾಡಿ ಅಧ್ಯಯನ ನಡೆಸಲು ಡಿಜಿಸಿಐ  ಸಂಸ್ಥೆಗೆ ಅನುಮತಿ ನೀಡಿದೆ. ಲಸಿಕೆ ಮಿಶ್ರಣದ ಕ್ಲಿನಿಕಲ್‌ ಪ್ರಯೋಗಕ್ಕೆ ಅನುಮತಿ ನೀಡಿರುವುದಾಗಿ ಸರಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು “ನ್ಯೂಸ್‌ 18′ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next