ಕಾಸರಗೋಡು: ಜಿಲ್ಲೆಯಲ್ಲಿ ಗುರುವಾರ 319 ಮಂದಿಗೆ ಕೋವಿಡ್ ಪಾಸಿಟಿವ್ ದೃಢವಾಗಿದೆ. 289 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗಲಿದೆ. ವಿದೇಶದಿಂದ ಬಂದ 20 ಮಂದಿ, ಇತರ ರಾಜ್ಯಗಳಿಂದ ಬಂದಿ 10 ಮಂದಿ ಬಾಧಿತರಲ್ಲಿದ್ದಾರೆ.
ಕೇರಳದಲ್ಲಿ 4,351 ಪ್ರಕರಣ
ಕೇರಳದಲ್ಲಿ ಗುರುವಾರ 4,351 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ. 10 ಮಂದಿ ಸಾವಿ ಗೀಡಾಗಿದ್ದಾರೆ.
ಬದಿಯಡ್ಕದ ವೈದ್ಯ ಸಾವು
ಬದಿಯಡ್ಕ: ಕೋವಿಡ್ ಬಾಧಿಸಿದ ಬದಿಯಡ್ಕ ಪೆಟ್ರೋಲ್ ಬಂಕ್ ಬಳಿಯ ಡಾ| ರಾಮ ಪಾಟಾಳಿ (65) ಅವರು ಗುರುವಾರ ಮುಂಜಾನೆ ಸಾವಿಗೀಡಾದರು. ಅಸೌಖ್ಯದ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದೆ ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಧು ಮೇಹ, ಹೃದಯ, ಕಿಡ್ನಿ ಸಂಬಂಧ ಅಸೌಖ್ಯವೂ ಬಾಧಿಸಿತ್ತೆನ್ನಲಾಗಿದೆ. ಸೆ. 16ರಂದು ಅವರನ್ನು ಮನೆಗೆ ಕರೆದುಕೊಂಡು ಬರಲಾಗಿತ್ತು.
ಕೊಡಗು: ವೃದ್ಧೆ ಸಾವು, 52 ಮಂದಿಗೆ ಸೋಂಕು
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಗುರುವಾರ 52 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ.
ಸೋಮವಾರಪೇಟೆ ತಾಲೂಕಿನ ಯಡವನಾಡು ಗ್ರಾಮದ ನಿವಾಸಿ 96 ವರ್ಷದ ವೃದ್ಧೆ ಮೃತಪಟ್ಟವರು. ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಅವರನ್ನು ಕಫ ಸಮಸ್ಯೆಯ ಕಾರಣ ಕುಶಾಲನಗರದ ಆಸ್ಪತ್ರೆಗೆ ದಾಖಲಿಸಿ ಕೋವಿಡ್ ಪರೀಕ್ಷೆ ನಡೆಸಿದಾಗ ಸೋಂಕು ದೃಢಪಟ್ಟಿತ್ತು.