Advertisement

ರಾಜ್ಯದಲ್ಲಿಂದು 41,457 ಕೋವಿಡ್ ಪ್ರಕರಣಗಳು ಪತ್ತೆ : ಪಾಸಿಟಿವಿಟಿ ದರ 22.30% ಕ್ಕೆ ಏರಿಕೆ

07:25 PM Jan 18, 2022 | Team Udayavani |

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಮಂಗಳವಾರ ರಾಜ್ಯದಲ್ಲಿ 41,457 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ವರದಿಯಲ್ಲಿ ದೃಢಪಟ್ಟಿದೆ.

Advertisement

ಕೇವಲ ಬೆಂಗಳೂರು ಒಂದರಲ್ಲೇ 25,595 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲೇ ಪಾಸಿಟಿವಿಟಿ ದರ 22.30% ಕ್ಕೆ ಏರಿಕೆಯಾಗಿದೆ.

ಇಂದು ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ 8,353 ಮಂದಿ ಗುಣಮುಖರಾಗಿದ್ದು, 2,50,381 ಸಕ್ರೀಯ ಪ್ರಕರಣಗಳು ಇವೆ.

ಕೋವಿಡ್ ಸೋಂಕಿನಿಂದ ಇಂದು ಇಪ್ಪತ್ತು ಮಂದಿ ಸಾವನ್ನಪ್ಪಿದ್ದು, ಅದರಲ್ಲಿ ಏಳು ಮಂದಿ ಬೆಂಗಳೂರಿನವರಾಗಿದ್ದರೆ.

ರಾಜ್ಯದಲ್ಲಿ 1,85,872 ಮಂದಿಗೆ ಇಂದು ಪರೀಕ್ಷೆ ನಡೆಸಲಾಗಿದೆ.

Advertisement

ಇದನ್ನೂ ಓದಿ : 18 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ಧನುಷ್ – ಐಶ್ವರ್ಯಾ

ಎಲ್ಲೆಲ್ಲಿ ಎಷ್ಟು ಪ್ರಕರಣ :
ಬಾಗಲಕೋಟೆ 58, ಬಳ್ಳಾರಿ 714, ಬೆಳಗಾವಿ 418 , ಬೆಂಗಳೂರು ಗ್ರಾಮಾಂತರ 116 , ಬೆಂಗಳೂರು ನಗರ 25595 , ಬೀದರ್ 235, ಚಾಮರಾಜನಗರ 198, ಚಿಕ್ಕಬಳ್ಳಾಪುರ 358, ಚಿಕ್ಕಮಗಳೂರು 362, ಚಿತ್ರದುರ್ಗ 402, ದಕ್ಷಿಣಕನ್ನಡ 1058, ದಾವಣಗೆರೆ 257, ಧಾರವಾಡ 726, ಗದಗ 150, ಹಾಸನ 1739, ಹಾವೇರಿ 44, ಕಲಬುರಗಿ 514, ಕೊಡಗು 89, ಕೋಲಾರ 481, ಕೊಪ್ಪಳ 83, ಮಂಡ್ಯ 895, ಮೈಸೂರು 1848, ರಾಯಚೂರು 205, ರಾಮನಗರ 379, ಶಿವಮೊಗ್ಗ 306, ತುಮಕೂರು 1731, ಉಡುಪಿ 801, ಉತ್ತರ ಕನ್ನಡ 587, ವಿಜಯಪುರ 53, ಯಾದಗಿರಿ 55

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next