Advertisement
ರಾಜ್ಯದಲ್ಲಿ ಇದುವರೆಗೆ ಒಟ್ಟಾರೆ 35.8 ಲಕ್ಷ ಸೋಂಕು ಪರೀಕ್ಷೆ ನಡೆಸಲಾಗಿದ್ದು, 4,30,947 ಮಂದಿಗೆ ಸೋಂಕು ದೃಢಪಟ್ಟಿತ್ತು. ಈ ಪೈಕಿ 3,22,454 (ಶೇ.76.1) ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 1,01,537 (ಶೇ.23.5) ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 768 ಮಂದಿ (ಶೇ.0.7) ಐಸಿಯುನಲ್ಲಿದ್ದಾರೆ. ಇದುವರೆಗೆ ಒಟ್ಟು 6,937 ಮಂದಿ (ಶೇ.1.6) ಸಾವನ್ನಪ್ಪಿದ್ದಾರೆ.
ಬೀದರ್: ಪಶು ಸಂಗೋಪನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌವಾಣ್ ಅವರಿಗೆ ಕೋವಿಡ್ ಸೋಂಕು ದೃಢ ಪಟ್ಟಿದೆ. ಅವರಿಗೆ ರೋಗ ಲಕ್ಷಣವಿಲ್ಲದ ಕಾರಣ ಮನೆಯಲ್ಲೇ ಪ್ರತ್ಯೇಕವಾಗಿದ್ದಾರೆ.