Advertisement

covid 19 ವೈರಸ್; ಭಾರತದಲ್ಲಿ 50 ಸಾವಿರಕ್ಕೆ ತಲುಪಿದ ಸಂಖ್ಯೆ,3 ದಿನದಲ್ಲಿ 10 ಸಾವಿರ ಪ್ರಕರಣ

03:40 PM May 07, 2020 | Nagendra Trasi |

ನವದೆಹಲಿ:ಕೋವಿಡ್ 19 ವೈರಸ್ ತಡೆಗಟ್ಟುವ ಹೋರಾಟ ಮುಂದುವರಿದಿರುವ ನಡುವೆಯೇ ಭಾರತದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 50ಸಾವಿರಕ್ಕೆ ತಲುಪಿದೆ. ಕೇರಳದಲ್ಲಿ ಮೊದಲ ಪ್ರಕರಣ ಪತ್ತೆಯಾದ ನಾಲ್ಕು ತಿಂಗಳ ಬಳಿಕ ಕೋವಿಡ್ ಪ್ರಕರಣದ ಸಂಖ್ಯೆ ಏರಿಕೆಯಾಗುತ್ತ ಸಾಗಿತ್ತು.

Advertisement

ಇದೀಗ ದೇಶದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 50,545ಕ್ಕೆ ತಲುಪಿದೆ. ಇದರಲ್ಲಿ ಮಹಾರಾಷ್ಟ್ರದಲ್ಲಿಯೇ ಅತೀ ಹೆಚ್ಚು ಪ್ರಕರಣ ವರದಿಯಾಗಿದೆ. ಕಳೆದ ಮೂರು ದಿನಗಳಲ್ಲಿ ಹತ್ತು ಸಾವಿರ ಸೋಂಕಿತರ ಪತ್ತೆಯಾಗಿದೆ ಎಂದು ಎನ್ ಡಿಟಿವಿ ವರದಿ ಮಾಡಿದೆ.

ಭಾರತದಲ್ಲಿ ಈವರೆಗೆ 14,183 ಮಂದಿ ಕೋವಿಡ್ 19 ವೈರಸ್ ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿದ್ದಾರೆ. ಮೇ17ರವರೆಗೆ ಲಾಕ್ ಡೌನ್ ಮುಂದುವರಿಯಲಿದೆ. ಜಾಗತಿಕವಾಗಿ 37 ಲಕ್ಷ ಕೋವಿಡ್ 19 ವೈರಸ್ ಪ್ರಕರಣ ಪತ್ತೆಯಾಗಿದೆ. ಸುಮಾರು 2.52ಲಕ್ಷ ಮಂದಿ ಸಾವನ್ನಪ್ಪಿದ್ದು, ಅಮೆರಿಕ ಕೋವಿಡ್ 19 ವೈರಸ್ ಗೆ ತತ್ತರಿಸಿ ಹೋಗಿದೆ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next