Advertisement

ದಿಲ್ಲಿಯಲ್ಲಿ ಏರಿಕೆ; ಮುಂಬೈನಲ್ಲಿ ಇಳಿಕೆ

10:20 AM Jan 14, 2022 | Team Udayavani |

ನವದೆಹಲಿ: ದೆಹಲಿ ರಾಜ್ಯದ ವ್ಯಾಪ್ತಿಯಲ್ಲಿ ಸೋಂಕು ಮತ್ತು ಸಾವಿನ ಸಂಖ್ಯೆ ಏರಿಕೆಯಾಗುವತ್ತ ಸಾಗುತ್ತಿದೆ. ಗುರುವಾರ 28,867 ಹೊಸ ಪ್ರಕರಣಗಳು ದೃಢಪಟ್ಟಿವೆ ಮತ್ತು 31 ಮಂದಿ ಅಸುನೀಗಿದ್ದಾರೆ.

Advertisement

ದೇಶದಲ್ಲಿ ಕೊರೊನಾ ಹಾವಳಿ ಶುರುವಾದ ಬಳಿಕ ವಿಶೇಷವಾಗಿ 2021 ಏ.20ರ ಬಳಿಕ ಕಂಡು ಬಂದ ಅತ್ಯಂತ ದೊಡ್ಡ ಏರಿಕೆ ಇದಾಗಿದೆ. ಆ ದಿನ 28,395 ಕೇಸುಗಳು ದೃಢಪಟ್ಟಿದ್ದವು. ಇದರ ಜತೆಗೆ ಸೋಂಕಿನ ಪಾಸಿಟಿವಿ ಪ್ರಮಾಣ ಕೂಡ ಶೇ.29.21ಕ್ಕೇರಿ ದೆ. 2021 ಮೇ 3ರಂದು ಶೇ.29.6 ಪಾಸಿಟಿವಿಟಿ ದಾಖಲಾಗಿತ್ತು. ಬುಧವಾರ 40 ಮಂದಿ ಅಸುನೀಗಿದ್ದರು. ಕಳೆದ ವರ್ಷದ ಜೂ.10ರ ಬಳಿಕ ಅತಿದೊಡ್ಡ ಸಾವಿನ ಪ್ರಮಾಣ ಇದಾಗಿದೆ.

ಇದೇ ವೇಳೆ ಮುಂಬೈನಲ್ಲಿ ಸೋಂಕಿನ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದೆ. 13,702 ಹೊಸ ಪ್ರಕರಣಗಳು ದೃಢಪಟ್ಟಿದ್ದರೆ, ಸಕ್ರಿಯ ಕೇಸುಗಳು 1 ಲಕ್ಷಕ್ಕಿಂತ ಕಡಿಮೆಯಾಗಿವೆ. ಬುಧವಾರ 13,702 ಕೇಸುಗಳು ದೃಢಪಟ್ಟಿದ್ದವು. ಪಾಸಿಟಿವಿಟಿ ಪ್ರಮಾಣ ಕೂಡ ಶೇ.24.38ರಿಂದ ಶೇ.21.73ಕ್ಕೆ ಇಳಿದಿದೆ.

2.47 ಲಕ್ಷ ಕೇಸು; 216 ದಿನಗಳ ಗರಿಷ್ಠ: ದೇಶದಲ್ಲಿ ಬುಧವಾರದಿಂದ ಗುರುವಾರದ ಅವಧಿಯಲ್ಲಿ 2,47,417 ಕೊರೊನಾ ಕೇಸುಗಳು ದೃಢಪಟ್ಟಿವೆ. 216 ದಿನಗಳಲ್ಲೇ ದಾಖ ಲಾದ ಗರಿಷ್ಠ ಸೋಂಕು ಸಂಖ್ಯೆ ಇದಾಗಿದೆ. 380 ಮಂದಿ ಅಸುನೀಗಿದ್ದಾರೆ. ಇದೇ ಅವಧಿಯಲ್ಲಿ 620 ಒಮಿಕ್ರಾನ್‌ ಕೇಸುಗಳ ಸಂಖ್ಯೆಯೂ ದೃಢಪಟ್ಟಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 5,488ಕ್ಕೆ ಏರಿಕೆಯಾಗಿದೆ.

ಬದಲಾಗಲಿದೆ ನೀತಿ: ಒಮಿಕ್ರಾನ್‌ ರೂಪಾಂತರಿ ದೃಢಪಡಿಸಲು ಬೇಕಾಗಿರುವ ಜಿನೋಮ್‌ ಸೀಕ್ವೆನ್ಸಿಂಗ್‌ (ವಂಶವಾಹಿ ಪರೀಕ್ಷೆ) ಬಗೆಗಿನ ನಿಯಮಗಳನ್ನು ಪರಿಷ್ಕರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ದೇಶದ ಜನರ ಮೇಲೆ ಒಮಿಕ್ರಾನ್‌ ಯಾವ ರೀತಿಯಲ್ಲಿ ತೊಂದರೆ ನೀಡುತ್ತದೆ ಎಂಬುದನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ದೃಢಪಡುವ ಕೊರೊನಾ ಸೋಂಕು ಪ್ರಕರಣಗಳನ್ನು ಜಿನೋಮ್‌ ಸ್ವೀಕ್ವೆನ್ಸಿಂಗ್‌ ಪರೀಕ್ಷೆಗೆ ಒಳಪಡಿಸುವಂತೆ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಲಾಗಿದೆ.

Advertisement

ಒಟ್ಟಾರೆ 700 ಸಂಸತ್‌ ಸಿಬ್ಬಂದಿಗೆ ಪಾಸಿಟಿವ್‌ :

ಲೋಕಸಭೆ ಮತ್ತು ರಾಜ್ಯಸಭೆಯ ವಿವಿಧ ಸ್ತರಗಳಲ್ಲಿ ಕಾರ್ಯನಿರ್ವಹಿಸುವವರಲ್ಲಿ ಸೋಂಕು ಪ್ರಕರಣ ಹೆಚ್ಚಾಗಿದೆ. ಜ.9ರಿಂದ ಜ.12ರ ನಡುವೆ 300ಕ್ಕೂ ಅಧಿಕ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಅದಕ್ಕೂ ಮುನ್ನ 400 ಮಂದಿಗೆ ಸೋಂಕು ದೃಢಪ ಟ್ಟಿತ್ತು. ಒಟ್ಟಾರೆಯಾಗಿ 700ಕ್ಕೂ ಅಧಿಕ ಮಂದಿ ಯಲ್ಲಿ ಕೊರೊನಾ ದೃಢಪಟ್ಟಿದೆ. ಹೀಗಾಗಿ, ಜ.31 ರಿಂದ ಶುರುವಾಗಲಿರುವ ಬಜೆಟ್‌ ಅಧಿವೇಶವನ್ನು ಪಾಳಿ (ಶಿಫ್ಟ್)ಯಲ್ಲಿ ನಡೆಸುವ ಸಾಧ್ಯತೆ ಇದೆ.

26,73,385 :

ಆರೋಗ್ಯ, ಮುಂಚೂಣಿ ಕಾರ್ಯಕರ್ತರು ಮತ್ತು ಇತರ ಆರೋಗ್ಯ ಸಮಸ್ಯೆ ಇರುವ 60 ವರ್ಷ ಮೇಲ್ಪಟ್ಟ ವರಿಗೆ ನೀಡಲಾದ ಡೋಸ್‌.

76,32,024  :

ಡೋಸ್‌- 24 ಗಂಟೆಗಳಲ್ಲಿ ನೀಡಲಾಗಿರುವುದು.

ಇದುವರೆಗೆ 3 ಕೋಟಿ 15-18 ವರ್ಷ ವಯಸ್ಸಿನವರಿಗೆ ಮೊದಲ ಡೋಸ್‌  ನೀಡಲಾಗಿದೆ. ಈ ವಯೋಮಿತಿಯಲ್ಲಿ ಇರುವ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ.-ಮನಸುಖ್ ಮಾಂಡವಿಯ, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next