Advertisement
ದೇಶದಲ್ಲಿ ಕೊರೊನಾ ಹಾವಳಿ ಶುರುವಾದ ಬಳಿಕ ವಿಶೇಷವಾಗಿ 2021 ಏ.20ರ ಬಳಿಕ ಕಂಡು ಬಂದ ಅತ್ಯಂತ ದೊಡ್ಡ ಏರಿಕೆ ಇದಾಗಿದೆ. ಆ ದಿನ 28,395 ಕೇಸುಗಳು ದೃಢಪಟ್ಟಿದ್ದವು. ಇದರ ಜತೆಗೆ ಸೋಂಕಿನ ಪಾಸಿಟಿವಿ ಪ್ರಮಾಣ ಕೂಡ ಶೇ.29.21ಕ್ಕೇರಿ ದೆ. 2021 ಮೇ 3ರಂದು ಶೇ.29.6 ಪಾಸಿಟಿವಿಟಿ ದಾಖಲಾಗಿತ್ತು. ಬುಧವಾರ 40 ಮಂದಿ ಅಸುನೀಗಿದ್ದರು. ಕಳೆದ ವರ್ಷದ ಜೂ.10ರ ಬಳಿಕ ಅತಿದೊಡ್ಡ ಸಾವಿನ ಪ್ರಮಾಣ ಇದಾಗಿದೆ.
Related Articles
Advertisement
ಒಟ್ಟಾರೆ 700 ಸಂಸತ್ ಸಿಬ್ಬಂದಿಗೆ ಪಾಸಿಟಿವ್ :
ಲೋಕಸಭೆ ಮತ್ತು ರಾಜ್ಯಸಭೆಯ ವಿವಿಧ ಸ್ತರಗಳಲ್ಲಿ ಕಾರ್ಯನಿರ್ವಹಿಸುವವರಲ್ಲಿ ಸೋಂಕು ಪ್ರಕರಣ ಹೆಚ್ಚಾಗಿದೆ. ಜ.9ರಿಂದ ಜ.12ರ ನಡುವೆ 300ಕ್ಕೂ ಅಧಿಕ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಅದಕ್ಕೂ ಮುನ್ನ 400 ಮಂದಿಗೆ ಸೋಂಕು ದೃಢಪ ಟ್ಟಿತ್ತು. ಒಟ್ಟಾರೆಯಾಗಿ 700ಕ್ಕೂ ಅಧಿಕ ಮಂದಿ ಯಲ್ಲಿ ಕೊರೊನಾ ದೃಢಪಟ್ಟಿದೆ. ಹೀಗಾಗಿ, ಜ.31 ರಿಂದ ಶುರುವಾಗಲಿರುವ ಬಜೆಟ್ ಅಧಿವೇಶವನ್ನು ಪಾಳಿ (ಶಿಫ್ಟ್)ಯಲ್ಲಿ ನಡೆಸುವ ಸಾಧ್ಯತೆ ಇದೆ.
26,73,385 :
ಆರೋಗ್ಯ, ಮುಂಚೂಣಿ ಕಾರ್ಯಕರ್ತರು ಮತ್ತು ಇತರ ಆರೋಗ್ಯ ಸಮಸ್ಯೆ ಇರುವ 60 ವರ್ಷ ಮೇಲ್ಪಟ್ಟ ವರಿಗೆ ನೀಡಲಾದ ಡೋಸ್.
76,32,024 :
ಡೋಸ್- 24 ಗಂಟೆಗಳಲ್ಲಿ ನೀಡಲಾಗಿರುವುದು.
ಇದುವರೆಗೆ 3 ಕೋಟಿ 15-18 ವರ್ಷ ವಯಸ್ಸಿನವರಿಗೆ ಮೊದಲ ಡೋಸ್ ನೀಡಲಾಗಿದೆ. ಈ ವಯೋಮಿತಿಯಲ್ಲಿ ಇರುವ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ.-ಮನಸುಖ್ ಮಾಂಡವಿಯ, ಕೇಂದ್ರ ಸಚಿವ