Advertisement
100 ಮಂದಿಗೆ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ, 119 ಮಂದಿ ಇನ್‌ಫ್ಲೂಯೆನಾl ಲೈಕ್ ಇಲ್‌ನೆಸ್, 27 ಮಂದಿಗೆ ತೀವ್ರ ಉಸಿರಾಟದ ಸಮಸ್ಯೆಯಿಂದ ಸೋಂಕು ತಗಲಿದೆ. 104 ಮಂದಿಯ ಸೋಂಕಿನ ಮೂಲ ಪತ್ತೆಹಚ್ಚಲಾಗುತ್ತಿದೆ. ಪೀಡಿತರಲ್ಲಿ 154 ಮಂದಿ ಮಂಗಳೂರು, 56 ಮಂದಿ ಬಂಟ್ವಾಳ, 26 ಮಂದಿ ಪುತ್ತೂರು, 13 ಮಂದಿ ಸುಳ್ಯ, 48 ಮಂದಿ ಬೆಳ್ತಂಗಡಿ ಹಾಗೂ 53ಮಂದಿ ಹೊರ ಜಿಲ್ಲೆಯವರು.110 ಮಂದಿ ಪುರುಷರು, 72 ಮಹಿಳೆಯರು ರೋಗ ಲಕ್ಷಣಗಳನ್ನು ಹೊಂದಿದ್ದಾರೆ. 88 ಮಂದಿ ಪುರುಷರು, 80 ಮಂದಿ ಮಹಿಳೆಯರು ಯಾವುದೇ ರೋಗ ಲಕ್ಷಣ ಹೊಂದಿಲ್ಲ. ಮೃತರಲ್ಲಿ ಐವರು ಮಂಗಳೂರು, ಓರ್ವ ಬಂಟ್ವಾಳ, ಇಬ್ಬರು ಬೆಳ್ತಂಗಡಿ, ಓರ್ವ ಹೊರ ಜಿಲ್ಲೆಯವರಾಗಿದ್ದಾರೆ.