ಬೀಜಿಂಗ್: ನೆರೆ ರಾಷ್ಟ್ರ ಚೀನದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ ಒಂದು ವಾರದ ಅವಧಿಯಲ್ಲಿ ಅಂದರೆ ಜ. 13ರಿಂದ 19ರ ವರೆಗೆ 13 ಸಾವಿರ ಮಂದಿ ಮೃತಪಟ್ಟಿದ್ದಾರೆ ಎಂದು ಚೀನದ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಕೊರೊನಾ ವಿರುದ್ಧ ಸರಕಾರ ರೂಪಿಸಿದ್ದ ಶೂನ್ಯ ಕೋವಿಡ್ ನಿಯಮ ವನ್ನು ತೆರವು ಗೊಳಿಸಿದ ಬಳಿಕ ಒಂದು ತಿಂಗಳ ಅವಧಿಯಲ್ಲೇ ಅಂದರೆ ಜ. 12ರ ವರೆಗೆ 60 ಸಾವಿರ ಮಂದಿ ಮೃತ ಪಟ್ಟಿದ್ದಾರೆ ಎನ್ನಲಾಗಿತ್ತು. ಆ ಬಳಿಕ ಸೋಂಕಿ ನಿಂದ ಮರಣಿಸುತ್ತಿರುವವರ ಸಂಖ್ಯೆ ತೀವ್ರ ವಾಗಿದ್ದು, ಕೇವಲ 7 ದಿನಗಳಲ್ಲಿ 13 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಇದು ಆಸ್ಪತ್ರೆಗೆ ದಾಖಲಾಗಿ ಸತ್ತವರ ಸಂಖ್ಯೆ ಯಾಗಿದ್ದು, ಮನೆಯಲ್ಲೇ ಮೃತಪಟ್ಟವರ ಸಂಖ್ಯೆ ಸೇರಿಸಲಾಗಿಲ್ಲ ಎಂದು ಸರಕಾರ ಹೇಳಿದೆ.